ಸುಬ್ರಹ್ಮಣ್ಯ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

ಸುಬ್ರಹ್ಮಣ್ಯ ಜುಲೈ 19 : ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶನಿವಾರ ರಾತ್ರಿ ಏನೇಕಲ್ಲು ಕೃಷಿಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.

. . . . . . . . .

ಆರಂಭದಲ್ಲಿ ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ವಹಿಸಿದ್ದರು. ನಿರ್ಗಮಿತ ಅಧ್ಯಕ್ಷ ಜಯಪ್ರಕಾಶರ ಮನದಾಳದ ಮಾತುಗಳು ಹಾಗೂ ಕಾರ್ಯದರ್ಶಿ ಭವಾನಿ ಶಂಕರ್ ಪೈಲಾಚೆ ಅವರ ವಿಸ್ತೃತವಾದ ವರದಿಯ ನಂತರ ನೂತನ ಅಧ್ಯಕ್ಷರಿಗೆ ಪದ ಪ್ರಧಾನ ನಡೆಯಿತು. ಪದ ಪ್ರಧಾನ ಅಧಿಕಾರಿಯಾಗಿ 2027-28ರ ಸಾಲಿನ ಜಿಲ್ಲಾ ಗವರ್ನರ್ ಯಶಸ್ವಿ ಸೋಮಶೇಖರ ಅವರು ನೂತನ ಅಧ್ಯಕ್ಷ ರೋಹಿತ್ ಬಿ.ಬಿ ಅವರಿಗೆ ಕಾಲರ್ ತೊಡಿಸಿ, ದಂಡಪ್ರದಾನ ಮಾಡಿದರು. ತದನಂತರ ನೂತನ ಕಾರ್ಯದರ್ಶಿ ಪ್ರಶಾಂತ್ ಕೋಡಿಬೈಲ್, ಸಾರ್ಜೆಂಟ್ ಅಟ್ಆರಂ ಗಿರೀಶ್ ಹಾಗೂ ಪದಾಧಿಕಾರಿಗಳಿಗೆ ರೋಟರಿ ಪಿನ್ನು ತೊಡಿಸಿ ಮಾತನಾಡುತ್ತಾ “ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ಇಂದು ವಿಶ್ವದಾದ್ಯಂತ ಸಮಾಜಮುಖಿ ಚಟುವಟಿಕೆಗಳನ್ನು, ಸೇವೆಗಳನ್ನು ನಡೆಸುತ್ತಾ ಬಂದಿದೆ. ಸಮಾಜದಲ್ಲಿರುವ ಅಶಕ್ತರಿಗೆ, ನಿರ್ಗತಿಕರಿಗೆ, ಹಾಗೂ ಅವಶ್ಯಕತೆ ಇರುವವರಿಗೆ, ಸದಾ ಸಹಾಯ ಹಸ್ತವನ್ನು ನೀಡುತ್ತಾ ಬಂದಿದೆ. ಇಂದು ವಿಶ್ವದಾದ್ಯಂತ ಪಲ್ಸ್ ಪೋಲಿಯೋದಲ್ಲಿ ಪ್ರಮುಖ ಪಾತ್ರವಹಿಸಿ ಪೋಲಿಯೋವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಲ್ಲಿ ಮಹತ್ತರ ಪಾತ್ರವಹಿಸಿದೆ. ಸುಬ್ರಹ್ಮಣ್ಯ ರೋಟರಿ ಕ್ಲಬ್ ಕಳೆದ 23 ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಸೇವೆಗಳನ್ನ ನಡೆಸ್ತಾ ಬಂದಿರೋದು ಶ್ಲಾಘನೀಯ” ಎಂದರು. ಇದೇ ಸಂದರ್ಭದಲ್ಲಿ ಪವನ್ ಹ್ಯಾರಿಸ್ ಫೆಲೋಶಿಪ್ ಗೆ ದೇಣಿಗೆ ನೀಡಿ ಪದವಿಯನ್ನು ಪಡೆದ ಸುಬ್ರಹ್ಮಣ್ಯ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ವಿಶ್ವನಾಥ ನಡುತೋಟ ಹಾಗೂ ಪೂರ್ವ ಕಾರ್ಯದರ್ಶಿ ಚಿದಾನಂದ ಕುಳ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಸುಬ್ರಹ್ಮಣ್ಯ ಪರಿಸರದ ಶಾಲಾ ಕಾಲೇಜುಗಳ ಎಸ್.ಎಸ್. ಯಎಲ್.ಸಿ ಹಾಗೂ ಪಿಯುಸಿ ವಿವಿಧ ವಿಭಾಗಗಳಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

. . . . . . .

ಸುಬ್ರಹ್ಮಣ್ಯ ರೋಟರಿ ಕ್ಲಬ್ ಗೆ ನೂತನ ಸದಸ್ಯರಾಗಿ ಸುಬ್ರಹ್ಮಣ್ಯ ಸವಾರಿ ಮಂಟಪದ ನಿವಾಸಿ ವೆಂಕಟೇಶ್ ಅವರನ್ನು ಸೇರಿಸಿಕೊಳ್ಳಲಾಯಿತು. ನಿಕಟಪೂರ್ವ ಅಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ಭವಾನಿ ಶಂಕರ್.ಎ.ಜಿ, ಬಾಲಕೃಷ್ಣ ಪೈ ಅವರುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಜಿ.ಎಸ್.ಆರ್. ಸವಣೂರು ಸೀತಾರಾಮ ರೈ ಉಪಸ್ಥಿತರಿದ್ದು ಶುಭ ಹಾರೈಸಿದರು.

ಅಸಿಸ್ಟೆಂಟ್ ಗವರ್ನರ್ ರಜಾಕ್ ಕಬಕ್ಕಾಕರ್ ಅವರು ರೋಟೋರಿಯ ಸ್ಮರಣೆ ಸಂಚಿಕೆಯನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು. ಜೋನಲ್ ಲೆಫ್ಟಿನೆಂಟ್ ಚಂದ್ರಶೇಖರ ನಾಯರ್ ಶುಭ ಹಾರೈಸಿದರು. ಸುಳ್ಯ ರೋಟರಿ ಅಧ್ಯಕ್ಷ ಲತಾ ಮಧುಸೂದನ್ ಶುಭ ಸಂಶನೆಗೈದರು. ಇದೇ ಸಂದರ್ಭದಲ್ಲಿ ಡಾ. ರವಿ ಕಕ್ಕೆಪದವು ನೇತೃತ್ವದಲ್ಲಿ ನಡೆಯುವ ಮುಂದಿನ ಯೋಜನೆ ಯಾದ “ಸ್ವಚ್ಛ ಸುಬ್ರಮಣ್ಯ” ಬ್ಯಾನರ್ ಅನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ನೆರೆಯ ಸುಳ್ಯ, ಬೆಳ್ಳಾರೆ , ಪುತ್ತೂರು, ಉಪ್ಪಿನಂಗಡಿ ಕ್ಲಬ್ ಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಪೂರ್ವಾಧ್ಯಕ್ಷ ಗೋಪಾಲ ಎಣ್ಣೆಮಜಲು ನಿರೂಪಿಸಿದ ಕಾರ್ಯಕ್ರಮದಲ್ಲಿ ಪೂರ್ವ ಏ.ಜಿ.ರಾಮಕೃಷ್ಣ ಮಲ್ಲಾರ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಶಾಂತ್ ಕೋಡಿಬೈಲ್ ಧನ್ಯವಾದ ಸಮರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading