‘ರೋಟರಿ ಕ್ಲಬ್ ಬೆಳ್ಳಾರೆ ಟೌನ್’ಗೆ ನೂತನ ಸಾರಥ್ಯ ; ಜು.25ರಂದು ಪದಗ್ರಹಣ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ

ಬೆಳ್ಳಾರೆ : 2026-27ನೇ ಸಾಲಿನ ನೂತನ ಪದಾಧಿಕಾರಿಗಳ ತಂಡವನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಆರಿಫ್ ಬೆಳ್ಳಾರೆ, ನಿಕಟಪೂರ್ವಾಧ್ಯಕ್ಷರಾಗಿ ವಿಶ್ವನಾಥ.ಕೆ, ನಿಯೋಜಿತ ಅಧ್ಯಕ್ಷರಾಗಿ ಗಣೇಶ್ ಕುಕ್ಕುತಡಿ, ಕಾರ್ಯದರ್ಶಿಯಾಗಿ ಪ್ರಶಾಂತ್ ತಂಟೆಪ್ಪಾಡಿ ಹಾಗೂ ಕೋಶಾಧಿಕಾರಿಯಾಗಿ ರವೀಂದ್ರ ಗೌಡ ಆಯ್ಕೆಯಾಗಿದ್ದಾರೆ ಎಂದು ಜು.18ರಂದು ಸುಳ್ಯದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

. . . . . . . . .

ಕ್ಲಬ್ ನ ಸರ್ಜೆಂಟ್ ಎಟ್ ಆರ್ಮ್ಸ್ ಆಗಿ ನವೀನ್ ಕುಮಾರ್ ರೈ ತಂಬಿನಮಕ್ಕಿ, ಲರ್ನಿಂಗ್ ಫೆಸಿಲಿಟೇಟರ್ ಆಗಿ ಪ್ರಭಾಕರ ಆಳ್ವ, ಕ್ಲಬ್ ಅಡ್ಮಿನಿಸ್ಟ್ರೇಷನ್ ಚೇರ್ಮನ್ ಆಗಿ ವಿನಯಕುಮಾರ್, ರೋಟರಿ ಫೌಂಡೇಶನ್ ಚೇರ್ಮನ್ ಆಗಿ ಶಶಿಧರ್, ಸದಸ್ಯತ್ವ ಅಭಿವೃದ್ಧಿ ಚೇರ್ಮನ್ ಆಗಿ ಎ.ಕೆ. ಮಣಿಯಾಣಿ, ಸಾರ್ವಜನಿಕ ಸಂಪರ್ಕ ಚೇರ್ಮನ್ ಆಗಿ ಪದ್ಮನಾಭ ಬೀಡು, ಸೇವಾ ಯೋಜನೆಗಳ ಚೇರ್ಮನ್ ಆಗಿ ಚಂದ್ರಶೇಖರ ರೈ ಬಜನಿ, ಸಂಘ ಸೇವೆ ನಿರ್ದೇಶಕರಾಗಿ ಧನರಾಜ್ ಕುಮಾರ್, ಸಮುದಾಯ ಸೇವೆ ನಿರ್ದೇಶಕರಾಗಿ ಬಾಲಕೃಷ್ಣ ಮಡ್ತಿಲ, ವೃತ್ತಿ ಸೇವೆ ನಿರ್ದೇಶಕರಾಗಿ ಹನೀಫ್ ಬೆಳ್ಳಾರೆ, ಅಂತಾರಾಷ್ಟ್ರೀಯ ಸೇವೆ ನಿರ್ದೇಶಕರಾಗಿ ನಟರಾಜನ್ ಹಾಗೂ ಯುವಜನ ಸೇವೆ ನಿರ್ದೇಶಕರಾಗಿ ವೀರನಾಥ್ ಕಾರ್ಯನಿರ್ವಹಿಸಲಿದ್ದಾರೆ.

. . . . . . .

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 25ರಂದು ಸಂಜೆ 7:00 ಗಂಟೆಗೆ ಬೆಳ್ಳಾರೆಯ ದೇವಿ ಹೈಟ್ಸ್‌ನಲ್ಲಿ ನಡೆಯಲಿದೆ. ಪೂರ್ವ ಜಿಲ್ಲಾ ಗವರ್ನರ್ ಎ.ಆರ್. ರವೀಂದ್ರ ಭಟ್ ಅವರು ಪದಗ್ರಹಣಾಧಿಕಾರಿಯಾಗಿ ಭಾಗವಹಿಸಲಿದ್ದು, ವಲಯದ ಸಹಾಯಕ ಗವರ್ನರ್ ಆನಂದ ಖಂಡಿಗ, ರೋನಲ್ ಲೆಫ್ಟಿನೆಂಟ್ ಚಂದ್ರಶೇಖರ ರೈ ಬಜನಿ ಹಾಗೂ ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷೆ ಲತಾ ಮಧುಸೂದನ್ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು.

2008ರಲ್ಲಿ ಆರಂಭಗೊಂಡಿರುವ ರೋಟರಿ ಕ್ಲಬ್ ಬೆಳ್ಳಾರೆ ಟೌನ್ 19ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಕಳೆದ ಸಾಲಿನಲ್ಲಿ ಕೈಗೊಂಡ ಸಮಾಜಮುಖಿ ಕಾರ್ಯಗಳನ್ನು ಪರಿಗಣಿಸಿ ರೋಟರಿ ಜಿಲ್ಲೆ 3181 ವತಿಯಿಂದ ಕ್ಲಬ್‌ಗೆ ‘ಪ್ಲಾಟಿನಂ ಪ್ಲಸ್ ಕ್ಲಬ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕಾರ್ಯಕ್ರಮದಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪುಷ್ಪಾವತಿ.ಕೆ ಹಾಗೂ ಬೆಳ್ಳಾರೆಯ ಪವರ್‌ಮ್ಯಾನ್ ಜೋಸೆಫ್ ಮಣಿಕ್ಕರ ಅವರನ್ನು ಸನ್ಮಾನಿಸಲಾಗುವುದು. ಜೊತೆಗೆ ಸಮುದಾಯ ಸೇವೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದರೊಂದಿಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಾಲಿನಲ್ಲಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಅವರ ಆಶಯದಂತೆ ಶಿಕ್ಷಣ ಮತ್ತು ಯುವಜನ ಸಬಲೀಕರಣ, ಆರೋಗ್ಯ ರಕ್ಷಣೆ, ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕ್ಲಬ್ ಯೋಜನೆ ರೂಪಿಸಿದೆ. ಅಂತಾರಾಷ್ಟ್ರೀಯ ಅಧ್ಯಕ್ಷ ಒಲಯಿಂಕ ಹಕೀಮ್ ಬಬೋಲಾ ಅವರ ‘Create Lasting Impact’ ಧ್ಯೇಯವಾಕ್ಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಆರೀಫ್, ವಿಶ್ವನಾಥ.ಕೆ, ಪ್ರಶಾಂತ್ ತಂಟೆಪ್ಪಾಡಿ, ರವೀಂದ್ರ ಗೌಡ, ಶಶಿಧರ್ ಬಿ.ಕೆ, ಚಂದ್ರಶೇಖರ ರೈ ಬಜನಿ, ಎ.ಕೆ.ಮಣಿಯಾಣಿ, ಪದ್ಮನಾಭ ಬೀಡು ಹಾಗೂ ವಿನಯಕುಮಾರ್ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading