ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ವತಿಯಿಂದ ಕು| ಭಾನವಿ ಪಿ.ಎಸ್ ಕುಕ್ಕುಜಡ್ಕ ಇವರಿಗೆ ಅಭಿನಂದನೆ ಮತ್ತು ಸಹಾಯಹಸ್ತ ಕಾರ್ಯಕ್ರಮ

ಅಮರ ಸಂಘಟನಾ ಸಮಿತಿ(ರಿ.) ಸುಳ್ಯ ಇದರ ವತಿಯಿಂದ ಕು| ಭಾನವಿ ಪಿ ಎಸ್ ಕುಕ್ಕುಜಡ್ಕ ಇವರಿಗೆ ಅಭಿನಂದನೆ ಮತ್ತು ಸಹಾಯಹಸ್ತ ಕಾರ್ಯಕ್ರಮವು ಆ.23 ಆದಿತ್ಯವಾರ ಕುಕ್ಕುಜಡ್ಕದ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.

. . . . . . . . .

ದ.ಕ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 18ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 400 ಮೀ ಓಟದಲ್ಲಿ ಪ್ರಥಮ ಹಾಗೂ 200 ಮೀ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ ಕು.ಭಾನವಿ ಪಿ.ಎಸ್ ದಕ್ಷಿಣ ಭಾರತ ಮಟ್ಟಕ್ಕೆ ಹಾಗೂ ಪಂಜಾಬ್ ನ ಪಟಿಯಾಲದಲ್ಲಿ ನಡೆಯುವ ನ್ಯಾಷನಲ್ ಯೂತ್ ಗೇಮ್ಸ್ ಕ್ರೀಡಾಕೂಟಕ್ಕೆ ನೇರ ಆಯ್ಕೆಯಾದ ಇವರನ್ನು ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.ಅದರೊಂದಿಗೆ ಅವರಿಗೆ ಸುಮಾರು ಅಂದಾಜು 10,000/- ರೂ ಮೌಲ್ಯದ ರನ್ನಿಂಗ್ ಶೂ ಖರೀದಿಸಲು(ಕ್ರೀಡಾ ಪರಿಕರ) ಸಮಿತಿಯ ವತಿಯಿಂದ ಸಹಾಯಹಸ್ತವನ್ನು ನೀಡಲಾಯಿತು.

. . . . . . .

ವೇದಿಕೆಯ ಮೇಲೆ ಸಮಿತಿಯ ಅಧ್ಯಕ್ಷರಾದ ಸುಧೀರ್ ದೇವಾ, ಗೌರವಧ್ಯಕ್ಷರಾದ ಶಿವಪ್ರಸಾದ್ ದೊಡ್ಡಿಹಿತ್ಲು, ಪೋಷಕರಾದ ಸುರೇಶ ಚಾಮಡ್ಕ ಮತ್ತು ಶ್ರೀಮತಿ ಅನಿತಾ ಇವರುಗಳು ಉಪಸ್ಥಿತರಿದ್ದರು.

ಪ್ರಸ್ತುತ ಆಳ್ವಾಸ್‌ ಪದವಿಪೂರ್ವ ವಿದ್ಯಾಲಯ ಮೂಡಬಿದಿರೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಭಾನವಿ ಕುಕ್ಕುಜಡ್ಕ ಪ್ರೌಢಶಾಲೆ ಕುಕ್ಕುಜಡ್ಕದ ಹಳೆ ವಿದ್ಯಾರ್ಥಿನಿ ಕೂಡ ಆಗಿದ್ದಾರೆ. ಕಾರ್ಯಕ್ರಮದ ಮೊದಲಿಗೆ ಸಮಿತಿಯ ಸದಸ್ಯರಾದ ಹರ್ಷಿತ್ ಜಿ ಜೆ ಇವರು ಸ್ವಾಗತಿಸಿ, ಸಮಿತಿಯ ಕಾರ್ಯದರ್ಶಿ ಆದ ಕು | ಜಯಪ್ರಸಾದ್ ಸಂಕೇಶ ಇವರು ಕಾರ್ಯಕ್ರಮ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಮಾಡಿದರು. ಸಮಿತಿಯ ಸದಸ್ಯರುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading