Ad Widget

ಬದಲಾಗಲಿದೆ ಕ್ರೀಡಾ ಜಗತ್ತು! ಕರೊನಾ ನಂತರ ಹೇಗಿರುತ್ತೆ ಕ್ರೀಡೆ; ಸ್ವಚ್ಛತೆಗೆ ಆದ್ಯತೆ, ಸಾಮಾಜಿಕ ಅಂತರ ಅಗತ್ಯ

ಮಹಾಮಾರಿ ಕರೊನಾದಿಂದಾಗಿ ಈಗ ಜಗತಿಕ ಕ್ರೀಡಾಲೋಕ ಸ್ತಬ್ಧಗೊಂಡಿದೆ. ಸದ್ಯಕ್ಕೆ ಕ್ರೀಡಾ ಚಟುವಟಿಕೆಗಳ ಪುನರಾರಂಭ ಸುಲಭವಲ್ಲ. ಆದರೆ ಮುಂದೊಂದು ದಿನ ಖಂಡಿತ ವಾಗಿಯೂ ಕ್ರೀಡಾಸ್ಪರ್ಧೆಗಳು ಮತ್ತೆ ಶುರುವಾಗಲಿವೆ. ಆದರೆ, ಅದು ಕರೊನಾ ಬರುವುದಕ್ಕೆ ಮುಂಚೆ ಇದ್ದುದಕ್ಕಿಂತ ಸಾಕಷ್ಟು ಬದಲಾವಣೆಗಳನ್ನು ಕಾಣಲಿದೆ ಮತ್ತು ಈ ಬದಲಾವಣೆಯೂ ಅಗತ್ಯವಾಗಿರುತ್ತದೆ. ಮುಂದಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳು ಹೇಗಿರಬಹುದು ಎಂಬ ಪ್ರಶ್ನೆಗೆ ಭಾರತದ ಪ್ರಮುಖ ಕ್ರೀಡಾತಾರೆಯರು ನೀಡಿರುವ ಕಾಳಜಿ ಮತ್ತು ಆಶಾವಾದದ ಉತ್ತರ ಇಲ್ಲಿದೆ.

. . . . . . .

ಹೆಚ್ಚು ಜಾಗೃತರಾಗುವರು:
ಇದು ನಮ್ಮ ಜೀವಮಾನದ ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಸವಾಲು. ಚೆಂಡಿನ ಹೊಳಪಿಗಾಗಿ ಎಂಜಲು ಹಚ್ಚಲು ಆಟಗಾರರು ಹಿಂದೇಟು ಹಾಕಬಹುದು. ಹೈ ಫೈವ್ ಮತ್ತು ಅಪ್ಪಿಕೊಳ್ಳುವುದಕ್ಕೂ ಆಟಗಾರರು ಹಿಂದೇಟು ಹಾಕಬಹುದು. ಆಟಗಾರರು ಹೆಚ್ಚು ಜಾಗೃತರಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವರು. ಸಚಿನ್ ತೆಂಡುಲ್ಕರ್ ಕ್ರಿಕೆಟ್ ದಿಗ್ಗಜ

ಭಾರತೀಯ ಕ್ರೀಡೆಗೆ ಲಾಭ:
ಕ್ರೀಡೆ ಜನರನ್ನು ಒಗ್ಗೂಡಿಸುವ ಸಾಧನ. ಕ್ರೀಡೆಯಲ್ಲಿ ಸುರಕ್ಷತೆ ಹೆಚ್ಚಬಹುದು. ಆದರೆ ಕ್ರೀಡೆಯ ಮೇಲಿನ ಆಕರ್ಷಣೆ ಹಾಗೆಯೇ ಉಳಿಯಲಿದೆ. ಕೋವಿಡ್-19 ಭಾರತದ ಲಾಭದಾಯಕವೆನ್ನಬೇಕು. ಯಾಕೆಂದರೆ ವಿದೇಶದಲ್ಲಿ ತರಬೇತಿ ಕಡಿಮೆಯಾಗುವುದರಿಂದ ಭಾರತದಲ್ಲೇ ಕ್ರೀಡಾ ವ್ಯವಸ್ಥೆಗಳು ಸುಧಾರಣೆ ಕಾಣಬಹುದು.
📞ಅಭಿನವ್ ಬಿಂದ್ರಾ ಒಲಿಂಪಿಕ್ಸ್ ಸ್ವರ್ಣ ವಿಜೇತ

ಕ್ರೀಡೆಗಿಂತ ಕ್ರೀಡಾಪಟುಗಳಿಗೆ ನಷ್ಟ :
ಜಗತ್ತು ಚೇತರಿಕೆ ಕಾಣಲು ಸಾಕಷ್ಟು ಸಮಯಬೇಕು. ಕ್ರೀಡಾಪಟುಗಳು ಕ್ರೀಡಾಜೀವನದ ಅಮೂಲ್ಯ ವರ್ಷವನ್ನು ಕಳೆದುಕೊಳ್ಳಬಹುದು. ಆದರೆ ಕ್ರೀಡೆ ಖಂಡಿತ ಮುಂದಿನ ದಿನಗಳಲ್ಲಿ ಸಹಜಸ್ಥಿತಿಗೆ ಬರಲಿದೆ.
📞ದ್ರೋಣವಲ್ಲಿ ಹರಿಕಾ, ಭಾರತದ ನಂ. 2 ಚೆಸ್ ಆಟಗಾರ್ತಿ

ಪ್ರೇಕ್ಷಕರೂ ಜಾಗೃತರಾಗಬೇಕು:
ಕ್ರೀಡೆಗೆ ಪ್ರೇಕ್ಷಕರನ್ನು ಮರಳಿ ಕರೆತರುವುದು ಸುಲಭವಲ್ಲ. ಕರೊನಾ ಭೀತಿ ಇದ್ದೇ ಇರುತ್ತದೆ. ಆದರೆ ದೀರ್ಘಕಾಲದಿಂದ ಮನೆಯಲ್ಲೇ ಇರುವ ಜನರು, ಕ್ರೀಡೆಯನ್ನು ವೀಕ್ಷಿಸುವ ಮೊದಲ ಅವಕಾಶ ಸಿಕ್ಕಾಗಲೇ ಸ್ಟೇಡಿಯಂಗೆ ಆಗಮಿಸಬಹುದು. ಆದರೆ ಅವರೂ ಹೆಚ್ಚು ಜಾಗೃತರಾಗಿರುವುದು ಅಗತ್ಯ.
📞ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸರ್

ಪ್ರವಾಸ ಕೈಗೊಳ್ಳಲು ಭಯ: ಹಿಂದೆಲ್ಲ ನಾವು ಸಾಕಷ್ಟು ಪ್ರವಾಸ ಕೈಗೊಳ್ಳುತ್ತಿದ್ದೆವು. ಆದರೆ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪುನರಾರಂಭಗೊಂಡಾಗ ಚೀನಾ, ಕೊರಿಯಾ ಮಾತ್ರವಲ್ಲದೆ ಯುರೋಪ್ ದೇಶಗಳಿಗೂ ಪ್ರಯಾಣಿಸಲು ಎಲ್ಲರಿಗೂ ಭಯವಾಗಬಹುದು. ಸೋಂಕು ಹರಡುವ ಭೀತಿ ಯಾವಾಗಲೂ ತಲೆಯಲ್ಲಿರುತ್ತದೆ.
📞ಸಾಯಿ ಪ್ರಣೀತ್ ಬ್ಯಾಡ್ಮಿಂಟನ್ ಆಟಗಾರ

ಲಸಿಕೆ ಸಿಕ್ಕರಷ್ಟೇ ಸಹಜಸ್ಥಿತಿ: ಕ್ರೀಡೆ ಬದಲಾಗಲಿದೆ. ನನ್ನದು ಸಂಪರ್ಕ ಕ್ರೀಡೆ. ನಮ್ಮ ಅಭ್ಯಾಸ ಜತೆಗಾರರ ಆಯ್ಕೆಯಲ್ಲೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಕ್ರೀಡಾಪ್ರೇಮಿಗಳು ಮತ್ತೆ ಕ್ರೀಡೆಯನ್ನು ನೋಡಲು ಬಂದೇ ಬರುತ್ತಾರೆ. ಕರೊನಾಗೆ ಲಸಿಕೆ ಕಂಡು ಹಿಡಿದ ಬಳಿಕವಷ್ಟೇ ಎಲ್ಲವೂ ಸಹಜಸ್ಥಿತಿಗೆ ಮರಳಬಹುದು. ಅದುವರೆಗೆ ತರಬೇತಿಯೂ ಹಿಂದಿನಂತಿರದು.
📞ಮೇರಿ ಕೋಮ್ ಬಾಕ್ಸರ್

ಸಾಮಾಜಿಕ ಅಂತರವಿರಲಿ: ಕ್ರೀಡೆ ಪುನರಾರಂಭಗೊಂಡಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯವಾಗಿರಲಿದೆ. ಆದರೆ ಬಾಕ್ಸಿಂಗ್, ಕುಸ್ತಿಯಂಥ ಸಂಪರ್ಕ ಕ್ರೀಡೆಗಳಲ್ಲದೆ, ಹಾಕಿ, ಫುಟ್​ಬಾಲ್​ನಂಥ ಕ್ರೀಡೆಗಳಲ್ಲಿ ನಿಕಟ ಸೆಣಸಾಟದ ವೇಳೆ ದೈಹಿಕ ಸಂಪರ್ಕವನ್ನು ಹೇಗೆ ನಿಭಾಯಿಸುವರು ಎಂಬುದನ್ನು ಕಾದುನೋಡಬೇಕು.
📞ಸರ್ದಾರ್ ಸಿಂಗ್ ಹಾಕಿ ಮಾಜಿ ನಾಯಕ

ಎದುರಾಳಿಗೆ ಹ್ಯಾಂಡ್​ಶೇಕ್ ಮಾಡಲ್ಲ:
ಮುಂದಿನ ದಿನಗಳಲ್ಲಿ ವಿಮಾನ ಪ್ರಯಾಣದ ವೇಳೆ ಹೆಚ್ಚು ಜಾಗರೂಕಳಾಗಿರುತ್ತೇನೆ. ನಾನು ಪ್ರತಿ ಬಾರಿ ಪಂದ್ಯದ ಬಳಿಕ ಎದುರಾಳಿ ಜತೆಗೆ ಹ್ಯಾಂಡ್ ಶೇಕ್ ಮಾಡುತ್ತಿದ್ದೆ. ಆದರೆ ಇನ್ನು ಮುಂದೆ ಅದು ಬದಲಾಗಬಹುದು.
📞ಜೋಶ್ನಾ ಚಿನ್ನಪ್ಪ ಸ್ಕಾವಷ್ ಆಟಗಾರ್ತಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!