ಸುಳ್ಯ ತಾಲೂಕು ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಎಲ್ಲಾ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದು ಇಂದು ಅಧ್ಯಕ್ಷ ಉಪಾಧ್ಯಕ್ಷರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿ ಯಾಗಿ ಮಂಗಳೂರಿನ ಉಪ ನೋಂದಾವಣಾ ಅಧಿಕಾರಿ ಗೋಪಾಲ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಅಧ್ಯಕ್ಷ ರಾಗಿ ಬಿಟ್ಟಿ ಬಿ ನೆಡುನಿಲಂ ಮತ್ತು ಉಪಾಧ್ಯಕ್ಷ ರಾಗಿ ಜಾನ್ ವಿಲಿಯಂ ಲಸ್ರಾದೋ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕ ರಾಗಿ ಜಾರ್ಜ್ ಕೆ.ಎಂ., ಲಿಜೋ ಜೋಸ್, ಡೇವಿಡ್ ಧೀರಾ ಕ್ರಾಸ್ತಾ, ಸುನಿತಾ ಡಿ.ಸೋಜಾ, ಥೋಮಸ್ ಎಂ.ಟಿ., ಮಿನಿ ನೆಲ್ಸನ್, ರಾಜು ಕ್ಷೇವಿಯರ್, ಮೈಕಲ್ ಪ್ರಾನ್ಸಿಸ್ ಪಾಯ್ಸ್, ಒವಿನ್ ಜಿ.ಎಸ್.ಪಿಂಟೊ, ಲೂಯಿಸ್ ಲೋಬೊ ಆಯ್ಕೆಯಾಗಿದ್ದಾರೆ.
- Thursday
- November 21st, 2024