ಸುಳ್ಯ ತಾಲೂಕಿನ ಉಬರಡ್ಕ ಪಂಚಾಯತ್ ವ್ಯಾಪ್ತಿಯ ಕೊಡಿಯಾಲಬೈಲು ಹಿಂದು ರುದ್ರ ಭೂಮಿ ಕೆಲವು ವರ್ಷಗಳ ಹಿಂದೆ ನಿರ್ಮಾಣವಾಗಿ ಸರಕಾರವು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಿತ್ತು.. ನೂರಾರು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದಿದ್ದರು.
ಆದರೆ ಕೆಲವು ರಾಜಕೀಯ ಮುಖಂಡರು ರಾಜಕೀಯ ದುರುದ್ದೇಶದಿಂದ ಕಳೆದ ರಾತ್ರಿ ಅಪಘಾತದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ತಂದು ಶವಸಂಸ್ಕಾರ ಮಾಡಲು ಮುಂದಾದಾಗ ಅದನ್ನು ವಿರೋಧಿಸಿ ಹಿಂದೂ ರುದ್ರಭೂಮಿಗೆ ಬೀಗ ಜಡಿದ ಪ್ರಕರಣವನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಒಂದು ವೇಳೆ ಸಾರ್ವಜನಿಕರಿಗೆ ಈ ಸ್ಮಶಾನದಿಂದ ತೊಂದರೆಯಾಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ ಸರಿಪಡಿಸಿಕೊಳ್ಳಬೇಕು ಹೊರತು ಲಕ್ಷಾಂತರ ಸರಕಾರಿ ಹಣದಿಂದ ನಿರ್ಮಾಣವಾದ ಸ್ಮಶಾನಕ್ಕೆ ಬೀಗ ಜಡಿದು ಸಾರ್ವಜನಿಕರಿಗೆ ತೊಂದರೆ ನೀಡುವುದು ಸರಿಯಲ್ಲವೆಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ಕೊಡಿಯಾಲಬೈಲು ಹಿಂದೂ ರುದ್ರಭೂಮಿಗೆ ಹಾಕಿರುವ ಬೀಗವನ್ನು ತೆರವುಗೊಳಿಸಿ ಮತ್ತೆ ಹಿಂದಿನ ರೀತಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಬೇಕು ಅದೇ ರೀತಿ ಈ ಸ್ಮಶಾನದಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷ ಮಹೇಶ್ ಉಗ್ರಾಣಿ ಮನೆ ಅವರ ನೇತೃತ್ವದಲ್ಲಿ ಸುಳ್ಯ ತಾಲೂಕು ಪಂಚಾಯತ್ ಯೋಜನಾಧಿಕಾರಿ ಹಾಗೂ ಸುಳ್ಯದ ತಹಶೀಲ್ದಾರರಿಗೆ ಆಗ್ರಹ ಪತ್ರವನ್ನು ಸಲ್ಲಿಸಿದೆ. ಒಂದು ವೇಳೆ ಬೀಗವನ್ನು ತೆರವುಗೊಳಿಸದಿದ್ದಲ್ಲಿ ಮುಂದಿನ ದಿನ ಉಗ್ರವಾಗಿರುವಂತಹ ಪ್ರತಿಭಟನೆ ಮಾಡಬೇಕಾದೀತು ಎಂದು ಆಗ್ರಹ ಪತ್ರದಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಉಪಾಧ್ಯಕ್ಷರಾದ ಜಯಂತ್ ಮಡಪ್ಪಾಡಿ, ಮುಖಂಡರಾದ ಪ್ರಶಾಂತ್ ಕಾಯರ್ತೋಡಿ, ಸಂದೀಪ್ ಉಬರಡ್ಕ, ನಿಕೇಶ್ ಉಬರಡ್ಕ, ರಮೇಶ್ ಇರಂತಮಜಲು, ಲಕ್ಷ್ಮಣ ಉಗ್ರಾಣಿಮನೆ, ಗುರುಪ್ರಸಾದ್ ಉಗ್ರಾಣಿಮನೆ,ಮನೋಜ್ ಜಾಲಬಾಗಿಲು,ದೀಪಕ್ ರಾಜ್ ಜಾಲಬಾಗಿಲು ,ಪ್ರಶಾಂತ್ ಕನ್ಯಾನ ಉಪಸ್ಥಿತರಿದ್ದರು.
- Saturday
- November 23rd, 2024