ತೊಡಿಕಾನ ಗ್ರಾಮದ ದೊಡ್ಡಡ್ಕ ನಿವಾಸಿ ಉರಿಮಜಲು ವಸಂತ ಭಟ್ (70) ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಸಾಮಾಜಿಕ ಕಳಕಳಿ ಹೊಂದಿದ ಅವರು ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಕೃಷಿ ವಿಷಯದಲ್ಲಿ ಪದವಿ ಪದವಿಧರರಾದ ಅವರು ಸುಳ್ಯ ತಾಲೂಕಿನಲ್ಲಿ ಅಡಿಕೆ ಕೃಷಿಗೆ ಹಳದಿ ರೋಗ ಬಾಧಿಸಿದ್ದು ಇದಕ್ಕೆ ಪರ್ಯಾಯ ಬೆಳೆಯಾಗಿ ತಾಳೆಕೃಷಿಯನ್ನು ಪರಿಚಯಿಸಿಕೊಟ್ಟು ಅನೇಕರನ್ನು ತಾಳೆ ಕೃಷಿಕರನ್ನಾಗಿ ಮಾಡಿ ಇವರು ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ತಾಳೆ ಬೆಳೆಯುವ ಕೃಷಿಕರಾಗಿದ್ದರು. ಕೊಡಗಿನ ಪ್ರಸಿದ್ದ ತೀರ್ಥ ಕ್ಷೇತ್ರವಾದ ತಲಕಾವೇರಿಗೆ ತೊಡಿಕಾನದ ಮೂಲಕ ಸಂಪರ್ಕ ಕಲ್ಪಿಸಲು ತೊಡಿಕಾನ ಪಟ್ಟಿ ಭಾಗಮಂಡಲ ರಸ್ತೆ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದರು.
ಮೂರು ದಿನಗಳ ಹಿಂದೆ ಆನಾರೋಗ್ಯ ಕಾಣಿಸಿಕೊಂಡಾಗ ಅವರು ಆಸ್ಪತ್ರೆಗೆ ದಾಖಲುಗೊಂಡಿದ್ದರು. ಮೃತರು ಪತ್ನಿ ಪ್ರೇಮಾ ವಸಂತ್, ಪುತ್ರ ಮೃತ್ಯುಂಜಯ, ಪುತ್ರಿಯರಾದ ಶ್ರೀಮತಿ ಸಿಂಧು, ಶ್ರೀಮತಿ ಮಾನಸ, ಶ್ರೀಮತಿ ಸರಯೂ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
- Thursday
- November 21st, 2024