Ad Widget

ಪಂಜ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪಂಚಶ್ರೀ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಮತ್ತು ಸನ್ಮಾನ ಕಾರ್ಯಕ್ರಮ


. . . . . . . . .

. . . . . . .

ಪಂಜದ ಇತಿಹಾಸದಲ್ಲೆ ಮೊಟ್ಟಮೊದಲ ಬಾರಿಗೆ ಪಂಚಶ್ರೀ ಪ್ರೀಮಿಯರ್ ಲೀಗ್-೨೦೨೦’ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ ಡಿ.೧೩ರಂದು ಪಂಜ ಪರಿವಾರ ಪಂಚಲಿಂಗೇಶ್ವರ ದೇವಳದ ಮುಂಭಾಗದ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಚಂದ್ರಶೇಖರ ಕರಿಮಜಲು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತಾಧಿಕಾರಿ ಡಾ| ದೇವಿಪ್ರಸಾದ್ ಕಾನತ್ತೂರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪದ್ಮನಾಭ ರೈ ಅಗೋಳಿಬೈಲುಗುತ್ತು,ಪಂಚಶ್ರಿ ಸ್ಪೋರ್ಟ್ಸ್ ಕ್ಲಬ್‌ನ ಗೌರವ ಸಲಹೆಗಾರ ಚಂದ್ರಶೇಖರ ಕುಕ್ಕುಪಣೆ, ಸುಳ್ಯ ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾದ ವಿಖ್ಯಾತ್ ಬಾರ್ಪಣೆ, ಪವನ್ ಪಲ್ಲತ್ತಡ್ಕ ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದಲ್ಲಿ ಲಗೋರಿ ಅಸೋಸಿಯೇಶನ್‌ನ ಅಧ್ಯಕ್ಷ ದೊಡ್ಡಣ್ಣ ಬರೆಮೇಲುರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಯುವತೇಜಸ್ ಟ್ರಸ್ಟ್ ಇದರ ೧೦೮ನೇ ಯೋಜನೆಯ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಇಂಜಿರಡ್ಕ ನಿವಾಸಿ ವೀರಮ್ಮ ಇವರ ಪುತ್ರಿ ಯಕ್ಷ ಇವರಿಗೆ ರೂ.೨೫ ಸಾವಿರ ಚೆಕ್‌ನ್ನು ಯುವತೇಜಸ್ ಟ್ರಸ್ಟ್ ವತಿಯಿಂದ ಹಸ್ತಾಂತರಿಸಲಾಗಿದೆ.
ಕಾರ್ಯಕ್ರಮವನ್ನು ಕಾರ್ತಿಕ್ ರೈ ಪ್ರಾರ್ಥಿಸಿದರು. ಪಂಜ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ದಾಮೋದರ ನೇರಳೆ ಸ್ವಾಗತಿಸಿ, ಸಂದೀಪ್ ಶೆಟ್ಟಿ ಪಲ್ಲೋಡಿ ವಂದಿಸಿದರು. ಚೇತನ್ ಜಳದಹೊಳೆ ಕಾರ್ಯಕ್ರಮ ನಿರೂಪಿಸಿದರು.
ಕ್ರಿಕೇಟ್ ಲೀಗ್‌ನಲ್ಲಿ ೮ ಬಲಿಷ್ಠ ತಂಡಗಳು ಭಾಗವಹಿಸಿದವು.
ಈ ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ೭೭೭೭/-ಮತ್ತು ಶಾಶ್ವತ ಫಲಕವನ್ನು ಜನತಾ ಸ್ಟ್ರೆಕರ್‍ಸ್ ತಂಡ ಪಡೆದುಕೊಂಡಿತ್ತು. ದ್ವಿತೀಯ ಬಹುಮಾನ ೫೫೫೫/- ಮತ್ತು ಶಾಶ್ವತ ಫಲಕವನ್ನು ಪರಿವಾರ ಈಗಲ್ಸ್, ತೃತೀಯ ಬಹುಮಾನ ರೂ.೩೩೩೩ ಮತ್ತು ಶಾಶ್ವತ ಫಲಕವನ್ನು ಅಟಲ್ ಜೀ ಕ್ರಿಕೆಟರ್‍ಸ್, ಚತುರ್ಥ ಬಹುಮಾನ ವನ್ನು ರೂ.೨೨೨೨ಮತ್ತು ಶಾಶ್ವತ ಮಹಿಮಾನವನ್ನು ದುರ್ಗಾಪರಮೇಶ್ವರಿ ಪ್ಯೂಯಲ್ಸ್ ಪಡೆದುಕೊಂಡಿತು.
ವೈಯಕ್ತಿಕ ಬಹುಮಾನವನ್ನು ಪೈನಲ್ ಪಂದ್ಯಾಟದ ಪಂದ್ಯಶೇಷ್ಠ ಬಹುಮಾನವನ್ನು ಜನತಾ ಸ್ಟ್ರೆಕರ್‌ನ ಹರ್ಷಿತ್ ದರ್ಖಾಸ್ತು, ಸರಣಿ ಶೇಷ್ಠ ಜನತಾ ಸ್ಟೈಕರ್‌ನ ಹರ್ಷಿತ್ ದರ್ಖಾಸ್ತು, ಬೆಸ್ಟ್ ಬ್ಯಾಟ್‌ಮೆನ್ ಆಗಿ ಆಟಲ್‌ಜಿ ಕ್ರಿಕೆಟ್‌ರ್‍ಸ್‌ನ ಮಿಥುನ್ ಹೇಮಳ, ಬೆಸ್ಟ್ ಬೌಲರ್‌ಗಿ ಜನತಾ ಸ್ಟೈಕರ್‍ಸ್‌ನ ದಿನೇಶಗರಡಿ ಹಾಗೂ ಗೇಮ್ ಚೇಂಜರ್ ಪರಿವಾರ ಈಗಲ್ಸ್‌ನ ಸನತ್ ನರ್ಲಡ್ಕ ಪಡೆದುಕೊಂಡರು.
ಈ ಬಹುಮಾನ ವಿತರಣೆಯನ್ನು ನಕ್ಸಲ್ ನಿಗ್ರಹ ಪಡೆಯ ದೇವಿಪ್ರಸಾದ್ ಗೆಜ್ಜೆ, ಯುವಜನ ಸಂಯುಕ್ತ ಮಂಡಳಿಯ ನಿರ್ದೆಶಕ ಪವನ್ ಪಲ್ಲತ್ತಡ್ಕ, ಯುವತೇಜಸ್ ಟ್ರಸ್ಟ್‌ನ ಕಾರ್ಯಸಂಯೋಕರಾದ ಆಶಿತ್ ಕಲ್ಲಾಜೆ ಹಾಗೂ ಸಂದೀಪ್ ಪಲ್ಲೋಡಿ ಇವರು ವಿಜೇತ ತಂಡಗಳಿಗೆ ವಿತರಿಸಿದರು.
ಈ ಪಂದ್ಯಾಟವನ್ನು ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್‌ನ ಯುವಕರು ತಾವು ಸಮಾಜದ ಸೇವೆಗೂ ಸಿದ್ಧ, ಕ್ರೀಡೆಗೂ ಸಿದ್ಧ ಎಂಬುವುದನ್ನು ತೋರಿಸಿಕೊಟ್ಟರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading