ಪರಿಸರ ಕಾರ್ಯಕ್ರಮದ ಗಿಡ ನಾಟಿ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಬ್ರಹ್ಮಣ್ಯ ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ಹಾಗೂ ಅರಣ್ಯ ಇಲಾಖೆ ಸುಬ್ರಹ್ಮಣ್ಯ ವಲಯ ಇವರ ಜಂಟಿ ಆಶ್ರಯದಲ್ಲಿ ಅರಣ್ಯೀಕರಣ ಕಾರ್ಯಕ್ರಮದ ಅಡಿಯಲ್ಲಿ ಜೂ.29 ರಂದು ಕೊಲ್ಲಮೊಗ್ರ ಅರಣ್ಯ ವಿಶ್ರಾಂತಿ ಗೃಹದ ವಠಾರದಲ್ಲಿ ಗಿಡ ನಾಟಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಸದಸ್ಯರಾದ ಅಶ್ವತ್ಥ್ ಹಾಗೂ ಅರಣ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಗಿಡ ನಾಟಿ ಮಾಡುವುದರ ಮೂಲಕ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಶಿವತೀರ್ಥ ದೊಡ್ಡಣ್ಣ ಶೆಟ್ಟಿ ಕೆರೆಯ ಏರಿ, ಕಿರಿಯ ಪ್ರಾಥಮಿಕ ಶಾಲೆ ಬೆಂಡೋಡಿ, ರುದ್ರಭೂಮಿ ಕೊಲ್ಲಮೊಗ್ರ, ಪರಿಶಿಷ್ಟ ಜಾತಿ-ಪಂಗಡಗಳ ರುದ್ರಭೂಮಿ ಬೆಂಡೋಡಿ, ಹಿರಿಯ ಪ್ರಾಥಮಿಕ ಶಾಲೆ ಕೊಲ್ಲಮೊಗ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರ, ಅಯ್ಯಪ್ಪ ಭಜನಾ ಮಂಡಳಿ ಶಕ್ತಿನಗರ ಕಲ್ಮಕಾರು ವಠಾರಗಳಲ್ಲಿ ಸುಮಾರು 200 ಹಣ್ಣು-ಹಂಪಲು ಗಿಡಗಳನ್ನು ನಾಟಿ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಾಧವ ಚಾಂತಾಳ, ಉಪವಲಯ ಅರಣ್ಯಾಧಿಕಾರಿಗಳಾದ ಸಂತೋಷ್ ಹಾಗೂ ಮನೋಜ್, ಅರಣ್ಯ ರಕ್ಷಕರಾದ ಸಂತೋಷ್ , ಕೊಲ್ಲಮೊಗ್ರ ಒಕ್ಕೂಟದ ಅಧ್ಯಕ್ಷರಾದ ಜನಾರ್ಧನ ದೋಣಿಪಳ್ಳ, ಯಶೋಧ ಅಂಬೆಕಲ್ಲು, ಮೋಹಿನಿ ಕಟ್ಟ, ರಾಮಣ್ಣ ಗೌಡ ಅಂಜನಕಜೆ, ಸೇವಾಪ್ರತಿನಿಧಿಗಳಾದ ಸಾವಿತ್ರಿ, ಶೋಭಾ, ಪದ್ಮಾವತಿ ಹಾಗೂ ಚಿನ್ನಪ್ಪ ಗೌಡ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ್ ಹಾಗೂ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಸತೀಶ್ ಟಿ.ಎನ್, ಮಣಿಕಂಠ ಕಟ್ಟ ಹಾಗೂ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಬಾಲಸುಬ್ರಮಣ್ಯ, ಕುಶಾಲಪ್ಪ ಜಾಲುಮನೆ, ಚಂದ್ರಶೇಖರ್ ಕೋನಡ್ಕ, ಹರ್ಷ ಅಡ್ನೂರು ಮಜಲು, ಕುಸುಮಾಧರ, ಮುತ್ತಪ್ಪ ಕಟ್ಟ, ಸದಾಶಿವ ಕಟ್ಟ, ಶ್ರೀನಿವಾಸ್, ಲಕ್ಷ್ಮಣ ನವಗ್ರಾಮ, ಯಶವಂತ ಕಾಜಿಮಡ್ಕ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಕಲ್ಮಕಾರು ಭಜನಾ ಮಂದಿರದ ಹತ್ತಿರದಲ್ಲಿರುವ ಬಸ್ ನಿಲ್ದಾಣದ ಹಂಚುಗಳು ಮುರಿದು ಬಿದ್ದಿರುವುದನ್ನು ಗಮನಿಸಿ ನಿಲ್ದಾಣದ ಸ್ವಚ್ಚತೆ ಮಾಡಿ ಹಂಚುಗಳನ್ನು ಸರಿಪಡಿಸಿದರು.
✍ವರದಿ :- ಉಲ್ಲಾಸ್ ಕಜ್ಜೋಡಿ