ಕೋಡ್ಲ ಗಣಪತಿ ಭಟ್ ಸಂಚಾಲಕತ್ವದ ಶ್ರೀ ಭುವನೇಶ್ವರಿ ಯಕ್ಷಗಾನ ಕಲಾಸಂಘದ 38ನೇ ವರ್ಷದ ಯಕ್ಷಗಾನ ತರಬೇತಿ ಕಾರ್ಯಕ್ರಮವು ಸುಳ್ಯದ ಶ್ರೀ ಚೆನ್ನಕೇಶವ ದೇವಾಸ್ಥಾನದ ರಾಜಗೋಪುರದ ಸಭಾಂಗಣದಲ್ಲಿ ಜು.11ರಂದು ಉದ್ಘಾಟನೆಗೊಂಡಿತು.
ಸುಳ್ಯದ ಈಶ ಸೋಲಾರ್ & ಬ್ಯಾಟರಿ ಸಂಸ್ಥೆಯ ಮಾಲಕ ರಾಜೇಶ್ ಶೆಟ್ಟಿ ಮೇನಾಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಯಕ್ಷಗಾನ ಒಂದು ಅದ್ಭುತಕಲೆಯಾಗಿದ್ದು, ಅವಿವಿಭಜಿತ ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದ ನಾವು ಇದನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಈ ನಾಡಿನ ಮಕ್ಕಳಿಗೆ ಕರಾವಳಿಯ ಗಂಡು ಕಲೆ ಯಕ್ಷಗಾನದ ಬಗ್ಗೆ ಅರಿವು ಮೂಡಿಸಬೇಕು. ಕಳೆದ 38ವರ್ಷದಿಂದ ತನ್ನ ಭುವನೇಶ್ವರಿ ಕಲಾ ಸಂಘದ ಮೂಲಕ ತಾನು ಕಲಿತಿರುವ ಜ್ಞಾನವನು ದಾರೆ ಎರೆಯುತ್ತ ಅಪಾರ ಶಿಷ್ಯ ವರ್ಗವನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.
ಭುವನೇಶ್ವರಿ ಯಕ್ಷಗಾನ ಕಲಾಸಂಘದ ಯಕ್ಷಗುರು ಕೋಡ್ಲ ಗಣಪತಿ ಭಟ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಲಿಕಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.