ತೊಡಿಕಾನ: ಪ್ರಧಾನಿ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನೆ | ದೇಶಸೇವೆ ಮಾಡಲು ಇನ್ನಷ್ಟೂ ಶಕ್ತಿ ದೊರೆಯಲೆಂದು ದೇವರಲ್ಲಿ ಪ್ರಾರ್ಥಿಸಿದ ಕಾರ್ಯಕರ್ತರು

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ  ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ಇಂದು ತೊಡಿಕಾನ ಮಲ್ಲಿಕಾರ್ಜುನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

. . . . . . . . .

ಭಗವಂತನು ಮೋದಿಯವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ದೇಶವನ್ನು ಮುನ್ನಡೆಸಲು ಅಗತ್ಯವಿರುವ ಅಪಾರ ಶಕ್ತಿ-ಸಾಮರ್ಥ್ಯವನ್ನು ಕರುಣಿಸಲಿ, ದೇಶದ ಪ್ರಗತಿ, ಸುರಕ್ಷತೆ ಮತ್ತು ಪ್ರತಿಯೊಬ್ಬ ಪ್ರಜೆಯ ಕಲ್ಯಾಣಕ್ಕಾಗಿ ಅವರು ತಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ದೈವಿಕ ಮಾರ್ಗದರ್ಶನ ಹಾಗೂ ಆಶೀರ್ವಾದ ಸದಾ ಇರಲಿ.
ವಿಶ್ವಗುರು ಭಾರತದ ಕನಸು ನನಸಗಲಿ ನವ ಭಾರತದ ನಿರ್ಮಾಣಕ್ಕಾಗಿ ಮತ್ತು ಭಾರತವನ್ನು ಜಗತ್ತಿನ ಮುಂಚೂಣಿ ರಾಷ್ಟ್ರವನ್ನಾಗಿ ಮಾಡಲು ಅವರು ಕೈಗೊಂಡಿರುವ ಮಹತ್ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ.
ಅಖಂಡ ಭಾರತದ ನಾಯಕತ್ವವನ್ನು ವಹಿಸಿಕೊಂಡಿರುವ ಅವರಿಗೆ, ಮುಂಬರುವ ದಿನಗಳಲ್ಲಿ ಇನ್ನಷ್ಟು ದೇಶಸೇವೆ ಮಾಡುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.

. . . . . . .

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಪುಷ್ಪಾಮೇದಪ್ಪ, ಮಂಡಲ ಸಮಿತಿಯ ಕೋಶಾಧಿಕಾರಿ ಸುಭೋದ್ ಶೆಟ್ಟಿ, ಮಂಡಲ ಸಮಿತಿ ಕಾರ್ಯದರ್ಶಿ ಭಾರತಿ ಪುರುಷೋತ್ತಮ, ಮಂಡಲ‌ ಸಮಿತಿ ಸದಸ್ಯ ಪ್ರಶಾಂತ್ ಕಾಪಿಲ, ಅರಂತೋಡು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಶಕ್ತಿಕೇಂದ್ರ ಪ್ರಮುಖರಾದ ಚಂದ್ರಶೇಖರ್, ಪ್ರಮುಖರಾದ ದೀಪಕ್ ಕುತ್ತಮೊಟ್ಟೆ, ಶೇಖರ ಚೋಡಿಪಣೆ, ಬೂತ್ ಸಮಿತಿ ಕಾರ್ಯದರ್ಶಿ ಮನ್ವಿತ್ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading