Ad Widget

ಎಲಿಮಲೆ : ಸೈಕಲ್ ಕೊಡಿಸುವ ನೆಪದಲ್ಲಿ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ – ಸುಬ್ರಹ್ಮಣ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು – ಆರೋಪಿ ಅನಿಲ್ ಅಂಬೆಕಲ್ಲು ಪೋಲೀಸ್ ವಶ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ ಆರೋಪದ ಮೇಲೆ ಖಾಸಗಿ ಶಾಲೆಯೊಂದರ ಆಡಳಿತಾಧಿಕಾರಿ ಅನಿಲ್ ಅಂಬೆಕಲ್ಲು ಮೇಲೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಂದು ಆರೋಪಿಯ ಬಂಧನವಾಗಿದೆ ಎಂದು ತಿಳಿದುಬಂದಿದೆ.

. . . . . . . . .

ಎಂಟು ವರ್ಷದ ಬಾಲಕಿಗೆ ಸೈಕಲ್ ಕೊಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಮನೆಯವರಿಗೆ ಗೊತ್ತಾಗಿ ಶಾಲಾ ಆಡಳಿತ ಮಂಡಳಿಗೆ ತಿಳಿಸಿದರೆನ್ನಲಾಗಿದೆ. ಶಾಲೆಯಿಂದ ಆತನನ್ನು ವಜಾಗೊಳಿಸಬೇಕು, ಅಲ್ಲದಿದ್ದರೇ ನಾವು ಕೇಸು ನೀಡುತ್ತೇವೆ ಎಂದಿದ್ದರು.
ಶಾಲಾ ಆಡಳಿತ ಈ ಘಟನೆ ತಿಳಿದ ಕೂಡಲೇ ಆರೋಪಿಯನ್ನು ಕೆಲಸದಿಂದ ವಜಾಗೊಳಿಸಿತ್ತು. ಆದರೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆರೋಪಿಯ ಮೇಲೆ ಕೇಸು ದಾಖಲಿಸಬೇಕೆಂದು ಒತ್ತಾಯ ಕೇಳಿಬಂದಿತ್ತು. ಈ ಬಗ್ಗೆ ಮಾಹಿತಿ ತಿಳಿದ ಸುಳ್ಯ ಬಿಇಓ ರವರು ಚೈಲ್ಡ್ ಲೈನ್ ಸಂಸ್ಥೆಗೆ ತನಿಖೆ ನಡೆಸುವಂತೆ ಸೂಚಿಸಿದ್ದರು. ಚೈಲ್ಡ್ ಲೈನ್ ಸಂಸ್ಥೆಯವರು ಆದಿತ್ಯವಾರ ಮನೆಗೆ ಬಂದು ಬಾಲಕಿಯ ತಪಾಸಣೆ ನಡೆಸಿದ್ದು, ನಂತರ ಬಾಲಕಿ ತಾಯಿ ಬಳಿ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ. ಈ ಘಟನೆಯ ಬಗ್ಗೆ ಸಂತ್ರಸ್ತ ಬಾಲಕಿಯ ತಾಯಿ ನೀಡಿದ ದೂರಿನಂತೆ ಆರೋಪಿಯಾಗಿರುವ ದೇವಚಳ್ಳ ಗ್ರಾಮದ ಅನಿಲ್ ಅಂಬೆಕಲ್ಲು ಎಂಬಾತನ ವಿರುದ್ಧ ಪೋಸ್ಕೋ ಕಾಯ್ದೆಯಡಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಆರೋಪಿಯನ್ನು ಬಂಧಿಸಿ ತನಿಖೆ‌ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading