Ad Widget

ಕೊಡಗು ಸಂಪಾಜೆ ಶಾಲೆಗೆ ಲ್ಯಾಪ್ ಟಾಪ್ ಕೊಡುಗೆ

ಬದುರುಲ್ ಹುದಾ ಗಲ್ಫ್ ಕಮಿಟಿ ಸಂಪಾಜೆ ಇದರ ವತಿಯಿಂದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಸಂಪಾಜೆ ಇಲ್ಲಿಗೆ ಲ್ಯಾಪ್ ಟಾಪ್ ಕೊಡುಗೆಯಾಗಿ ನೀಡಲಾಯಿತು. ಆನ್ಲೈನ್ ತರಗತಿಗಳು ನಡೆಯುವ ಈ ಲಾಕ್ಡೌನ್ ಸಮಯದಲ್ಲಿ ತರಗತಿಗಳು ಯಾವುದೇ ಅಡಚಣೆಗಳು ಇಲ್ಲದೆ ನಡೆಯಲು ಗಲ್ಫ್ ಕಮಿಟಿ ವತಿಯಿಂದ ತಾವು ಕಲಿತ ಶಾಲೆಗೆ ಲ್ಯಾಪ್‌ಟಾಪ್ ನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಪಾಜೆ ಮಸೀದಿಯ ಉಪಾಧ್ಯಕ್ಷರಾದ ತಾಜ್ ಮಹಮ್ಮದ್ ಸಂಪಾಜೆ, ಗಲ್ಫ್ ಕಮಿಟಿ ಸದಸ್ಯರಾದ ಉಮ್ಮರ್ ತಾಜ್ ಸಂಪಾಜೆ, ಹಾರಿಸ್ ಸಂಪಾಜೆ, ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಧರ ಬೈಲು, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಾವಿತ್ರಿ, ಅಧ್ಯಾಪಕರು, ಹಳೆ ವಿದ್ಯಾರ್ಥಿಗಳಾದ ಮುಹಮ್ಮದ್ ಕುಂಞಿ ಸಂಪಾಜೆ ಇವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!