ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಸುಳ್ಯ ಇದರ ವತಿಯಿಂದ ಪೋಷಣ್ ಅಭಿಯಾನದಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಐಸಿಡಿಎಸ್ ಮೇಲ್ವಿಚಾರಿಕರಿಗೆ ಸ್ಮಾರ್ಟ್ ಪೋನ್ ವಿತರಣೆ ಕಾರ್ಯಕ್ರಮವು ಸ್ತ್ರೀಶಕ್ತಿ ಭವನ ಸುಳ್ಯ ಇಲ್ಲಿ ಇಂದು ನಡೆಯಿತು.
ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಆರೋಗ್ಯ ಇಲಾಖೆ ಮತ್ತು ಶಿಶು ಕಲ್ಯಾಣ ಇಲಾಖೆ ಒಂದೆ ನಾಣ್ಯದ ಎರಡು ಮುಖಗಳಂತೆ ಕೆಲಸ ನಿರ್ವಹಿಸುತ್ತದೆ. ತಾಯಿ ಮಗುವಿನ ಆರೋಗ್ಯವೇ ಎರಡು ಇಲಾಖೆಯ ಸೇವೆಗಳ ಉದ್ದೇಶವಾಗಿದೆ. ಪರಸ್ಪರ ಅನ್ಯೋನ್ಯತೆಯಿಂದ ಕೆಲಸ ನಿರ್ವಹಿಸುವ ಮೂಲಕ ತಾಯಿ ಮಗುವಿಗೆ ಉತ್ತಮ ಸೇವೆಯನ್ನು ನೀಡಲು ಶ್ರಮಿಸಬೇಕಾಗಿದೆ , ಮೊಬೈಲ್ ನಲ್ಲಿ ಸ್ನೇಹ ಅ್ಯಪ್ ಮೂಲಕ ಮಕ್ಕಳ ನಿಖರವಾದ ಪೌಷ್ಟಿಕ ಮಟ್ಟವನ್ನು, ಅಂಗನವಾಡಿಯ ದೈನಂದಿನ ಹಾಜರಿಯನ್ನು ದಾಖಲಿಸಲು ಸಾದ್ಯವಾಗುವುದಲ್ಲದೆ ಎಲ್ಲ ಸೇವೆಗಳ ಅಂಕಿ ಅಂಶಗಳು ಅತ್ಯಂತ ಸ್ಪಷ್ಟತೆಯಿಂದ ಮತ್ತು ನಿಖರತೆಯಿಂದ ಕೂಡಿರುವುದರಿಂದ ಪ್ರತಿಯೊಂದು ಹಂತದಲ್ಲಿ ಗಮನಿಸಿ ಸಕಾಲಿಕ ಕ್ರಮಗಳನ್ನು ಕೈಗೊಳ್ಳಲು ಸಾದ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಮಾತನಾಡಿ ಸ್ಮಾರ್ಟ್ ಫೋನ್ ನಲ್ಲಿ ಕೆಲಸ ನಿರ್ವಹಣೆ ಹೆಚ್ಚಿನ ನಿಖರತೆ ಒದಗಿಸುತ್ತದೆ. ಸುಳ್ಯ ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಉತ್ತಮವಾಗಿ ಯೋಜನೆಗಳು ಅನುಷ್ಠಾನಗೊಳುತ್ತಿದ್ದು ಮುಂದಿನ ದಿನಗಳಲ್ಲಿಯೂ ಇದೇ ಕಾರ್ಯವೈಖರಿಯೊಂದಿಗೆ ಹೆಚ್ಚಿನ ಪ್ರಗತಿ ಸಾಧಿಸಲಿ ಸ್ಮಾರ್ಟ್ ಫೋನ್ ಬಳಸಿ ಸ್ಮಾರ್ಟ್ ಆಗಿ ಕೆಲಸ ನಿರ್ವಹಿಸಿ ಎಂದು ಶುಭ ಹಾರೈಸಿದರು.
ಜಿಲ್ಲಾ ನಿರೂಪಣಾಧಿಕಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಶ್ರೀಮತಿ ಶ್ಯಾಮಲಾ.ಸಿ.ಕೆ. ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು,ಅಭಿಯಾನದ ಜಿಲ್ಲಾ ಸಂಯೋಜಕರಾದ ಕು.ಬಬಿತ ಸ್ಮಾರ್ಟ್ ಫೋನ್ ನಲ್ಲಿನ ಇಲಾಖೆಯ ಸೇವೆಗಳ ಬಳಕೆಯ ಮಾಹಿತಿಯನ್ನು ನೀಡಿದರು . ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಿಕೆಯರಿಗೆ ಸ್ಮಾರ್ಟ್ ಫೋನ್ ವಿತರಿಸಲಾಯಿತು, ಈ ಸಂದರ್ಭ ಸುಳ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ರಶ್ಮಿ ಕೆ.ಎಂ. ಎಲ್ಲರನ್ನು ಸ್ವಾಗತಿಸಿದರು. ಮೇಲ್ವಿಚಾರಕಿ ಶ್ರೀಮತಿ ದೀಪಿಕಾ ವಂದಿಸಿ. ಶೈಲಾಜ .ಬಿ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿ ಶ್ರೀಮತಿ ರವಿಶ್ರಿ.ಕೆ ಶ್ರೀಮತಿ ಉಷಾ. ಕು| ವಿಜಯ ಜೇ.ಡಿ. ಪ್ರ.ದ.ಸ.ಕು| ಪೂಜ ಹಾಗೂ ಸುಳ್ಯ ಸಿ.ಡಿ.ಪಿ.ಒ ಕಚೇರಿ ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.