Ad Widget

ಕೊಲ್ಲಮೊಗ್ರ ಆರೋಗ್ಯ ಕೇಂದ್ರ ಸಿಬ್ಬಂದಿ ಕಾರ್ಯಕ್ಕೆ ಆರೋಗ್ಯ ಸಚಿವರಿಂದ ಮೆಚ್ಚುಗೆ

ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ ಕರ್ತವ್ಯವನ್ನು ಗುರುತಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮೂಲಕ ಮೆಚ್ಚುಗೆ ಸಲ್ಲಿಸಿದ್ದಾರೆ.

. . . . . .

ಕೋವಿಡ್ ಪರೀಕ್ಷೆಗೆ ಗಂಟಲ ದ್ರವ ಸಂಗ್ರಹಿಸಲು ಕೊಲ್ಲಮೊಗ್ರು ಆರೋಗ್ಯ ಕೇಂದ್ರದ ಲ್ಯಾಬ್ ಸಿಬ್ಬಂದಿ ನವ್ಯಾ, ಎಎನ್‌ಎಂ ಚಂದ್ರಾವತಿ, ಆಶಾ ಕಾರ್ಯಕರ್ತೆ ಯಶೋದಾ, ಹೇಮಾವತಿಯಾವರು ಪಿಪಿಇ ಕಿಟ್ ಧರಿಸಿ ಬಿದಿರಿನ ಪಾಲ ದಾಟುತ್ತಿರುವ ಚಿತ್ರವೊಂದು ಜಾಲತಾಣದಲ್ಲಿ ಹರಿದಾಡಿತ್ತು. ಇದಕ್ಕೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ “ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಕೊಲ್ಲಮೊಗ್ರ ಪ್ರಾಥಮಿಕ ಕೇಂದ್ರದ ಸಿಬ್ಬಂದಿ ಕೋವಿಡ್ ಸ್ವಾಬ್ ಸಂಗ್ರಹಿಸಲು ದಟ್ಟವಾದ ಕಾಡಿನಲ್ಲಿ ನದಿ ದಾಟಿಕೊಂಡು ಹೋಗುತ್ತಿರುವುದು. ಪ್ರಕೃತಿ ವಿಕೋಪದ ನಡುವೆಯೂ ಧೈರ್ಯವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ.” ಎಂದು ಟ್ವೀಟ್ ಮಾಡಿತ್ತು. ಇದನ್ನು ಉಲ್ಲೇಖಿಸಿ ಆರೋಗ್ಯ ಸಚಿವ ಸುಧಾಕರ್, ‘ಪ್ರವಾಹ ಪರಿಸ್ಥಿತಿ ನಡುವೆಯೂ ಕರ್ತವ್ಯ ಪ್ರಜ್ಞೆ ಮೆರೆದಿರುವ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ ಸೇವಾ ಮನೋಭಾವ ಹಾಗೂ ಕಾರ್ಯತತ್ಪರತೆ ಅನುಕರಣೀಯ’ ಎಂದು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಸಿಬ್ಬಂದಿ ಕಲ್ಮಕಾರು ಗ್ರಾಮದ ಇಡ್ಯಡ್ಕ ಎಂಬ ಪ್ರದೇಶದಲ್ಲಿ ಸಿಬ್ಬಂದಿಗಳಾದ ನವ್ಯಾ.ಎ.ಎನ್, ಎಂ.ಚಂದ್ರಾವತಿ, ಆಶಾ ಕಾರ್ಯಕರ್ತೆ ಯಶೋಧ, ಹೇಮಾವತಿಯವರು ಕೋವಿಡ್ ಪರೀಕ್ಷೆಗೆ ಗಂಟಲ ಮಾದರಿ ಸಂಗ್ರಹಕ್ಕೆ ತೆರಳುತ್ತಿರುವ ಚಿತ್ರ ಇದಾಗಿದೆ. ಕೊಲ್ಲಮೊಗ್ರು ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿ ಜನವಸತಿ ಪ್ರದೇಶಗಳಿಗೆ ತೆರಳಲು ನದಿ, ತೋಡು, ಪಾಲ, ಸೇತುವೆ, ಕಚ್ಚಾ ರಸ್ತೆಗಳಲ್ಲಿ ಬಳಸಬೇಕಿದೆ. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮಾಡಲು ಜಿಲ್ಲಾಡಳಿತ ಕೋವಿಡ್ ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅದರಂತೆ ಆರೋಗ್ಯ ಇಲಾಖಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!