ವಿಕಲಚೇತನರಿಗೆ ವೈದ್ಯಕೀಯ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮ ಇಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಈ ಶಿಬಿರದಲ್ಲಿ 18 ಜನರಿಗೆ ವೈದ್ಯಕೀಯ ಪ್ರಮಾಣ ಪತ್ರ ಮತ್ತು ವಿಕಲಚೇತನರಿಗೆ ಗುರುತಿನ ಚೀಟಿಯನ್ನು ನೀಡಲಾಯಿತು. ಶಿಬಿರದಲ್ಲಿ ತಾಲೂಕು ಸಂಯೋಜಕರಾದ ಚಂದ್ರಶೇಖರ್ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಪುಟ್ಟಣ್ಣ ಕುಸುಮಾವತಿ, ಪುಷ್ಪಶ್ರೀ, ರಂಜಿನಿ, ಉಮಾವತಿ, ಲಾವಣ್ಯ, ಹರ್ಷಿತ್ ಮತ್ತು ರಾಜೇಶ್ವರಿ ಇವರು ಭಾಗವಹಿಸಿದ್ದರು
- Thursday
- November 21st, 2024