Ad Widget

ಪೈಚಾರು ಶಾಂತಿನಗರಕ್ಕೆ ತಿರುಗುವ ರಸ್ತೆ ಬಳಿ ಅಪಾಯಕಾರಿ ಗುಡ್ಡ


ಸುಳ್ಯ ಮಾಣಿ-ಮೈಸೂರು ಮುಖ್ಯರಸ್ತೆಯ ಪೈಚಾರ್ ಬಳಿ ಶಾಂತಿನಗರಕ್ಕೆ ತಿರುಗುವ ರಸ್ತೆಯ ಸಮೀಪ ಬೃಹತ್ ಮಣ್ಣಿನ ಗುಡ್ಡೆಯೊಂದು ವಾಹನ ಸಂಚಾರರಿಗೆ ಸಂಚಕಾರವಾಗಿ ಮಾರ್ಪಟ್ಟಿದೆ. ಈ ಪ್ರದೇಶದಲ್ಲಿ ಸುಳ್ಯದಿಂದ ಪೈಚಾರು ಬಳಿ ಬರುವ ಪೈಚಾರ್ ನಿಂದ ಸುಳ್ಯ ನಗರದ ಕಡೆ ಬರುವ ಅದೇ ರೀತಿ ಶಾಂತಿನಗರದಿಂದ ಮುಖ್ಯರಸ್ತೆಗೆ ಇಳಿಯುವ ರಸ್ತೆಯಾಗಿದ್ದು ,ರಸ್ತೆಯು ಬಹಳ ಅವೈಜ್ಞಾನಿಕವಾಗಿದೆ.

. . . . . . . . .

ಮುಖ್ಯರಸ್ತೆಗಳಲ್ಲಿ ಬರುವ ವಾಹನಗಳು ಎದುರಿನಿಂದ ಅದೇ ರೀತಿ ಶಾಂತಿನಗರದಿಂದ ಬರುವ ವಾಹನದ ಚಾಲಕರಿಗೆ ಮಣ್ಣಿನ ಗುಡ್ಡೆಯ ಕಾರಣದಿಂದಾಗಿ ಕಾಣಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಹಲವಾರು ಸಣ್ಣಪುಟ್ಟ ವಾಹನ ಅಪಘಾತಗಳು ಸಂಭವಿಸಿದೆ.

. . . . . . .

ಕಳೆದ ಕೆಲವು ದಿನಗಳ ಹಿಂದೆ ಕಾರು ಮತ್ತು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಬೈಕ್ ಸವಾರ ತನ್ನ ಬಲಗಾಲನ್ನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪ್ರವೃತ್ತರಾಗಿ ಮುಂದೆ ಉಂಟಾಗುವ ಅನಾಹುತಗಳನ್ನು ತಪ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading