Ad Widget

ಸಂಪಾಜೆ ಸಾಮಾನ್ಯ ಸಭೆ- ಕ್ರಿಯಾ ಯೋಜನೆ ತಯಾರಿ

ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷರಾದ ಸುಂದರಿ ಮುಂದಡ್ಕ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಬಾಭವನದಲ್ಲಿ ನಡೆಯಿತು. ಈ ಸಭೆಯಲ್ಲಿ 34 ಲಕ್ಷದ 15 ನೇ ಹಣಕಾಸು ಕ್ರಿಯಾ ಯೋಜನೆ, 10 ಲಕ್ಷ ಸ್ವಂತ ನಿಧಿಯ ಕ್ರಿಯಾ ಯೋಜನೆ ಮಾಡಲಾಯಿತು ಗ್ರಾಮದ ಪ್ರಮುಖ ರಸ್ತೆಗಳಿಗೆ ಅನುದಾನ ವಿಂಗಡಿಸಲಾಯಿತು. ಚಟ್ಟೆಕಲ್ಲು ರಸ್ತೆ ,ಗ್ರಾಮ ಪಂಚಯತ್ ರಸ್ತೆ, ನೆಲ್ಲಿಕುಮೇರಿ ರಸ್ತೆ , ದರ್ಖಾಸ್ತು ರಸ್ತೆ , ಬಾಚಿಗದ್ದೆ ರಸ್ತೆ ,ಅಲಡ್ಕ ರಸ್ತೆ , ಕಡೆಪಾಲ ಜನತಾ ಕಾಲನಿ ಹಲವು ರಸ್ತೆಗಳ ಕಾಂಕ್ರೀಟಿಕರಣ, ಚರಂಡಿ ದುರಸ್ತಿ, ಬಸ್ ತಂಗುದಾನಗಳ ದುರಸ್ತಿ, ಸಬಾ ಭವನ ದುರಸ್ತಿ, ಹೈ ಮಾಸ್ಟ್ ದೀಪ ದುರಸ್ತಿ ಕಾಮಗಾರಿಗಳನ್ನು ನಡೆಸಲು ತೀರ್ಮಾನಿಸಲಾಯಿತು. ಉದ್ಯೋಗ ಖಾತರಿ ಯೋಜನೆಯ ಹಲವು ಬಾವಿ ರಚನೆ , ಕೃಷಿ ಕಾಮಗಾರಿಗಳನ್ನು ನಡೆಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಸೋಮಶೇಖರ್, ಹಮೀದ್.ಜಿ. ಕೆ., ಲೂಕಸ್, ನಾಗೇಶ್, ಸುಂದರ, ಷಣ್ಮುಗಂ, ಅಬೂಸಾಲಿ, ಯಶೋಧ , ಆಶಾ ವಿನಯ್, ಲತೀಶ , ಕುಸುಮ, ಉಷಾ, ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ತಾಲೂಕು ಪಂಚಾಯತ್ ಸದಸ್ಯೆ ಪುಷ್ಪಾ ಮೇದಪ್ಪ , ಪಿಡಿಓ ನಾಗರಾಜ್, ಕಾರ್ಯದರ್ಶಿ ವಿದ್ಯಾಧರ ಉಪಸ್ಥಿತರಿದ್ದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!