ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ವಲಯ ಉಪಾಧ್ಯಕ್ಷರ ಎರಡನೇ ಅಧೀಕೃತ ಭೇಟಿ, ಟೀ-ಶರ್ಟ್ ಬಿಡುಗಡೆ

ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಜೇಸಿಐ ಭಾರತ ವಲಯ 15, ನೇತ್ರಾವತಿ (ರಿಜನ್ -ಬಿ) ಇದರ ಉಪಾಧ್ಯಕ್ಷರಾದ ಜೇಸಿ ಸೆನೆಟರ್ ಜಿತೇಶ್ ಪಿರೆರಾ ರವರ ಎರಡನೇ ಅಧೀಕೃತ ಭೇಟಿ ಕಾರ್ಯಕ್ರಮ ಜು. 18ರಂದು ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷ ನವೀನ್ ಕುಮಾರ್ ಅವರ ನಾರ್ಕೋಡು ನಿವಾಸದಲ್ಲಿ ನಡೆಯಿತು.

. . . . . . . . .

ಘಟಕದ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿ ಇದರ ಅಧ್ಯಕ್ಷೆ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೊಂಟಡ್ಕ ವಹಿಸಿ ಸಭೆಯನ್ನು ನಡೆಸಿಕೊಟ್ಟರು. ವಲಯ ಉಪಾಧ್ಯಕ್ಷರು ತಮ್ಮ ಭೇಟಿಯಲ್ಲಿ ಘಟಕದ ಕಾರ್ಯ ವೈಖರಿಗಳನ್ನು ಶ್ಲಾಘಿಸಿದರು. ಜೇಸಿಐ ಭಾರತದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸಭೆಯಲ್ಲಿ ಮಾಹಿತಿಯನ್ನು ನೀಡಿದರು. ಈ ಸಂಧರ್ಭದಲ್ಲಿ ಘಟಕದ ಟೀಶರ್ಟ್‌ನ್ನು ವಲಯ ಉಪಾಧ್ಯಕ್ಷರು ಬಿಡುಗಡೆ ಗೊಳಿಸಿದರು.

. . . . . . .

ವೇದಿಕೆಯಲ್ಲಿ ಜೇಸಿಐ ಭಾರತದ ಪೂರ್ವ ವಲಯಾಧ್ಯಕ್ಷರೂ ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷ ಪಿಪಿಪಿ ಅಶೋಕ್ ಚೂಂತಾರು, ನಿಕಟಪೂರ್ವ ಅಧ್ಯಕ್ಷ ಸುರೇಶ್ ಕಾಮತ್, ಕಾರ್ಯದರ್ಶಿ ತಾರಾ ಮಾದವ ಚೂಂತಾರು ಹಾಗೂ ಮಾಧವ ಮುಡೂರು ಉಪಸ್ಥಿತರಿದ್ದರು.

ಪೂರ್ವಾಧ್ಯಕ್ಷ ಗುರುರಾಜ್ ಅಜ್ಜಾವರ ವೇದಿಕೆಗೆ ಆಹ್ವಾನಿಸಿದರು. ಯಶಿಕಾ ಚೂಂತಾರು ಜೇಸಿ ವಾಣಿ ವಾಚಿಸಿದರು. ಪೂರ್ವಾಧ್ಯಕ್ಷ ನವೀನ್ ಕುಮಾರ್ ಸ್ವಾಗತಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading