Ad Widget

ಕೊಲ್ಲಮೊಗ್ರ :- ವಿಪತ್ತು ನಿರ್ವಹಣಾ ಘಟಕದಿಂದ ಶ್ರಮದಾನ

. . . . . . .

ಕೊಲ್ಲಮೊಗ್ರ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ವಾಹನಗಳು ಹೋಗಲು ಕಷ್ಟವಾಗುತ್ತಿತ್ತು. ಇದನ್ನು ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಜು.17 ರಂದು ಶ್ರಮದಾನದ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆಯ ಗುಂಡಿಗಳಿಗೆ ಮಣ್ಣು ಹಾಗೂ ಕಲ್ಲುಗಳನ್ನು ಹಾಕಿ ರಸ್ತೆಯನ್ನು ಸರಿಪಡಿಸಿದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಸತೀಶ್.ಟಿ.ಎನ್ ಹಾಗೂ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಮಣಿಕಂಠ ಕಟ್ಟ, ಬಾಲಸುಬ್ರಹ್ಮಣ್ಯ, ಹರ್ಷ ಅಡ್ನೂರುಮಜಲು, ಕುಶಾಲಪ್ಪ ಜಾಲುಮನೆ, ಮುತ್ತಪ್ಪ.ಕೆ, ಶ್ರೀನಿವಾಸ್.ಕೆ, ಚಂದ್ರಶೇಖರ್ ಕೋನಡ್ಕ, ಲಕ್ಷ್ಮಣ ಐನೆಕಿದು, ಅಶೋಕ, ಸದಾಶಿವ ಕಟ್ಟ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ್, ಸೇವಾಪ್ರತಿನಿಧಿ ಶೋಭಾ ಮುಂತಾದವರು ಉಪಸ್ಥಿತರಿದ್ದರು.

✍ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!