ಅರಂತೋಡು ಗ್ರಾಮದ ಅಡ್ತಲೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ರಸ್ತೆ ಮತ್ತು ಮೊಬೈಲ್ ನೆಟ್ವರ್ಕ್ ಸಮರ್ಪಕವಾಗಿಲ್ಲ. ಜನಪ್ರತಿನಿಧಿಗಳು ಚುನಾವಣೆಯ ವೇಳೆಯಲ್ಲಿ ಮಾತ್ರವೇ ಭರವಸೆ ನೀಡಿ ಮತ್ತೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅಡ್ತಲೆ ಮುಖ್ಯ ರಸ್ತೆ ಅಗಲೀಕರಣಗೊಳ್ಳದೇ ಹಲವಾರು ಅಪಘಾತಗಳು ಸಂಭವಿಸುತ್ತಿದೆ. ಇದರಿಂದ ಬೇಸತ್ತ ಜನ ಈ ಬಾರಿ ತಾ.ಪಂ.ಹಾಗೂ ಜಿ.ಪಂ. ಚುನಾವಣೆ ಬಹಿಷ್ಕರಿಸಿ, ಬೇಡಿಕೆ ಈಡೇರುವವರೆಗೆ ಹೋರಾಟಕ್ಕೆ ಸಜ್ಜಾಗಿದ್ದಾರೆ. ಅಡ್ತಲೆ ಭಾಗದ ಗ್ರಾಮಸ್ಥರು ಸೇರಿ ನಾಗರಿಕ ಹಿತರಕ್ಷಣಾ ವೇದಿಕೆ ರಚಿಸಿದ್ದಾರೆ.
ವೇದಿಕೆ ಅಧ್ಯಕ್ಷರಾಗಿ ಹರಿಪ್ರಸಾದ್, ಎ.ಕೆ. ಅಡ್ತಲೆ ಕಾರ್ಯನಿರ್ವಹಿಸಲಿದ್ದಾರೆ. ಉಪಾಧ್ಯಕ್ಷರಾಗಿ ವಿನಯ್ ಬೆದ್ರುಪಣೆ ಕಾರ್ಯದರ್ಶಿಯಾಗಿ ಸಾತ್ವಿಕ್, ಕೆ. ಎಲ್. ಕಿರ್ಲಾಯ, ಜೊತೆ ಕಾರ್ಯದರ್ಶಿಯಾಗಿ ರಂಜಿತ್ ಅಡ್ತಲೆ, ಖಜಾಂಜಿಯಾಗಿ ಓಂ ಪ್ರಸಾದ್ ಪಿಂಡಿಮನೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲೋಹಿತ್ ಮೇಲೆ ಅಡ್ತಲೆ, ಕೇಶವ ಮೇಲೆ ಅಡ್ತಲೆ, ದಯಾನಂದ ಬೆದ್ರುಪಣೆ, ಮೋಹನ್ ಪಂಜದಬೈಲು, ಸುನಿಲ್ ಪಿಂಡಿಮನೆ, ಗಿರೀಶ್ ಅಡ್ಕ, ಗೌತಮ್ ಅಜಿಲ ಅರಮನೆಗಯ, ರಕ್ಷಿತ್ ಚೀಮಾಡು, ರತನ್ ಕಿರ್ಲಾಯ, ತ್ಯಾಗರಾಜ್ ಜೋಡಿಪಣೆ,
ಗೌರವ ಸಲಹೆಗಾರರಾಗಿ ಭವಾನಿಶಂಕರ ಅಡ್ತಲೆ, ಶಶಿ ಕುಮಾರ್ ಉಳುವಾರು, ಹರೀಶ್ಚಂದ್ರ ಮೇಲೆ ಅಡ್ತಲೆ, ಗೋಪಾಲಕೃಷ್ಣ ಪಿಂಡಿಮನೆ, ಶ್ರೀಧರ ನಾರ್ಕೋಡು, ಕಿರ್ಲಾಯ, ಚಂದ್ರಶೇಖರ ಚೋಡಿಪಣೆ ಇದ್ದಾರೆ.
- Thursday
- November 21st, 2024