ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಮಹಾಸಭೆ – ಅಧ್ಯಕ್ಷರಾಗಿ ಪೂರ್ಣಿಮಾ ಪೆರುವಾಜೆ, ಕಾರ್ಯದರ್ಶಿ ಸುಧಾ ಬೀಡು, ಕೋಶಾಧಿಕಾರಿ ಶೋಭನಾ ಪನ್ನೆ

ಸ್ನೇಹ ಶ್ರೀ ಮಹಿಳಾ ಮಂಡಲ ಬೆಳ್ಳಾರೆ ಇದರ 2025-26 ರ ಸಾಲಿನ ವಾರ್ಷಿಕ ಮಹಾಸಭೆಯು ಜುಲೈ 19ರಂದು ಸ್ನೇಹಿತರ ಕಲಾಸಂಘ ಬೆಳ್ಳಾರೆ ಇದರ ಸಭಾಂಗಣದಲ್ಲಿ ಅಧ್ಯಕ್ಷೆ ಪೂರ್ಣಿಮಾ ಪಡ್ಪು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಶೋಭಾ ಕುರುಂಬುಡೇಲು ಸಭೆಗೆ ಮಂಡಿಸಿದರು. ವಾರ್ಷಿಕ ಜಮಾಖರ್ಚು ಲೆಕ್ಕಪತ್ರವನ್ನು ಕೋಶಾಧಿಕಾರಿ ಕುಸುಮ ಕುರುಂಬುಡೇಲು ಸಭೆಗೆ ಮಂಡಿಸಿದರು. ನಂತರ ಗತವರ್ಷದ ಕಾರ್ಯಕ್ರಮಗಳ ಅವಲೋಕನ ನಡೆಯಿತು.

. . . . . . . . .

ವೇದಿಕೆಯಲ್ಲಿ ಜತೆ ಕಾರ್ಯದರ್ಶಿ ಶೋಭನ ಪನ್ನೆ ಉಪಸ್ಥಿತರಿದ್ದರು. 2026 -27ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

. . . . . . .

ಅಧ್ಯಕ್ಷರಾಗಿ ಪೂರ್ಣಿಮಾ ಪೆರುವಾಜೆ, ಕಾರ್ಯದರ್ಶಿ ಸುಧಾ ಬೀಡು, ಕೋಶಾಧಿಕಾರಿ ಶೋಭನಾ ಪನ್ನೆ, ಉಪಾಧ್ಯಕ್ಷರು ಸುಶೀಲಾ ಬಸ್ತಿಗುಡ್ಡೆ, ಜತೆ ಕಾರ್ಯದರ್ಶಿ ಭಾರತಿ ಕೊಲಂಬಳ, ನಿಕಟಪೂರ್ವ ಅಧ್ಯಕ್ಷರಾಗಿ ಪೂರ್ಣಿಮಾ ಪಡ್ಪು, ಕಾರ್ಯಕಾರಿ ಸಮಿತಿ ಸದಸ್ಯರು, ಸವಿತಾ ಪೈ ಬೆಳ್ಳಾರೆ, ಸುಲೋಚನಾ ಕುಂಡಡ್ಕ, ಮಮತಾ ತಡಗಜೆ, ವೀಣಾ ಬೀಡು, ಇಂದಿರಾ ದಾಸನಮಜಲು ಇವರುಗಳನ್ನು ಸರ್ವಾನುಮತದಿಂದ ಆರಿಸಲಾಯಿತು.

ಚುನಾವಣಾಧಿಕಾರಿಗಳಾಗಿ ಪೂರ್ವಧ್ಯಕ್ಷರುಗಳಾದ ಸುಜಾತ ಚೀಮುಳ್ಳು ಹಾಗೂ ಪುಷ್ಪ ಪಾಟಾಜೆ ನಿರ್ವಹಿಸಿದರು. ಶೋಭಾ ಕುರುಂಬುಡೇಲು ಸ್ವಾಗತಿಸಿ ವಾರಿಜ ಪಾಟಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading