ಕಳಂಜ – ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ವೆಂಕಪ್ಪಯ್ಯರು ಡಿ. 31 ರಂದು ತಮ್ಮ 40 ವರ್ಷಗಳ ಸೇವೆಯಿಂದ ನಿವೃತ್ತರಾದರು.
ಇವರು 1980 ಜನವರಿ 15 ರಂದು ಸಂಘದ ಕೋಟೆಮುಂಡುಗಾರು ಶಾಖೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸೇವೆ ಆರಂಭಿಸಿ, 1980 ಜುಲೈ 25 ರಿಂದ ಖಾಯಂ ದ್ವಿತೀಯ ದರ್ಜೆ ಗುಮಾಸ್ತನಾಗಿ, ನಂತರ 1990 ರಿಂದ ಬಾಳಿಲ ಶಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತನಾಗಿ ಸೇವೆ ಸಲ್ಲಿಸಿ 2012 ರಿಂದ ಕೋಟೆಮುಂಡುಗಾರು ಶಾಖೆಯಲ್ಲಿ ಉಪಕಾರ್ಯದರ್ಶಿಯಾಗಿ ನಿಯೋಜನೆಗೊಂಡರು. ತದನಂತರ 2013 ಮಾರ್ಚ್ 01 ರಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಭಡ್ತಿ ಹೊಂದಿ ಸಂಘದ ಅಭಿವೃದ್ಧಿಗೈಯುತ್ತಾ, ಇದೀಗ ಸೇವೆಯಿಂದ ನಿವೃತ್ತರಾಗಿದ್ದಾರೆ.
ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದ ಇವರು ಸಂಘದ ರೈತ ಸ್ನೇಹಿತರ ಕೂಟದಲ್ಲಿ 3 ವರ್ಷಗಳ ಪ್ರಶಸ್ತಿ ಪಡೆಯುವಲ್ಲಿ, ಬಾಳಿಲ ಶಾಖೆಯಲ್ಲಿ ನಿವೇಶನ ಖರೀದಿಸುವಲ್ಲಿ, ಕೋಟೆಮುಂಡುಗಾರು ಶಾಖೆಯ ಸುಸಜ್ಜಿತ ಸಭಾಂಗಣದ ನಿರ್ಮಾಣ ಮಾಡುವಲ್ಲಿ ಆಡಳಿತ ಮಂಡಳಿಯೊಂದಿಗೆ ಸದಾ ಮುಂಚೂಣಿಯಲ್ಲಿದ್ದರು.
ಇವರ ತಂದೆ ಶ್ರೀ ರಾಮಚಂದ್ರ ದೀಕ್ಷಿತ್ ಅಜ್ಜಮೂಲೆ ದೇರಾಜೆ, ತಾಯಿ ಶ್ರೀಮತಿ ಸಾವಿತ್ರಿ, ಪತ್ನಿ ಶೇಣಿ ಶಾಲಾ ಸಹಶಿಕ್ಷಕಿ ಶ್ರೀಮತಿ ಸವಿತಾ ಹಾಗೂ ಮಕ್ಕಳಾದ ಶ್ರೀಮತಿ ಅಖಿಲಾ ಮುರಳೀ ಕೊಕ್ಕಡ ಹಾಗೂ ಕು|ಅಚಲಾ ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.