“ಅಪಾಯಕಾರಿ ಮರ ಹಾಗೂ ಗೆಲ್ಲುಗಳನ್ನು ತೆರವುಗೊಳಿಸಿ” : ಗ್ರಾಮಸ್ಥರ ಒತ್ತಾಯ – ಸುಬ್ರಹ್ಮಣ್ಯದಲ್ಲಿ ಮೆಸ್ಕಾಂ ಜನ ಸಂಪರ್ಕ ಸಭೆ – ಹಲವು ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟ ವಿದ್ಯುತ್ ಬಳಕೆದಾರರು

ಸುಬ್ರಹ್ಮಣ್ಯ ಜುಲೈ 29 : “ಮಳೆಗಾಲದ ಈ ಸಂದರ್ಭದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿರುವ ಹೆಚ್ಚಿನ ಕಡೆಗಳಲ್ಲಿ ಮರ ಹಾಗೂ ಗೆಲ್ಲುಗಳು ಬಾಗಿದ ಸ್ಥಿತಿಯಲ್ಲಿದ್ದು ಯಾವುದೇ ಸಮಯಕ್ಕೆ ಅಪಾಯ ತಂದೊಡ್ಡಬಹುದು. ಆದ್ದರಿಂದ ವಿದ್ಯುತ್ ಲೈನ್ ಪಕ್ಕದಲ್ಲಿರುವ ಅಪಾಯಕಾರಿ ಮರ ಹಾಗೂ ಗೆಲ್ಲುಗಳನ್ನು ಕೂಡಲೇ ತೆರವುಗೊಳಿಸಿ” ಎಂದು ಗ್ರಾಮಸ್ಥರು ಇಲಾಖೆಯವರನ್ನು ಅಗ್ರಹಿಸಿದ್ದಾರೆ.

. . . . . . . . .

ಬುಧವಾರ ಸುಬ್ರಹ್ಮಣ್ಯದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರಗಿದ ಸುಳ್ಯ ಹಾಗೂ ಸುಬ್ರಹ್ಮಣ್ಯ ವಿದ್ಯುತ್ ಉಪವಿಭಾಗಗಳ ಗ್ರಾಹಕರ ಜನ ಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿದರು. ನಿಂತಿಕಲ್ಲು ಕುಲಾಯಿತೋಡಿಯಲ್ಲಿ ನಿರ್ಮಿಸಲಿರುವ 33 ಕೆ.ವಿ ವಿದ್ಯುತ್ ಸಬ್‌ಸ್ಟೇಷನ್ ಅನ್ನು ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು, ಕಡಬದಿಂದ ಪಂಜಕ್ಕೆ ಬರುವ 11 ಕೆ.ವಿ ವಿದ್ಯುತ್ ಲೈನ್ ನಲ್ಲಿ ಆಗಾಗ ತೊಂದರೆಗಳು ಇರುವ ಕಾರಣ ಸರಿಪಡಿಸಬೇಕು, ಹರಿಹರ ಪಳ್ಳತಡ್ಕದಲ್ಲಿ ಆಗಾಗ ವಿದ್ಯುತ್ ಕಣ್ಣಾಮುಚ್ಚಾಲೆ ಆಗುತ್ತಿರುವುದನ್ನು ಸರಿಪಡಿಸಬೇಕು, ಹಾಗೆಯೇ ಬೆಂಡೋಡಿಯಲ್ಲಿ ನೂತನ ವಿದ್ಯುತ್ ಪರಿವರ್ತಕ ಅಳವಡಿಸಬೇಕು, ಸುಬ್ರಹ್ಮಣ್ಯ ದೇವರಗದ್ದೆ ರುದ್ರಪಾದದಲ್ಲಿ ವಾಲಿದ ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕು, ಹೊಸಳ್ಳಿಕೆ ಭಾಗದಲ್ಲಿ ಮಾರ್ಗದ ಬದಿ ಇರುವ ಒಣಗಿದ ಮರಗಳನ್ನು ತೆರೆವುಗೊಳಿಸಬೇಕು ಬೆಳ್ಳಾರೆ ಕೊಡಿಯಾಲದಲ್ಲಿ ರಿಕಂಡಕ್ಟಿಂಗ್ ಆಗಬೇಕಾಗಿದೆ, ಪಂಜ ಬಳ್ಳಾಜೆ ಎಂಬಲ್ಲಿ ಲೋ ವೋಲ್ಟೇಜ್ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಬೇಕು” ಎಂದು ವಿದ್ಯುತ್ ಬಳಕೆದಾರರಾದ ವಸಂತಕುಮಾರ್ ಕೆದಿಲ, ಕರುಣಾಕರ ಆಳ್ವ, ಈಶ್ವರ ಆಳ್ವ, ಗುಣವರ್ಧನ ಕೆದಿಲ, ಸತ್ಯನಾರಾಯಣ ಬೆಂಡೂಡಿ, ಲೋಕೇಶ್ ಬರೆಮೇಲು, ಲೋಕೇಶ ಬೋಳ್ಳಾಜೆ, ಸತೀಶ್ ಬೋಳ್ಳಾಜೆ, ಪ್ರಶಾಂತ್ ಕೋಡಿಬೈಲ್, ಶಿವರಾಮ ರೈ, ಮುಂತಾದವರು ಅಗ್ರಹಿಸಿದರು.

. . . . . . .

ದಿನಂಪ್ರತಿ ಸಾವಿರಾರು ಭಕ್ತಾದಿಗಳು ಬರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹಗಲು ಹಾಗೂ ರಾತ್ರಿ 2 ಪಾಳ್ಯಗಳಲ್ಲಿ ಎರಡು ಜನ ಲೈನ್ ಮ್ಯಾನ್ ಗಳು ಇರಲೇಬೇಕು, ಕುಮಾರಧಾರ ಸೇತುವೆಯಿಂದ ಕುಲ್ಕುಂದವರೆಗಿನ ಬೀದಿ ದೀಪಗಳನ್ನು ಕೂಡಲೇ ಸರಿಪಡಿಸಬೇಕು” ಎಂದು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜೇಶ್ ಎನ್.ಎಸ್ ಒತ್ತಾಯಿಸಿದರು. ಗ್ರಾಹಕರ ಬೇಡಿಕೆ ಸಮಸ್ಯೆಗಳಿಗೆ ಉತ್ತರಿಸಿದ ಪುತ್ತೂರು ಮೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಅವರು “ಈಗಾಗಲೇ ಹೆಚ್ಚಿನೆಲ್ಲಾ ಕಡೆಗಳಲ್ಲಿ ಮಂಜೂರಾದ ಮೆಸ್ಕಾಂ ಕಾಮಗಾರಿಗಳು ನಡಿಯುತ್ತಿದೆ, ಮುಂದೆ ಟೆಂಡರ್ ಆಗುವಂತ ಕಾಮಗಾರಿಗಳನ್ನು ಶೀಘ್ರವಾಗಿ ಮಾಡಲಾಗುವುದು, ಅರಣ್ಯ ಭಾಗಗಳಾದ ಹರಿಹರ, ಬಾಳುಗೋಡು, ಕೊಲ್ಲಮೊಗ್ರ, ಕಲ್ಮಕಾರು ಭಾಗಗಳಲ್ಲಿ ಕವರಿಂಗ್ ಕಂಡಕ್ಟರ್ ಹಾಕಲಾಗುವುದು. ಈಗಾಗಲೇ 85 ಕಿಲೋ ಮೀಟರ್ ವೈರ್ ಮಂಜುರಾಗಿದೆ ಎಂದರು.

ವೇದಿಕೆಯಲ್ಲಿ ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್ ಸಫಲ್ಯ, ಸುಳ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್ ಉಪಸ್ಥಿತರಿದ್ದರು. ಸಭೆಯಲ್ಲಿ ಕೆ.ಡಿ.ಪಿ ಸದಸ್ಯರಾದ ಪುರುಷೋತ್ತಮ ಕೆಂಬಾರೆ, ಶಿವರಾಮ ರೈ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರುಗಳಾದ ದಿನೇಶ್ ಹಾಲೆಮಜಲು, ಜಮಾಲುದ್ದೀನ್, ಪುರುಷೋತ್ತಮ ಮುಂಡೋಡಿ, ಹಾಗೂ ಗಣೇಶ್ ಚಾರ್ಮತ ಉಪಸ್ಥಿತರಿದ್ದರು.

ಸಹಾಯಕ ಇಂಜಿನಿಯರ್ ಗಳಾದ ಚಿದಾನಂದ.ಕೆ, ಹರಿಕೃಷ್ಣ, ಕಿರಿಯ ಇಂಜಿನಿಯರ್‌ಗಳಾದ ಪ್ರಸಾದ್ ಕೆ.ವಿ, ಲೋಕೇಶ್.ಎ, ಮಹೇಶ್, ಬಾಲಕೃಷ್ಣ, ಸುನಿತಾ ಶೆಟ್ಟಿ, ಪರಶುರಾಮ, ಹಿರಿಯ ಸಹಾಯಕರಾದ ಗಣೇಶ್.ಕೆ ಹಾಗೂ ಅಶೋಕ್ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading