Ad Widget

ಎಲಿಮಲೆ : ಆರ್ ಪಿ ಎಸ್ ವತಿಯಿಂದ ರಬ್ಬರ್ ಟ್ಯಾಪಿಂಗ್ ತರಬೇತಿ

ಆರ್ ಪಿ ಎಸ್ ( ರಬ್ಬರ್ ಪ್ರೊಸೆಸಿಂಗ್ ಸೆಂಟರ್) ವತಿಯಿಂದ ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಕ್ರಮ ಡಿ.7 ರಿಂದ ಡಿ.15 ರವರೆಗೆ 8 ದಿನಗಳ ಟ್ಯಾಪರ್ಸ್ ತರಬೇತಿ ಕಾರ್ಯಕ್ರಮ ಎಲಿಮಲೆಯ ಪಾಪಚ್ಚ ರವರ ರಬ್ಬರ್ ತೋಟದಲ್ಲಿ ಆರಂಭಗೊಂಡಿದೆ.

. . . . .

ಕಾರ್ಯಕ್ರಮವನ್ನು ರಬ್ಬರ್ ಬೋರ್ಡ್ ನ ಪುತ್ತೂರು ಡಿವಿಶನ್ ನ ಉಪ ರಬ್ಬರ್ ಉತ್ಪಾದಕರ ಕಮಿಷನರ್ ಚಂದ್ರನ್ ಕರಾಥ ಉದ್ಘಾಟಿಸಿ ರಬ್ಬರ್ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ರಬ್ಬರ್ ಬೋರ್ಡ್ ಫೀಲ್ಡ್ ಆಫಿಸರ್ ಶೋಭಿ ಜೋಸೆಫ್ ರವರು ರಬ್ಬರ್ ಉತ್ಪಾದನೆ ಮತ್ತು ಸಮಸ್ಯೆಗಳ ಮಾಹಿತಿ ನಡೆಸಿಕೊಟ್ಟರು. 7 ದಿನಗಳ ಕಾಲ ನಡೆಯಲಿರುವ ತರಬೇತಿಯಲ್ಲಿ ಕೊಯಿನಾಡು ತೋಮಸ್ ಕಂಪೆನಿಯ ಸೋಕ್ಕ ಲಿಂಗಂ ಮಾಹಿತಿ ನೀಡಲಿದ್ದಾರೆ. ಈ ಕಾರ್ಯಕ್ರಮದ ಜೊತೆಗೆ ಆರ್‌ಪಿಎಸ್ ಪ್ರಚಾರ ಸಭೆಯು ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಗತಿ ಆರ್.ಪಿ.ಎಸ್. ಅಧ್ಯಕ್ಷ ಹೇಮನಾಥ, ಸಂಘದ ಉಪಾಧ್ಯಕ್ಷರು, ರಬ್ಬರ್ ತೋಟದ ಮಾಲಕರಾದ ಪಾಪಚ್ಚ ಎಲಿಮಲೆ, ರಬ್ಬರ್ ಕೃಷಿಕರು, ತರಬೇತಿಗೆ ಆಗಮಿಸಿದ ರೈತರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!