ಹರಿಹರ ಪಳ್ಳತ್ತಡ್ಕದಲ್ಲಿ ಡಿ.13ರಂದು ರಾತ್ರಿ 10 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಭಾರಿ ಶಬ್ದವೊಂದು ಕೇಳಿ ಬಂದಿರುವ ಘಟನೆ ನಡೆದಿದೆ.
ಈ ಶಬ್ದ ಕೇಳಿ ಬಂದಿದ್ದು ಜನ ಭಯಭೀತರಾಗಿದ್ದಾರೆ. ಜನರಿಗೆ ಭೂಕಂಪ ಆಯಿತೆನ್ನುವಷ್ಟು ಶಬ್ದ ಕೇಳಿಸಿದ್ದು. ಪರಿಸರದ ಮನೆಗಳಿಂದ ಜನ ಹೊರಗೆ ಓಡಿ ಬಂದಿದ್ದಾರೆ. ಕಲ್ಲೇಮಠದ ಕಡೆಯಿಂದ ಶಬ್ದ ಕೇಳಿಸಿತು ಎಂದು ಸ್ಥಳಿಯರು ತಿಳಿಸಿದ್ದಾರೆ.
ಘಟನೆ ಗ್ರಾಮದಲ್ಲಿ ಭೀತಿಯ ಜೊತೆಗೆ ಭಾರಿ ಕುತೂಹಲ ಮೂಡಿಸಿದ್ದು. ಜನರೆಲ್ಲರು ಸೇರಿಕೊಂಡು ಶಬ್ದದ ಮೂಲ ಹುಡುಕುವ ಪ್ರಯತ್ನ ನಡೆಸಿದ್ದಾರೆ.