ಕಲ್ಮಡ್ಕ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ತನ್ನ ಸೋದರ ಸಂಬಂಧಿಯಾಗಿರುವ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಪೋಲೀಸರು ಬಂಧಿಸಿದ ಘಟನೆ ಡಿ.25 ರಂದು ವರದಿಯಾಗಿದೆ.
ಕಲ್ಮಡ್ಕ ಗ್ರಾಮದ ವಾರ್ಡ್ 1 ರಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹುಕ್ರಪ್ಪ ಯಾನೆ ನಾರಾಯಣ ಪುಚ್ಚಮ ಎಂಬವರು ಪೊಲೀಸರ ವಶವಾಗಿದ್ದಾರೆ. ಚಿಕ್ಕಪ್ಪನ ಮಗಳಿಗೇ ಅವರು ಈ ರೀತಿ ಮಾಡಿರುವುದಾಗಿ ಹೇಳಲಾಗಿದ್ದು, ಮನೆಯವರ ದೂರಿನ ಮೇರೆಗೆ ಡಿಸೆಂಬರ್ 26 ರಂದು ಬೆಳ್ಳಾರೆಯ ಪೊಲೀಸರು ಕೇಸು ದಾಖಲಿಸಿಕೊಂಡು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧನ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಾಗಿದೆ ಎಂದು ಎಸ್ ಐ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.