ಗೂನಡ್ಕ ಬೀಜದಕಟ್ಟೆ ನಿವಾಸಿ ರಾದಮ್ಮ ಪೂಜಾರಿಯವರಿಗೆ ಪ್ರಾಕೃತಿಕ ವಿಕೋಪ ಪರಿಹಾರ ಯೋಜನೆಯಡಿಯಲ್ಲಿ ಮನೆ ದುರಸ್ತಿಗೆ ರೂ 12500 ಸಹಾಯಧನ ಚೆಕ್ಕನ್ನು ಗ್ರಾಮ ಪಂಚಾಯತ್ ಸದಸ್ಯರಾದ ಸೋಮಶೇಖರ್ ಕೊಯಿಂಗಾಜೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್, ಸದಸ್ಯರುಗಳಾದ ಜಗದೀಶ್ ರೈ, ಸುಮತಿ ಶಕ್ತಿವೇಲು, ಎಸ್ ಕೆ. ಹನೀಫ್, ಗ್ರಾಮ ಕರಣಿಕರಾದ ಮಿಯಾ ಶಾಬ್ ಮುಲ್ಲಾ, ಪಿಡಿಓ ಜಯಪ್ರಕಾಶ್ ಹಾಗೂ ಫಲಾನುಭವಿ ಹಾಜರಿದ್ದರು.
- Friday
- November 1st, 2024