ರಜಾದಿನದಲ್ಲೂ ಮನೆಯಲ್ಲಿ ಇರದೆ ಸಾಮಾಜಿಕ ಕಾರ್ಯಗಳಲ್ಲಿ ಆಪ್ತಮಿತ್ರರೊಡನೆ ಕೈಜೋಡಿಸುತ್ತಿದ್ದ ನನಗೆ ದೇಶಕ್ಕೆ ಅನಿರೀಕ್ಷಿತವಾಗಿ ಒದಗಿದ ಲಾಕ್ದೌನ್ ನಿಂದ ನಾನು ಸ್ವಲ್ಪ ಬೇಸರಗೊಂಡಿದ್ದು ಸುಳ್ಳಲ್ಲ. ಮೊದಮೊದಲು ಕಷ್ಟ ಎನಿಸಿದರೂ ಕ್ರಮೇಣ ಲಾಕ್ಡೌನ್ ಗೆ ಹೊಂದಿಕೊಂಡೆ.ಮನೆಯ ಕೆಲವೊಂದು ಸಣ್ಣಪುಟ್ಟ ಕೆಲಸಗಳಲ್ಲಿ ಮನೆಯವರೊಡನೆ ಭಾಗಿಯಾಗುತ್ತಾ ದಿನದ ತುಸು ಸಮಯವನ್ನು ಆಲಸ್ಯರಹಿತವಾಗಿ ಕಳೆಯುತ್ತಿದ್ದೇನೆ. ಈ ಸಮಯದಲ್ಲಿ ನನಗೆ ನೆರವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಕೊರೊನಾ ಬಗೆಗಿನ ಸುದ್ದಿಗಳನ್ನು ಆಪ್ತರೊಡನೆ ಹಂಚಿಕೊಳ್ಳುವ ಕಾರ್ಯ. ಹಾಗೂ ಹೊರಗಡೆಗೆ ಅನಿರೀಕ್ಷಿತವಾಗಿ ಹೋಗಬೇಕಾದ್ರೆ ನನ್ನ ಅರೋಗ್ಯದ ಬಗೆಗೆ ನಾನು ಸ್ವಂತವಾಗಿ ಜಾಗ್ರತೆವಹಿಸಬೇಕಾದ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಹಾಗೂ ಆರೋಗ್ಯ ಕಾರ್ಯಕರ್ತರೊಡನೆ ಸ್ಪಂದಿಸಿ ಅವರ ಮಾರ್ಗದರ್ಶನಕ್ಕೆ ಅನುಗುಣವಾಗಿ ನಡೆದುಕೊಂಡಿದ್ದೇನೆ.ಅಲ್ಲದೇ ಈ ಲಾಕ್ಡೌನ್ ಸಮಯದಲ್ಲಿ ನನ್ನ ಆಪ್ತ ಕಾರ್ಯಕರ್ತಮಿತ್ರರು ನನಗೆ ನನ್ನ ಕಷ್ಟಕಾಲದಲ್ಲಿ ನೆರವಾಗಿರುವುದನ್ನು ನಾನೆಂದೂ ಮರೆಯಲಾರೆ. ಮೊನ್ನೆ ಮೊನ್ನೆ ಯುವಬ್ರಿಗೇಡ್ನ ಆಪ್ತ ಕಾರ್ಯಕರ್ತಮಿತ್ರನ ಅನಿರೀಕ್ಷಿತವಾದ ಕರೆಗೆ ಸ್ಪಂದಿಸಿ ಒಬ್ಬ ಹಿರಿಯ ತಾಯಿಗೆ ರಕ್ತದಾನ ಮಾಡುವ ಮೂಲಕ ನನಗೆ ತುಂಬಾ ಇಷ್ಟವಾದ ‘ರಕ್ತದಾನ’ಕಾರ್ಯಕ್ಕೆ ಮಗದೊಮ್ಮೆ ಕೈಜೋಡಿಸಿದ ಹೆಮ್ಮೆ ನನಗಾಗಿದೆ.ಆ ನನ್ನ ಕಾರ್ಯಕ್ಕೆ ತುರ್ತಾಗಿ ಸ್ಪಂದಿಸಿ ನಾನು ಸಮಯಕ್ಕೆ ಸರಿಯಾಗಿ ರಕ್ತದಾನ ಮಾಡುವಂತೆ ಆಸ್ಪತ್ರೆಗೆ ಕರೆದುಕೊಂಡು ಹೋದ ಸಂತೋಷ್ ಜೀ ಗೆ ನಾನು ಎಂದೆಂದೂ ಅಭಾರಿ.
- Thursday
- November 21st, 2024