Ad Widget

ಬೆಳ್ಳಾರೆ : 50ನೇ ವರ್ಷದ ಶ್ರೀ ಗಣೇಶೋತ್ಸವ

ಸಾರ್ವಜನಿಕ ಸಾಂಸ್ಕೃತಿಕ ಗಣೇಶೋತ್ಸವ ಸಮಿತಿ(ರಿ.) ಮತ್ತು ವಿರಾಟ್ ಫ್ರೆಂಡ್ಸ್ (ರಿ.) ಬೆಳ್ಳಾರೆ ಇದರ ಆಶ್ರಯದಲ್ಲಿ 50ನೇ ವರ್ಷದ ಶ್ರೀ ಗಣೇಶೋತ್ಸವವನ್ನು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ನಡೆಸಲಾಯಿತು. ಈ ಬಾರಿ ಕೋವಿಡ್ ಹಾವಳಿಯಿಂದಾಗಿ ಅದ್ದೂರಿಯ ಆಚರಣೆ ನಡೆಸದೆ ಸರಳವಾಗಿ ಗಣೇಶೋತ್ಸವ ಆಚರಿಸಲಾಯಿತು.

. . . . . . . . .

ಗಣಪತಿ ಮೂರ್ತಿ ಪ್ರತಿಷ್ಠಾಪನೆ, ಪೂಜೆ ಹಾಗೂ ಮಹಾಪೂಜೆ ನೆರವೇರಿತು. ಬೆಳ್ಳಾರೆ ಶ್ರೀ ಅಜಪಿಲ ಮಹಾಲಿಂಗೇಶ್ವರ ಭಜನಾ ಮಂಡಳಿಯ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. 50ನೇ ವರ್ಷದ ಶ್ರೀ ಗಣೇಶೋತ್ಸವದ ಅಂಗವಾಗಿ ನೂತನ ಕಾಣಿಕೆ ಡಬ್ಬಿ ಬಿಡುಗಡೆಗೊಂಡಿತು.

. . . . . . .

ಬೆಳ್ಳಾರೆ ಗ್ರಾಮ ಸ್ವರಾಜ್ ತಂಡದ ನಾಯಕರಾದ ಆರ್.ಕೆ.ಭಟ್ ಕುರುಂಬುಡೇಲು ನೂತನ ಕಾಣಿಕೆ ಡಬ್ಬಿಯನ್ನು ನಿವೃತ್ತ ಶಿಕ್ಷಕ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟು ಸುಭಾಶ್ಚಂದ್ರ ರೈ ತೋಟರವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಮಿಥುನ್ ಶೆಣೈ, ಅಧ್ಯಕ್ಷ ಸಚಿನ್ ರೈ ಪೂವಾಜೆ, ಕಾರ್ಯದರ್ಶಿ ರಂಜನ್ ತಡಗಜೆ, ಕೋಶಾಧಿಕಾರಿ ಮಂಜುನಾಥ ಹೆಗ್ಡೆ, ಜೊತೆ ಕಾರ್ಯದರ್ಶಿ ಪ್ರಸಾದ್ ಆಚಾರ್ಯ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಂಜೆ ಮಹಾಪೂಜೆಯ ಬಳಿಕ ಗೌರಿಹೊಳೆಯಲ್ಲಿ ಮೂರ್ತಿ ಜಲಸ್ತಂಭನ ನಡೆಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading