ನವಚೇತನ ಯುವಕ ಮಂಡಲ (ರಿ )ಬೊಳುಬೈಲು, ಕೆ. ಎಂ. ಸಿ. ಆಸ್ಪತ್ರೆ ಅತ್ತಾವರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾಲ್ಸೂರು ವಲಯ, ವಿವೇಕಾನಂದ ವಿದ್ಯಾಸಂಸ್ಥೆ ವಿನೋಬನಗರ ಜಾಲ್ಸೂರು ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವು ವಿವೇಕಾನಂದ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟನೆಯನ್ನು ಸುಧಾಕರ ಕಾಮತ್, ಸಂಚಾಲಕರು ವಿವೇಕಾನಂದ ವಿದ್ಯಾಸಂಸ್ಥೆ, ವಿನೋಬನಗರ ಜಾಲ್ಸೂರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಚೆನ್ನಕೇಶವ, ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸುಳ್ಯ, ಹರ್ಬರ್ಟ್ ಮಾರಿಯೋ ಫಿರ್ರೆರ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಕೆಎಂಸಿ ಆಸ್ಪತ್ರೆ ಅತ್ತಾವರ ಹಾಗೂ ಜಯಪ್ರಸಾದ್, ಮುಖ್ಯ ಶಿಕ್ಷಕರು, ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿನೋಬನಗರ ಭಾಗವಹಿಸಿದರು. ಸಭೆಯ ಅಧ್ಯಕ್ಷತೆಯನ್ನು ಸುಧೀರ್ ನೆಕ್ರಾಜೆ ವಹಿಸಿದರು. ಧರ್ಮೇಶ್ ಕಾಯರಡ್ಕ ಸ್ವಾಗತಿಸಿ, ಪದ್ಮನಾಭ ನೆಕ್ರಾಜೆ ಧನ್ಯವಾದ ಮಾಡಿ ಪ್ರಸಾದ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕರು ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಂಡರು.ಔಷಧಿಯನ್ನು ಉಚಿತವಾಗಿ ಯುವಕ ಮಂಡಲ ವತಿಯಿಂದ ನೀಡಲಾಯಿತು.
- Friday
- November 22nd, 2024