Ad Widget

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷರಂಗದ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈ ನಿಧನ

ಸಂಪಾಜೆ : ಖ್ಯಾತ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ (78 ) ಅವರು ವಯೋ ಸಹಜ ಅಸೌಖ್ಯದಿಂದ ಜು.13 ರಂದು ನಿಧನರಾದರು. ಕೊಡಗು ಜಿಲ್ಲೆಯ ಸಂಪಾಜೆಯ ರಾಮಣ‍್ಣ ರೈ ಹಾಗೂ ತಾಯಿ ಕಾವೇರಿ ರೈ ಯವರ ಪುತ್ರ. ಇವರ ತಂದೆ ಕೂಡ ಯಕ್ಷಗಾನ ಕಲಾವಿದರಾಗಿದ್ದರು ಮತ್ತು ಶೀನಪ್ಪ ರೈ ಸಂಪಾಜೆಯವರಿಗೆ ಮಾರ್ಗದರ್ಶಕರಾಗಿದ್ದರು.

. . . . . . . . .

ಇವರು ನಾಲ್ಕನೇ ತರಗತಿ ವರೆಗಿನ ಶಿಕ್ಷಣ ಪಡೆದ ಬಳಿಕ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸಿಕೊಂಡು ತಮ್ಮ ತಂದೆಯವರಿಂದಲೇ ಯಕ್ಷಗಾನ ಕಲೆಯನ್ನು ಅಭ್ಯಸಿಸುತ್ತಾರೆ. ಶೀನಪ್ಪ ರೈ ಅವರು ಅರ್ಥಗಾರಿಕೆಯನ್ನು ತಮ್ಮ ತಂದೆಯವರಿಂದ ಕಲಿತರು. ನಾಟ್ಯವನ್ನು ಶ್ರೀ ಕುಂಬಳೆ ಕಣ್ಣನ್ ಇವರಿಂದ, ಭರತನಾಟ್ಯವನ್ನು ಶ್ರೀ ಮಾಸ್ತರ್ ಕೇಶವರವರಿಂದ ಕಲಿತರು. ಬಣ್ಣಗಾರಿಕೆಯನ್ನು ಶ್ರೀ ಬಣ‍್ಣದ ಕುಟ್ಯಪ್ಪರಿಂದ ಕಲಿತಿದ್ದಾರೆ.

. . . . . . .

ಇವರು ತಮ್ಮ 13 ನೇ ವರ್ಷದಲ್ಲಿ ಶ್ರೀ ಕಲ್ಲಾಡಿ ಕೊರಗ ಶೆಟ್ಟರ ವ್ಯವಸ್ಥಾಪಕತ್ವದ ಇರಾ ಶ್ರೀ ಸೋಮನಾಥೇಶ್ವರ ಕುಂಡಾವು ಮೇಳದಲ್ಲಿ 4 ವರುಷ ತಿರುಗಾಟ ನಡೆಸಿದ್ದಾರೆ. 3 ವರ್ಷ ವೇಣೂರು, 2 ವರ್ಷ ಇರುವೈಲು, 4 ವರ್ಷ ಸೌಕೂರು, 2 ವರ್ಷ ಚೌಡೇಶ್ವರಿ ಮೇಳ ನಂತರ 33 ವರ್ಷ ಶ್ರೀ ಕಲ್ಲಾಡಿ ವಿಠಲ ಶೆಟ್ಟಿಯವರ ಸಂಚಾಲಕತ್ವದ ಶ್ರೀ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಯಕ್ಷಗಾನ ಸೇವೆಯನ್ನು ಮಾಡಿದ್ದಾರೆ.

ದೇವೇಂದ್ರ, ಕರ್ಣ, ಅರ್ಜುನ, ಹಿರಣ್ಯಾಕ್ಷ, ದಕ್ಷ, ರಕ್ತಬಿಜಾಸುರ, ಇಂದ್ರಜಿತು, ಕೌಂಡ್ಲಿಕ, ಭಾನುಕೋಪ ಶಿಶುಪಾಲ, ಕಾರ್ತವೀರ್ಯ, ಅರುಣಾಸುರ, ಭೀಮ, ಮಹಿಷಾಸುರ, ವೀರಮಣೀ, ಶತ್ರುಘ್ನ, ತ್ರಾಮಧ್ವಜ, ಮಕರಾಕ್ಷ ಇತ್ಯಾದಿ ಪಾತ್ರಗಳನ್ನು ಯಕ್ಷಗಾನ ರಂಗದಲ್ಲಿ ನಿರ್ವಹಿಸಿದ್ದಾರೆ.
ಅವರ ಯಕ್ಷಗಾನ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿ ,ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಗೌರವ ಪ್ರಶಸ್ತಿ,ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ , ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಯಕ್ಷಮಂಗಳ ಪ್ರಶಸ್ತಿಗಳನ್ನ ನೀಡಿ ಗೌರವಿಸಿರುತ್ತಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading