ಕೊಲ್ಲಮೊಗ್ರು : ನ.12 ರಂದು “ನಾಯಿಗಳಿಗೆ ಉಚಿತ ಹುಚ್ಚುನಾಯಿ ರೋಗನಿರೋಧಕ ಲಸಿಕಾ ಶಿಬಿರ”

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರಿಂದ ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಕೊಲ್ಲಮೊಗ್ರು ಇದರ ಸಹಯೋಗದಲ್ಲಿ ನ.12 ಗುರುವಾರದಂದು “ನಾಯಿಗಳಿಗೆ ಉಚಿತ ಹುಚ್ಚುನಾಯಿ ರೋಗನಿರೋಧಕ ಲಸಿಕಾ ಶಿಬಿರ” ಕಾರ್ಯಕ್ರಮವು ಈ ಕೆಳಗಿನ ವೇಳಾಪಟ್ಟಿಯಂತೆ ಪೂರ್ವಾಹ್ನ 10:30 ರಿಂದ 10:45 ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಬಳಿ, 10:45 ರಿಂದ 11:00 ಕಟ್ಟ ಗೋವಿಂದನಗರ ಡಾ|| ಬಿ.ಆರ್ ಅಂಬೇಡ್ಕರ್ ಸಭಾಭವನದ ಬಳಿ, 11:00 ರಿಂದ 11:15 ಜೆಪಿ ಕಜ್ಜೋಡಿ ಅವರ ಮನೆಯ ಬಳಿ, 11:15 ರಿಂದ 11:40 ಬೆಂಡೋಡಿ ಶಾಲೆಯ ಬಳಿ, 11:40 ರಿಂದ 11:50 ಮಲ್ಲಾಜೆ ಮಯೂರ ಸರ್ಕಲ್ ಬಳಿ, 11:50 ರಿಂದ 12:00 ಕೊಲ್ಲಮೊಗ್ರು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಬಳಿ, ಅಪರಾಹ್ನ 12:00 ರಿಂದ 12:15 ಪನ್ನೆ ಬಸ್ಸು ತಂಗುದಾಣದ ಬಳಿ, 12:15 ರಿಂದ 12:30 ಕಲ್ಮಕಾರು ಹಾಲಿನ ಡೈರಿ ಬಳಿ ಹಾಗೂ 12:30 ರಿಂದ 12:45 ಅಗಲಡ್ಕ ಬಳಿ ನಡೆಯಲಿದ್ದು, ಸಾರ್ವಜನಿಕರು ತಮ್ಮ ಸಾಕು ನಾಯಿಗಳನ್ನು ಲಸಿಕೆ ನಡೆಯುವ ಸ್ಥಳಕ್ಕೆ ಕರೆತಂದು ಲಸಿಕೆ ಹಾಕಿಸಿಕೊಳ್ಳಬೇಕು, ಮೇಲೆ ತಿಳಿಸಿದ ಲಸಿಕಾ ಕೇಂದ್ರಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಲಸಿಕೆ ನೀಡಲಾಗುವುದಿಲ್ಲ ಎಂದು ಶಿಬಿರದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading