Ad Widget

ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕಿನ ವಿವಿಧ ನಿವೃತ್ತ ಶಿಕ್ಷಕರಿಗೆ ಸನ್ಮಾನ

ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕಿನಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಬೆಳ್ಳಾರೆ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಗೌರವಿಸಲಾಯಿತು‌.
ನಿವೃತ್ತ ಶಿಕ್ಷಕರಾದ ಕಲ್ಮಕಾರು ಶಾಲೆಯ ಮುಖ್ಯೋಪಾಧ್ಯಾಯಿನಿ ಬೋಳಿಯಮ್ಮ ಡಿ, ಮುರುಳ್ಯ ಶಾಲೆಯ ಮುಖ್ಯೋಪಾದ್ಯಾಯ ಬಾಲಕೃಷ್ಣ ಕೆ, ಕದಿಕಡ್ಕ ಶಾಲೆಯ ದೈ.ಶಿಕ್ಷಕಿ ಪ್ರೀಡಾ ವಿಡಾ ಲುವಿನ್, ಜಾಲ್ಸೂರು ಶಾಲೆಯ ಮುಖ್ಯೋಪಾದ್ಯಾಯಿನಿ ಪುಷ್ಪಾವತಿ ಕೆ, ಮಂಡೆಕೋಲು ಶಾಲಾ ಮುಖ್ಯೋಪಾದ್ಯಾಯಿನಿ ವನಜಾಕ್ಷಿ ವಿ, ಹಾಸನಡ್ಕ ಶಾಲೆಯ ಸಹಶಿಕ್ಷಕ ಗಣಪತಿ ಭಟ್ , ಬೋಳುಬೈಲು ಶಾಲೆಯ ಕೋಮಲಾ, ಕಲ್ಮಡ್ಕ ಶಾಲೆಯ ಮುಖ್ಯೋಪಾದ್ಯಾಯಿನಿ ಶಶಿಕಲಾ, ಗುತ್ತಿಗಾರು ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ಕಮಲಾಕ್ಷಿ.ಪಿ, ಏನೆಕಲ್ಲು ಶಾಲೆಯ ಯಮುನಾ, ನೆಟ್ಟಾರು ಶಾಲೆಯ ಮುಖ್ಯೋಪಾದ್ಯಾಯರಾಗಿದ್ದ ರಾಘುನಾಥ ಕೆ, ಶೇಣಿ ಶಾಲೆಯ ಲೋಕನಾಥ ಬಿ.ಕೆ, ಪಡ್ಪಿನಂಗಡಿ ಶಾಲೆಯ ರುಕ್ಮಿಣಿ ಬಿ.ಸಿ, ಕುಕ್ಕುಜಡ್ಕ ಶಾಲೆಯ ರಾಜೀವಿ,ಪಂಜ ಪ್ರೌಢಶಾಲೆಯ ಮೋನಪ್ಪ ಎಂ, ಕಲ್ಲುಗುಂಡಿ ಶಾಲೆಯ ದುಲೈನ್ ಲೇನಾ ಸಿಕ್ವೆರಾ, ಏನೆಕಲ್ಲು ಶಾಲೆಯ ಮುಖ್ಯೋಪಾದ್ಯಾಯಿನಿ ಗಾಯತ್ರಿ , ಚೊಕ್ಕಾಡಿ ಪ್ರೌಢಶಾಲಾ ದೈ.ಶಿ. ಚಂದ್ರಶೇಖರ ಅವರನ್ನು ಸಮ್ಮಾನಿಸಲಾಯಿತು.

. . . . . . . . .

ಈ ಸಂದರ್ಭ ನ.ಪಂ‌.ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಜಿಲ್ಲಾ ಉಪಯೋಜನಾ ಸಮನ್ವಯ ಅಧಿಕಾರಿ ಎಸ್.ಪಿ. ಶಿವಕುಮಾರ್, ತಾಲೂಕು ತಹಶೀಲ್ದಾರ್ ಅನಿತಾ ಲಕ್ಷ್ಮಿ, ಬೆಳ್ಳಾರೆ ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಪನ್ನೆ, ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಚಂದ್ರಶೇಖರ ಪೇರಾಲು, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ ಮಹಾದೇವ್, ಬೆಳ್ಳಾರೆ ಪಬ್ಲಿಕ್ ಸ್ಕೂಲ್ ನ ಮುಖ್ಯೋಪಾದ್ಯಾಯಿನಿ ಹಸಿನಾ ಬಾನು , ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಸುಳ್ಯ ಘಟಕದ ಸಂಘದ ಅಧ್ಯಕ್ಷ ಶ್ರೀಧರ್ ಗೌಡ,ಹಾಗೂ ವಿವಿಧ ಶಾಲೆಗಳ ಶಿಕ್ಷ ಕ ವರ್ಗದವರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading