ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗದ ಶಾಲಾ ಸಂಸತ್ತು ರಚನೆ – ಮುಖ್ಯಮಂತ್ರಿಯಾಗಿ ಜೆ.ಸನ್ವಿತ್ ರೈ ; ಉಪಮುಖ್ಯಮಂತ್ರಿಯಾಗಿ ಧ್ಯಾನ್ ಕೆ.ಆರ್

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ, ಪ್ರಾಥಮಿಕ ವಿಭಾಗದಲ್ಲಿ ಶಾಲಾ ಸಂಸತ್ತನ್ನು ಚುನಾವಣೆಯ ಮೂಲಕ ರಚಿಸಲಾಯಿತು. ಜೂ.11ರಂದು ಗೌಪ್ಯ ಮತದಾನದ ಮೂಲಕ ಚುನಾವಣೆಯನ್ನು ನಡೆಸಲಾಯಿತು. ಶಾಲಾ ಮುಖ್ಯ ಶಿಕ್ಷಕರಾದ ಮಾಯಿಲಪ್ಪ.ಜಿ ಅವರ ಮಾರ್ಗದರ್ಶನದಲ್ಲಿ ಶಿಕ್ಷಕರಾದ ರಾಜನಾಯಕ.ಟಿ ಚುನಾವಣಾ ಅಧಿಕಾರಿಯಾಗಿ ಸಹಕರಿಸಿದರು. ಶಿಕ್ಷಕರುಗಳಾದ ಶಾಂತಕುಮಾರಿ, ಪಾರ್ವತಿ.ಕೆ, ಸೌಮ್ಯ.ಎಂ, ಅನ್ನಪೂರ್ಣ ಬಿ.ಸಿ, ಶ್ರುತಿ.ಕೆ, ಯಶ್ವಿತಾ ಮತ್ತು ವಿನಯ್ ಇವರುಗಳು ಚುನಾವಣಾ ಕರ್ತವ್ಯ ನಿರ್ವಹಿಸಿದರು. 

. . . . . . . . .

ನಾಯಕನ ಸ್ಥಾನಕ್ಕೆ 7ನೇ ತರಗತಿಯ ವಿದ್ಯಾರ್ಥಿಗಳಾದ ಜೆ.ಸನ್ವಿತ್ ರೈ, ಯುಕ್ತ ಕೆ.ಎಚ್, ರಕ್ಷಿತಾ.ಆರ್, ಚರಿಷ್ಮಾ.ಯು, ದಿಶಾ ಬಿ.ಎಲ್ ಮತ್ತು ಅಕ್ಷಯ್ ಸಿ.ಪಿ ಹಾಗೂ ಶಾಲಾ ಉಪನಾಯಕನ ಸ್ಥಾನಕ್ಕೆ 6ನೇ ತರಗತಿಯ ವಿದ್ಯಾರ್ಥಿಗಳಾದ ನಮನ್ ಕೃಷ್ಣ.ಎಂ, ಜಾಹ್ನವಿ ಶೆಟ್ಟಿಗಾರ್, ಧ್ಯಾನ್ ಕೆ.ಆರ್, ಭಾಮಿನಿ ಸಿ.ಕೆ ಮತ್ತು ಪ್ರದೀಶ್ ಎಂ.ಎಸ್ ಸ್ಪರ್ಧಿಸಿದ್ದರು. ಮತದಾನ ದಿನದಂದು ಶಾಲಾ ವಿದ್ಯಾರ್ಥಿಗಳು ತುಂಬಾ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡು ತಮ್ಮ ನೆಚ್ಚಿನ ನಾಯಕ ಮತ್ತು ಉಪನಾಯಕನ ಆಯ್ಕೆ ಮಾಡಿದರು. ಪ್ರಬಲ ಪೈಪೋಟಿಯಲ್ಲಿ ನಾಯಕನ ಸ್ಥಾನಕ್ಕೆ ಜೆ.ಸನ್ವಿತ್ ರೈ 7 ನೇತರಗತಿ ಹಾಗೂ ಶಾಲಾ ಉಪನಾಯಕನ ಸ್ಥಾ ನಕ್ಕೆ ಧ್ಯಾನ್ ಕೆ.ಆರ್ 6ನೇ ತರಗತಿ ಆಯ್ಕೆಗೊಂಡರು.

. . . . . . .

2026 – 27 ನೇ ಸಾಲಿನ ಮುಖ್ಯಮಂತ್ರಿಯಾಗಿ ಜೆ.ಸನ್ವಿತ್ ರೈ, ಉಪಮುಖ್ಯಮಂತ್ರಿಯಾಗಿ ಧ್ಯಾನ್ ಕೆ.ಆರ್, ಗೃಹ ಮಂತ್ರಿ ದಿಶಾ ಬಿ.ಎಲ್, ಉಪ ಗೃಹಮಂತ್ರಿ ಧನೇಶ್, ಶಿಕ್ಷಣ ಮಂತ್ರಿ ಶ್ಲಾಘ್ಯ ಕೆ.ಎಸ್, ಉಪ ಶಿಕ್ಷಣ ಮಂತ್ರಿ ಯುಕ್ತ ಕೆ.ಎಚ್, ವಾರ್ತಾ ಮಂತ್ರಿ ಭಕ್ತಿ, ಉಪ ವಾರ್ತಾ ಮಂತ್ರಿ ಭಾಮಿನಿ ಸಿ.ಕೆ, ಆರೋಗ್ಯ ಮಂತ್ರಿ ವಲ್ಲೀಶರಾಮ.ಎಂ, ಉಪ ಆರೋಗ್ಯ ಮಂತ್ರಿ ಉನ್ನತಿ, ಸಾಂಸ್ಕೃತಿಕ ಮಂತ್ರಿ ರಕ್ಷಿತಾ.ಆರ್ , ಮೃದುಲಾ, ಜೆ.ಸನ್ನಿಧಿ, ಉಪ ಸಾಂಸ್ಕೃತಿಕ ಮಂತ್ರಿ ಜೆ.ಸನ್ನಿಧಿ, ಆಹಾರ ಮಂತ್ರಿ ಆದರ್ಶ್ ಕೆ, ಉಪ ಆಹಾರ ಮಂತ್ರಿ ಪ್ರದೀಶ್ ಎಂ.ಎಸ್, ನೀರಾವರಿ ಮಂತ್ರಿ ಸೌರವ್, ಉಪ ನೀರಾವರಿ ನಮನ್ ಕೃಷ್ಣ, ತಂತ್ರಜ್ಞಾನ ಮಂತ್ರಿ ಪ್ರಶ್ವಿತ್ ಎಂ.ಆರ್, ಉಪ ತಂತ್ರಜ್ಞಾನ ಮಂತ್ರಿ ಮೌರ್ಯ, ಕ್ರೀಡಾ ಮಂತ್ರಿ ಗೌಶಿಕ್.ಆರ್, ಉಪ ಕ್ರೀಡಾ ಮಂತ್ರಿ ದನ್ವಿತ್ ಹಾಗೂ ವಿರೋಧ ಪಕ್ಷದ ನಾಯಕಿ ಚರಿಷ್ಮಾ.ಯು‌, ಉಪ ನಾಯಕ ಅಕ್ಷಯ್ ಸಿ.ಪಿ ಆಯ್ಕೆಯಾದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading