ಸುಳ್ಯ ತಾಲೂಕು ಖಾಸಗಿ ಶಿಕ್ಷಕರ ಬಳಗದ ಸಭೆ ಇಂದು ರೋಟರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಸಮಿತಿ ರಚನೆ ಹಾಗೂ ಖಾಸಗಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.
ನೂತನ ಸಮಿತಿ ರಚನೆ ಮಾಡಲಾಗಿದ್ದು ಅಧ್ಯಕ್ಷರಾಗಿ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಗದಾಧರ ಬಾಳುಗೋಡು, ಉಪಾಧ್ಯಕ್ಷ ರಾಗಿ ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕಿಯಾದ ಪೂರ್ಣಿಮಾ ಚೊಕ್ಕಾಡಿ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಮಾವಂಜಿ, ಜತೆ ಕಾರ್ಯದರ್ಶಿ ರೋಟರಿ ವಿದ್ಯಾಸಂಸ್ಥೆಯ ಜಯಶ್ರೀ ಕೆ., ಖಜಾಂಜಿಯಾಗಿ ರೋಟರಿ ವಿದ್ಯಾಸಂಸ್ಥೆಯ ಮಂಜುನಾಥ್, ನಿರ್ದೇಶಕರಾಗಿ ಗುತ್ತಿಗಾರು ಬ್ಲೆಸ್ಡ್ ಕುರಿಯಕೋಸ್ ವಿದ್ಯಾಸಂಸ್ಥೆಯ ರಮೇಶ್, ರೋಟರಿ ವಿದ್ಯಾಸಂಸ್ಥೆ ಯ ಶ್ರೀಹರಿ ಪೈಂದೋಡಿ, ಸುಳ್ಯ ಸೈಂಟ್ ಬ್ರಿಜಿಡ್ಸ್ ವಿದ್ಯಾಸಂಸ್ಥೆಯ ಉಮೇಶ್, ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ಹೇಮಲತಾ ಜಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ನಾಗೇಶ್ ರವರು ಸರ್ಕಾರದಿಂದ ಶಿಕ್ಷಕರಿಗೆ ಸಿಗುವ ಸೌಲಭ್ಯವನ್ನು ನಾವು ಪಡೆದುಕೊಳ್ಳಬೇಕು, ನಮ್ಮ ಹಕ್ಕಿಗಾಗಿ ಹೋರಾಡಲು ಶಿಕ್ಷಕರು ಒಂದಾಗಬೇಕು.
ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಶಿಕ್ಷಕರ ಒಕ್ಕೂಟದ ಅಧ್ಯಕ್ಷರಾದ ಮನಾಝಿರ್ ಮುಡಿಪು ಮಾತನಾಡಿ ಮಾನ್ಯ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಭರವಸೆ ನೀಡಿದ ₹10,000 ಕೋವಿಡ್ ಪರಿಹಾರ ನಿಧಿಯನ್ನು ಆದಷ್ಟು ಬೇಗ ಶಿಕ್ಷಕರ ಖಾತೆಗೆ ವರ್ಗಾಯಿಸಬೇಕೆಂದು ಅಗ್ರಹಿಸಿದರು. ಜಿಲ್ಲಾ ಖಾ.ಶಿಕ್ಷಕ ಒಕ್ಕೂಟದ ಖಜಾಂಜಿಯಾದ
ಸೂರ್ಯಕಾಂತ್, ರೋಟರಿ ಶಾಲೆಯ ಮುಖ್ಯ ಶಿಕ್ಷಕರಾದ ಅಚ್ಚುತ್ತಾ ಅಟ್ಲೂರ್ ಇವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಗಧಾಧರ ಬಾಳುಗೋಡು ಸ್ವಾಗತಿಸಿ, ಪೂರ್ಣಿಮಾ ಚೊಕ್ಕಾಡಿ ಧನ್ಯವಾದಗೈದರು. ಸುಬ್ರಹ್ಮಣ್ಯ ಮಾವಂಜಿಯವರು ಕಾರ್ಯಕ್ರಮ ನಿರೂಪಿಸಿದರು.
- Saturday
- November 23rd, 2024