ಕೋವಿಡ್ ಸಂಕಷ್ಟದ ಕಾಲದಲ್ಲಿಯು ಹಾಲು ಉತ್ಪಾದಕರ ಹಿತ ಕಾಯುವ ಕಾರ್ಯ ಕೆಎಂಎಫ್ ಮೂಲಕ ಆಗಿದೆ. ಹೈನುಗಾರರು ಹೈನುಗಾರಿಕೆ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಂಘವನ್ನು ಮತ್ತಷ್ಟು ಬಲಿಷ್ಠವಾಗಿ ರೂಪಿಸಬೇಕು ಎಂದು ದ.ಕ.ಜಿಲ್ಲಾ ಹಾಲು ಒಕ್ಕೂಟ ವಿಸ್ತರಣಾಕಾರಿ ಹರೀಶ್ ಕುಮಾರ್ ಹೇಳಿದರು.
ಮುಕ್ಕೂರು ಶಾಲಾ ವಠಾರದಲ್ಲಿ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ದ.ಕ.ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ|ಕೇಶವ ಸುಳ್ಳಿ ಮಾತನಾಡಿ, ಹಾಲಿನ ಗುಣಮಟ್ಟ ಕಾಪಾಡಿಕೊಳ್ಳಲು ಅಗತ್ಯ ಒತ್ತು ನೀಡಬೇಕು. ಜಾನುವಾರುಗಳ ಕ್ಷಮತೆ ಬಗ್ಗೆಯು ಗಮನ ಹರಿಸಬೇಕು ಎಂದ ಅವರು, ಹಸಿರು ಹುಲ್ಲು ಬೆಳೆಯುವ ನಿಟ್ಟಿನಲ್ಲಿ ಕೆಎಂಎಫ್ ಪ್ರೋತ್ಸಾಹ ನೀಡುತ್ತಿದೆ ಎಂದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಸಂಘದ ಒಟ್ಟು ಬೆಳವಣಿಗೆಗೆ ಹೈನುಗಾರರ ಕೊಡುಗೆ ಮಹತ್ವದ್ದು. ಮುಂದಿನ ದಿನಗಳಲ್ಲಿ ಸಂಘದ ಮೂಲಕ ದಿನಂಪ್ರತಿ 550 ರಿಂದ 600 ಲೀ.ಹಾಲು ಸಂಗ್ರಹಣೆ ಗುರಿ, ನೂತನ ಕಟ್ಟಡ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.
ವಾಷರ್ಿಕ ಸಾಲಿನಲ್ಲಿ ಸಂಘವು 2.18 ಲಕ್ಷ ರೂ.ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.10 ರಷ್ಟು ಡಿವಿಡೆಂಟ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀ.75 ಪೈಸೆ ಬೋನಸ್ ನೀಡಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಸಿದ ಗಣೇಶ್ ಶೆಟ್ಟಿ ಕುಂಜಾಡಿ, ಗುಡ್ಡಪ್ಪ ಗೌಡ ಅಡತ್ಯಕಂಡ, ನಾರಾಯಣ ಗೌಡ ಅಡ್ಯತಕಂಡ, ಹಾಲಿನ ಡಿಗ್ರಿಗಾಗಿ ಶೇಷಪ್ಪ, ರಮೇಶ್ ಮಾರ್ಲ, ದೇವಕಿ ಕಂಬುರ್ತ್ತೋಡಿ ಅವರಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು. ಪ್ರತಿ ಸದಸ್ಯರಿಗೂ ಪ್ರೋತ್ಸಾಹಕರ ಬಹುಮಾನ ವಿತರಿಸಲಾಯಿತು ಹಾಗೂ ಎಸೆಸೆಲ್ಸಿ, ಪಿಯುಸಿ ಸಾಧಕರ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ನಿರ್ದೇಶಕರಾದ ತಿರುಮಲೇಶ್ವರ ಭಟ್ ಕಾನಾವು, ಗುಡ್ಡಪ್ಪ ಗೌಡ ಅಡ್ಯತಕಂಡ, ಪೂವಪ್ಪ ಪೂಜಾರಿ ಮುಕ್ಕೂರು, ಜತ್ತಪ್ಪ ಪೂಜಾರಿ ಕುಂಜಾಡಿ, ಜನಾರ್ದನ ಗೌಡ ಕಂಡಿಪ್ಪಾಡಿ, ಸುಬ್ರಹ್ಮಣ್ಯ ಗೌಡ ಒರುಂಕು, ಪದ್ಮಾವತಿ ರೈ ಕನ್ನೆಜಾಲು, ಕಮಲ ಕುಂಜಾಡಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸರಿತಾ ವರದಿ ಮಂಡಿಸಿದರು. ಹಾಲು ಪರೀಕ್ಷಕಿ ಲಲಿತಾ ಪಿ.ಬಿ.ಸಹಕರಿಸಿದರು.