ದ. ಕ. ಜಿಲ್ಲಾ ಟೈಲರ್ ಯೂನಿಯನ್ ಮಾಜಿ ಪ್ರಧಾನ ಕಾರ್ಯದರ್ಶಿ ಲಿಗೋದರ ಆಚಾರ್ಯ ನಿಧನ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಟೈಲರ್ ಯೂನಿಯನ್ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಲಿಗೋದರ ಆಚಾರ್ಯ ಅವರು ಇಂದು ನಿಧನರಾದರು. ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಜಯಂತಿ, ಪುತ್ರಿ ಅರ್ಚನಾ, ಪುತ್ರ ಅಭಿಷೇಕ್ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಾಳೆ ಬೆಳಗ್ಗೆ...

ಜು.17 ರಿಂದ ಪೆರುವಾಜೆಯಲ್ಲಿ 48 ದಿನಗಳ ಶ್ರೀ ಗಣಪತಿ ಹೋಮ ಹಾಗೂ ಶ್ರೀ ದುರ್ಗಾಪೂಜೆ

ಶ್ರೀ ಜಲದುರ್ಗಾದೇವೀ ದೇವಸ್ಥಾನ ಪೆರುವಾಜೆಯಲ್ಲಿ ಆಷಾಢ ಮಾಸದ ವಿಶೇಷ ಅಂಗವಾಗಿ 48 ದಿನಗಳ ಕಾಲ ಶ್ರೀ ಗಣಪತಿ ಹೋಮ ಹಾಗೂ ಶ್ರೀ ದುರ್ಗಾಪೂಜೆ ಕಾರ್ಯಕ್ರಮವು ಜುಲೈ 17 ಶುಕ್ರವಾರದಿಂದ ಆರಂಭಗೊಂಡು ಸೆಪ್ಟೆಂಬರ್ 2‌ ಬುಧವಾರದವರೆಗೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 8:00 ಗಂಟೆಗೆ ಶ್ರೀ ಗಣಪತಿ ಹೋಮ ಹಾಗೂ ರಾತ್ರಿ 7:30 ಗಂಟೆಗೆ ಶ್ರೀ ದುರ್ಗಾಪೂಜೆ ನೆರವೇರಲಿದ್ದು,...
Ad Widget

ಇಂದಿನ(ಜುಲೈ 15) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ರಬ್ಬರ್‌ನ ಎಲ್ಲಾ ವಿಭಾಗಗಳಲ್ಲೂ ಸತತ ಏರಿಕೆ ; ಕಾಳುಮೆಣಸು ಬೆಲೆಯಲ್ಲಿ ಮತ್ತೆ ಚೇತರಿಕೆ ; ಅಡಿಕೆ, ಕೊಬ್ಬರಿ ಮತ್ತು ಕೊಕ್ಕೋ ಧಾರಣೆ ಯಥಾಸ್ಥಿತಿ! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 15 ಜುಲೈ 2026ವಾರ : ಬುಧವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜುಲೈ 15) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 210ಲಕ್ಷ ಅನುದಾನ ಬಿಡುಗಡೆ

2025-26 ನೇ ಸಾಲಿನ ಲೆಕ್ಕ ಶೀರ್ಷಿಕೆ 5054 ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಅನುಮೋದನೆಗೊಂಡ ಕಾಮಗಾರಿಗಳ ವಿವರ.ಕಾಮಗಾರಿ ಮೊತ್ತ 210ಲಕ್ಷ ಸ.ಕಿ.ಪ್ರಾ ಶಾಲೆ ರಂಗತ್ತಮಲೆ ಬಳಿ 300 ಮೀಟರ್ ರಸ್ತೆ ಡಾಂಬರೀಕರಣ -10.00ಲಕ್ಷ ಸುಳ್ಯ ತಾಲ್ಲೂಕು ಮುರುಳ್ಯ ಗ್ರಾಮದ ಮಾಣಿಯಡ್ಕ - ಪುಣಚತ್ತಾರು ರಸ್ತೆ ಕಾಮಗಾರಿ — 25.00 ಲಕ್ಷ...

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ : 15-07-2026ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯಮಂಡೆಕೋಲು, ಸುಳ್ಯಮೊ: 9591969197*01,🐏ಮೇಷ ರಾಶಿ🐏*📃,ಕೈಗೊಂಡ ಕೆಲಸಗಳಲ್ಲಿ ಸಮಸ್ಯೆಗಳು, ಎದುರಾಗುತ್ತವೆ, ವ್ಯರ್ಥ ಖರ್ಚುಗಳ ಬಗ್ಗೆ ಮರುಚಿಂತನೆ ಮಾಡುವುದು ಒಳ್ಳೆಯದು. ಕುಟುಂಬ ಸದಸ್ಯರೊಂದಿಗೆ ಭಿನ್ನಭಿಪ್ರಾಯಗಳು ಉಂಟಾಗುತ್ತವೆ, ದೂರದ ಪ್ರಯಾಣವನ್ನು ಮುಂದೂಡುವುದು ಉತ್ತಮ. ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳೊಂದಿಗೆ ಕಿರಿ-ಕಿರಿ ಯುಂಟಾಗುತ್ತದೆ,ಗಮನಿಸಿ:- ಇಂದು ನಿರುದ್ಯೋಗಿಗಳ ಪ್ರಯತ್ನಗಳು ನಿಧಾನವಾಗುತ್ತವೆ,ಪರಿಹಾರ:-ತಂದೆ ಅಥವಾ ತಂದೆ ಹಂತಹ ವ್ಯಕ್ತಿಯಿಂದ ಆಶೀರ್ವಾದ...

ಆಯುರ್ವೇದ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಡಾ.ಹಿತಾ  ಮಡ್ತಿಲರಿಗೆ ಸನ್ಮಾನ

ಆಯುರ್ವೇದ ವೈದ್ಯಕೀಯ ಸ್ನಾತಕೋತರ ಪದವಿ ಪರೀಕ್ಷೆಯಲ್ಲಿ ಯೋಗ ಮತ್ತು ಸ್ವಸ್ತ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ನೊಂದಿಗೆ ಚಿನ್ನದ ಪದಕ ಪಡೆದ ಡಾ. ಹಿತಾ ಮಡ್ತಿಲ ಇವರಿಗೆ ಐವರ್ನಾಡು ಭಾರತೀಯ ಜನತಾ ಪಕ್ಷದ ಶಕ್ತಿ ಕೇಂದ್ರ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನವನ್ನು ಶ್ರೀಮತಿ  ರೇವತಿ ಬೋಳುಗುಡ್ಡೆ ಮತ್ತು ಶ್ರೀಮತಿ ಭಾರತಿ ಗುತ್ತಿಗಾರು ಮೂಲೆ ನೆರವೇರಿಸಿದರು. ಈ ಸಂದರ್ಭದಲ್ಲಿ...

ಹಳೆಗೇಟು : ಬಾವಿಗೆ ಬಿದ್ದ ಆಡಿನ ರಕ್ಷಣೆ

ಸುಳ್ಯದ ಹಳೆಗೇಟು ಮಿಲಿಟರಿ ಗ್ರೌಂಡ್ ಹತ್ತಿರ 25 ಅಡಿ ಆಳದ ಬಾವಿಗೆ ಬಿದ್ದ ಆಡನ್ನು ಸುಳ್ಯ ಅಗ್ನಿಶಾಮಕ ಠಾಣೆಯ ನೇತೃತ್ವದಲ್ಲಿ ರಕ್ಷಣೆ ಮಾಡಲಾಯಿತು.ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಕಿರಣ್ ಕುಮಾರ್ ಎಸ್, ಸಿಬ್ಬಂದಿಗಳಾದ ಆನಂದ, ಚಂದ್ರಶೇಖರ, ರಾಜೇಶ ಕೆ, ರಾಜೇಶ್ ಎಸ್.ಕೆ., ಮೋಹನ್ ಬಾಬು ಹಾಗೂ ಹರ್ಷವರ್ಧನ ರವರು ಭಾಗವಹಿಸಿದ್ದರು.

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗದ ಶಾಲಾ ಸಂಸತ್ತು ರಚನೆ – ಮುಖ್ಯಮಂತ್ರಿಯಾಗಿ ಜೆ.ಸನ್ವಿತ್ ರೈ ; ಉಪಮುಖ್ಯಮಂತ್ರಿಯಾಗಿ ಧ್ಯಾನ್ ಕೆ.ಆರ್

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ, ಪ್ರಾಥಮಿಕ ವಿಭಾಗದಲ್ಲಿ ಶಾಲಾ ಸಂಸತ್ತನ್ನು ಚುನಾವಣೆಯ ಮೂಲಕ ರಚಿಸಲಾಯಿತು. ಜೂ.11ರಂದು ಗೌಪ್ಯ ಮತದಾನದ ಮೂಲಕ ಚುನಾವಣೆಯನ್ನು ನಡೆಸಲಾಯಿತು. ಶಾಲಾ ಮುಖ್ಯ ಶಿಕ್ಷಕರಾದ ಮಾಯಿಲಪ್ಪ.ಜಿ ಅವರ ಮಾರ್ಗದರ್ಶನದಲ್ಲಿ ಶಿಕ್ಷಕರಾದ ರಾಜನಾಯಕ.ಟಿ ಚುನಾವಣಾ ಅಧಿಕಾರಿಯಾಗಿ ಸಹಕರಿಸಿದರು. ಶಿಕ್ಷಕರುಗಳಾದ ಶಾಂತಕುಮಾರಿ, ಪಾರ್ವತಿ.ಕೆ, ಸೌಮ್ಯ.ಎಂ, ಅನ್ನಪೂರ್ಣ ಬಿ.ಸಿ, ಶ್ರುತಿ.ಕೆ, ಯಶ್ವಿತಾ ಮತ್ತು ವಿನಯ್ ಇವರುಗಳು ಚುನಾವಣಾ...

ಸುಳ್ಯ ತಾಲೂಕು ಆಸ್ಪತ್ರೆಯ ಆಹಾರ ವಿತರಣೆಯಲ್ಲಿ ತಾರತಮ್ಯ ಆರೋಪ: ಸಿಎಂಗೆ ಡಯಾಲಿಸಿಸ್ ರೋಗಿಗಳು, ಸಿಬ್ಬಂದಿಯಿಂದ ದೂರು

ಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳು ಹಾಗೂ ಡಯಾಲಿಸಿಸ್ ರೋಗಿಗಳಿಗೆ ವಿತರಿಸಲಾಗುತ್ತಿರುವ ಆಹಾರದಲ್ಲಿ ತಾರತಮ್ಯ, ಆಹಾರ ದುರುಪಯೋಗ ಹಾಗೂ ಕರ್ತವ್ಯ ಲೋಪ ನಡೆಯುತ್ತಿದೆ ಎಂದು ಆರೋಪಿಸಿ, ಸಂಬಂಧಪಟ್ಟ ಆಹಾರ ತಯಾರಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ಡಯಾಲಿಸಿಸ್ ರೋಗಿಗಳು ಮತ್ತು ಸಿಬ್ಬಂದಿ ವರ್ಗದವರು ದೂರು ಸಲ್ಲಿಸಿದ್ದಾರೆ.ದೂರಿನಲ್ಲಿ, ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ನೀಡಲಾಗುವ ಆಹಾರದ ಸೌಲಭ್ಯವನ್ನು ಸಿಬ್ಬಂದಿಗಳಿಗೂ...

ಚೆಂಬು : ಶ್ರಮದಾನ

ಶ್ರೀರಾಮ ಯುವಕ ಸಂಘ ದಬ್ಬಡ್ಕ-ಕಾಂತಬೈಲು, ಗ್ರಾಮ ಪಂಚಾಯತ್ ಚೆಂಬು, ಸಹಕಾರಿ ಸಂಘ, ಅರಣ್ಯ ಸಮಿತಿ ಚೆಂಬು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಸಂಪಾಜೆ ಹಾಗೂ ಊರಿನ ಸ್ಥಳೀಯರ ಸಹಕಾರದೊಂದಿಗೆ ವಿದ್ಯುತ್ ತಂತಿಗಳಿಗೆ ತಾಗಿಕೊಂಡಿರುವ ಮರದ ಕೊಂಬೆಗಳ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡಗಂಟಿಗಳ ಸ್ವಚ್ಛತಾ ಶ್ರಮದಾನ ಕಾರ್ಯವು ಜು.12 ರಂದು ನಡೆಯಿತು.
Loading posts...

All posts loaded

No more posts

error: Content is protected !!