ಪಂಜ ಹೋಬಳಿ ನಾಡ ಕಛೇರಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಜು.19 ರಂದು ಸಚಿವ ಎಸ್ ಅಂಗಾರ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ,ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಕಂದಾಯ ನಿರೀಕ್ಷಕ ಎಂ ಎಲ್ ಶಂಕರ, ಡಾ. ರಾಮಯ್ಯ ಭಟ್ , ಶಿವರಾಮಯ್ಯ ಕರ್ಮಜೆ ,ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಗಫೂರ್,
ಪಂಜ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಉಪಾಧ್ಯಕ್ಷ ಲಿಗೋಧರ ಆಚಾರ್ಯ, ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ, ಚಿನ್ನಪ್ಪ ಗೌಡ ಚೊಟ್ಟೆಮಜಲು, ವಾಚಣ್ಣ ಕೆರೆಮೂಲೆ ,ಪಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಸಾದ್ , ಕಾರ್ಯದರ್ಶಿ ಕೆ ಪದ್ಮಯ್ಯ,ಮಾಜಿ ಅಧ್ಯಕ್ಷರಾದ ಕಾರ್ಯಪ್ಪ ಗೌಡ ಚಿದ್ಗಲ್ಲು, ಶ್ರೀಮತಿ ಮಂಜುಳಾ ಅತ್ಯಡ್ಕ,ಸದಸ್ಯರಾದ ಜಗದೀಶ್ ಪುರಿಯ,ನಾರಾಯಣ ಕೃಷ್ಣನಗರ, ಲಿಖಿತ್ ಪಲ್ಲೋಡಿ,ಬಿ ಲಕ್ಷ್ಮಣ ಗೌಡ ಬೊಳ್ಳಾಜೆ, ಚಂದ್ರಶೇಖರ ದೇರಾಜೆ, ಶ್ರೀಮತಿ ವೀಣಾ ಪಂಜ , ಶ್ರೀಮತಿ ಮಲ್ಲಿಕಾ, ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮತಿ ಪ್ರಮೀಳಾ, ಶ್ರೀಮತಿ ದಿವ್ಯಾ ಪುಂಡಿಮನೆ , ಮಾಜಿ ಸದಸ್ಯರಾದ ಲೋಕೇಶ್ ಬರೆಮೇಲು, ಶ್ರೀಮತಿ ಚಂದ್ರಾವತಿ ಸಂಪ,ಶ್ರೀಮತಿ ನಿರ್ಮಲ ಪಲ್ಲೋಡಿ , ಗ್ರಾಮ ಲೆಕ್ಕಾಧಿಕಾರಿ ಎಲ್ ಎನ್ ತುಕಾರಾಂ, ಗಂಗಾಧರ ಗೌಡ ಗುಂಡಡ್ಕ, ಸುಚಿನ್ನಕಾಣಿಕೆ, ತಿಮ್ಮಪ್ಪ ಗೌಡ ಕೂತ್ಕುಂಜ, ಧರ್ಮಪಾಲ ಕಕ್ಯಾನ, ನಂದಕುಮಾರ್ ಗಟ್ಟಿಗರು, ಮೋನಪ್ಪ ಗೌಡ ಬೊಳ್ಳಾಜೆ, ಚಂದ್ರಶೇಖರ ಮೇಲ್ಪಾಡಿ, ಮೋನಪ್ಪ ಕೆಬ್ಲಾಡಿ,ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್,ಕಂದಾಯ ಇಲಾಖಾ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ರಘುರಾಮ ಅಮ್ಮಣ್ಣಾಯ ಪರ್ವತಮುಖಿ ರವರು ಪೂಜಾ ಕಾರ್ಯ ನೆರವೇರಿಸಿದರು. ಬಳಿಕ ಗಿಡ ನೆಡುವ ಕಾರ್ಯಕ್ರಮ ಜರುಗಿತು. ಕಂದಾಯ ನಿರೀಕ್ಷಕ ಎಂ ಎಲ್ ಶಂಕರ ನಿರೂಪಿಸಿದರು.
- Thursday
- November 21st, 2024