ಅಕ್ರಮ ನಾಡಕೋವಿ ಮಾರಾಟ ಪ್ರಕರಣದಲ್ಲಿ ಬಂಧಿತರಾದ ಒಂದನೇ ಆರೋಪಿ ದಿವಾಕರ ಆಚಾರಿಗೆ ಪುತ್ತೂರು ಸೆಶನ್ಸ್ ನ್ಯಾಯಾಲಯದಿಂದ ಜಾಮೀನು ದೊರೆತಿದೆ. ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ಇವರಿಗೆ ದೊರೆತ ಮಾಹಿತಿ ಪ್ರಕಾರ ಆರೋಪಿ ದಿವಾಕರ ಆಚಾರಿ ತನ್ನ ಕಬ್ಬಿಣದ ಕೆಲಸ ಮಾಡುವ ಕೊಟ್ಟಿಗೆಯಲ್ಲಿ ಅಕ್ರಮ ನಾಡಕೋವಿ ತಯಾರಿಸಿ ಮಾರಾಟ ಮಾಡುತ್ತಿದ್ದನೆಂದು ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ರೆನ್ನಲಾದ ಆರೋಪದಡಿ ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಪುತ್ತೂರು ಸೆಶನ್ಸ್ ನ್ಯಾಯಾಲಯದಿಂದ ರೂಪಾಯಿ 1,00,000/ಬಾಂಡ್ ಅಷ್ಟೇ ಮೊತ್ತದ ಜಾಮೀನು ನೀಡುವ ಶರ್ತದ ಮೇರೆಗೆ ಜಾಮೀನು ಅರ್ಜಿ ಯನ್ನು ಪುರಸ್ಕರಿಸಿದೆ.ಆರೋಪಿ ಪರವಾಗಿ ನ್ಯಾಯವಾದಿಗಳಾದ ಜಗದೀಶ್ ದಾಸನಕಜೆ ಮತ್ತು ಸಂದೀಪ್ ವಳಲಂಬೆ ವಾದಿಸಿದ್ದರು.
- Saturday
- November 23rd, 2024