Ad Widget

ಗುತ್ತಿಗಾರು ಪ್ರೌಢಶಾಲೆಗೆ 100% ಫಲಿತಾಂಶ – ಬಡತನ ಮೆಟ್ಟಿ ನಿಂತು ಸಾಧನೆ ಮಾಡಿದ ನಿಶ್ಮಿತಾಳಿಗೆ 623 ಅಂಕ

2020-21 ನೇ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಪ್ರೌಢಶಾಲಾ ವಿಭಾಗ 100% ಫಲಿತಾಂಶ ದಾಖಲಾಗಿದೆ. ನಿಶ್ಮಿತಾ.ಕೆ.ಜಿ 625/623 ಪಡೆದು ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ ಎಲ್ಲಾ 83 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಇದರಲ್ಲಿ ಡಿಸ್ಟಿಂಕ್ಷನ್ 6 ನಿಶ್ಮಿತಾ.ಕೆ.ಜಿ 625/623
ಅಶಿತ್.ಹೆಚ್. 625/574,ಅನುಷಾ.ಯಂ.ವಿ 579,ಸಿಂಚನಗೌರಿ.549,ಸುಷ್ಮಿತಾ. ಬಿ.ಎ.565,ತೃಪ್ತಿ ಕೆ.ಟಿ.538,ಪ್ರಥಮ ದರ್ಜೆ 30 ದ್ವಿತೀಯ ದರ್ಜೆ 30 ಪಾಸ್ 17. ನಿಶ್ಮಿತಾ.ಕೆ.ಜಿ ಈಕೆ ಗುತ್ತಿಗಾರು ಗ್ರಾಮದ ಕುದ್ರಡ್ಕ ಮೊಗ್ರದ ಗಣಪಯ್ಯ ನಾಯ್ಕ್ ಹಾಗೂ ತಾಯಿ ರೇವತಿ ಇವರ ಮಗಳು. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಕುಟುಂಬ ಮಗಳ ಸಾಧನೆಗೆ ಹೆಮ್ಮೆ ಪಡುತ್ತಿದ್ದಾರೆ. ಈಕೆ ಮುಂದಿನ ಬಾಳು ಬೆಳಗಲು ವಿದ್ಯಾಭ್ಯಾಸಕ್ಕೆ ಸಹೃದಯಿಗಳ ಸಹಕಾರ ಪ್ರೋತ್ಸಾಹ ಅಗತ್ಯವಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!