Ad Widget

ಒಬ್ಬಂಟಿ

ನೀನು ನನ್ನವನಲ್ಲ, ನಾನು ನಿನ್ನವನಲ್ಲ…
ಎಲ್ಲರೂ ಒಬ್ಬಂಟಿಗಳೇ ಈ ಜಗದಲ್ಲಿ…
ಹುಟ್ಟಿನಲ್ಲೂ ಒಬ್ಬಂಟಿ, ಸಾವಿನಲ್ಲೂ ಒಬ್ಬಂಟಿ…
ನೀನು ನೋವಿನಲ್ಲೂ ಒಬ್ಬಂಟಿ,
ಕಷ್ಟದಲ್ಲೂ ಒಬ್ಬಂಟಿ…
ಹೇಗಿದ್ದರೂ ಬದುಕಲೆಬೇಕು ಈ ಬದುಕಿನಲಿ…
ನೀನು ಎದ್ದು ನಿಲ್ಲಲೆಬೇಕು ಈ ಬದುಕಿನಲಿ…

. . . . .

ಗೆದ್ದಾಗ ಬರುವರು ನೀನು ನಮ್ಮವನು ಎಂದು…
ಸೋತಾಗ ಹೋಗುವರು ತಿರುಗಿಯು ನೋಡದೇ…
ನಿನ್ನ ಕನಸಿಗೆ ಕೊಳ್ಳಿ ಇಟ್ಟು, ಮನಸ್ಸಿಗೆ ಬೆಂಕಿ ಇಟ್ಟು ನೋಡುವರು ಇಲ್ಲಿ ಹಲವರು,
ನಿಂತು ನೋಡುವರು ಇಲ್ಲಿ ಹಲವರು…
ಯೋಚಿಸು ಯಾರು ಇಲ್ಲಿ ನಿನ್ನವರು…
ನೀನು ಯೋಚಿಸು ಯಾರು ಇಲ್ಲಿ ನಿನ್ನವರು…

ನಿನ್ನವರು ಯಾರೂ ಇಲ್ಲ ಎಂದು ನೀ ಕೊರಗಬೇಡ…
ನಿನ್ನ ಕಷ್ಟದಲ್ಲೂ ನಿನ್ನ ಜೊತೆಗೆ ನಿಲ್ಲುವರು,
ಯಾರು ನಿನ್ನ ನೋವಿನಲ್ಲೂ ನಿನ್ನ ಜೊತೆಗೆ ನಿಲ್ಲುವರು…
ಅವರೇ ನಿನ್ನ ನಿಜವಾದ ಬಂಧುಗಳು,
ಅವರೇ ನಿನ್ನ ಆಪ್ತ ಮಿತ್ರರು…
ಯಾರು ನಿನ್ನ ಜೊತೆಗೆ ಇಲ್ಲದೇ ಇದ್ದರೇನು…?
ನಿನ್ನವರು ನಿನ್ನ ಜೊತೆಗೆ ನಿಲ್ಲುವರು,
ಎಂದೆಂದಿಗೂ ನಿನ್ನ ಜೊತೆಗೆ ನಿಲ್ಲುವರು…

✍ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!