ಗೂನಡ್ಕದ ಬೈಲೆ ರಸ್ತೆ ಮತ್ತು ಕಡೆಪಾಲದ ಸ.ನಂ. 125 ರಲ್ಲಿ ವಾಸ್ತವ್ಯವಿರುವ 13 ಬಡ ಕುಟುಂಬಗಳಿಗೆ 94 ಸಿ ಅಡಿಯಲ್ಲಿ ಹಕ್ಕು ಪತ್ರ ನೀಡುವಂತೆ ಸಂಪಾಜೆಯ ಮುಖಂಡರಿಂದ ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಸೋಮಶೇಖರ್ ಕೊಯಂಗಾಜೆ, ಮಹಮ್ಮದ್ ಕುಂಞ ಗೂನಡ್ಕ, ಕೆ.ಆರ್.ಜಗದೀಶ್ ರೈ ಹಾಗೂ ಕಾರ್ಮಿಕ ನಾಯಕ ಕೆ.ಪಿ.ಜಾನಿಯವರನ್ನೊಳಗೊಂಡ ನಿಯೋಗವು ಪುತ್ತೂರು ಸಹಾಯಕ ಆಯುಕ್ತರಾದ ಯತೀಶ್ ಉಳ್ಳಾಲ್ ರವರನ್ನು ನವೆಂಬರ್ 27 ರಂದು ಭೇಟಿ ಮಾಡಿ ಸಂಪಾಜೆ ಗ್ರಾಮದ ಗೂನಡ್ಕದ ಬೈಲೆ ರಸ್ತೆ ಹಾಗೂ ಕಡೆಪಾಲದ 13 ಬಡ ಕುಟುಂಬಗಳಿಗೆ 94 ಸಿ ಅಡಿಯಲ್ಲಿ ಹಕ್ಕು ಪತ್ರವನ್ನು ನೀಡುವಂತೆ ಮನವಿಯನ್ನು ಮಾಡಿತು. ಮನವಿಗೆ ಸ್ಪಂದಿಸಿದ ಸಹಾಯಕ ಆಯುಕ್ತರು ಇದರ ಬಗ್ಗೆ ಪರಿಶೀಲಿಸಿ ಶೀಘ್ರ ಕ್ರಮಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.