ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹಿತಾ ಗೋಳ್ಯಾಡಿ 

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (NEET-2026) ಸುಳ್ಯದ ಹೆಮ್ಮೆಯ ಪ್ರತಿಭೆ ಹಿತಾ ಗೋಳ್ಯಾಡಿ ಅವರು 630 ( All India Rank-3419, Category Rank- 1327) ಅಂಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಹಿಂದೆ ನಡೆದ JEE MAIN ಪರೀಕ್ಷೆಯಲ್ಲಿ 96.58 percentile ಪಡೆದಿದ್ದಾರೆ ಹಾಗೂ KCET ಪರೀಕ್ಷೆಯಲ್ಲಿ Veterinary – 1569, Naturopathy And Yoga – 900, BSc Forestry – 1403, BPT -1403, BSc Agriculture – 1345, BPO – 1265 Rank ಗಳಿಸಿರುತ್ತಾರೆ.

. . . . . . . . .

ಹಾಗೆಯೇ ಈ ಹಿಂದೆ ನಡೆದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲೂ 590 ಅಂಕಗಳನ್ನು ಗಳಿಸಿದ್ದ ಹಿತಾ, ರಾಜ್ಯಕ್ಕೇ 10ನೇ ರಾಂಕ್ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದರು. ಇದೀಗ ನೀಟ್ ಪರೀಕ್ಷೆಯಲ್ಲೂ ತಮ್ಮ ನಿರಂತರ ಪರಿಶ್ರಮ ಹಾಗೂ ಪ್ರತಿಭೆಯನ್ನು ಸಾಬೀತುಪಡಿಸಿ, ವೈದ್ಯಕೀಯ ಶಿಕ್ಷಣದ ಕನಸಿನತ್ತ ಮುನ್ನಡೆದಿದ್ದಾರೆ. ಈಕೆ ಕೆನರಾ ವಿಕಾಸ್ ಪೀಯು ಕಾಲೇಜ್ ಮಂಗಳೂರು ಇಲ್ಲಿಯ ವಿದ್ಯಾರ್ಥಿನಿ, ಅಲೆನ್ ಕೋಚಿಂಗ್ ಸೆಂಟರ್ನಲ್ಲಿ ತರಬೇತಿ ಪಡೆದಿರುತ್ತಾರೆ . ಈಕೆ ಬ್ಲೆಸ್ಡ್
ಕುರಿಯಕೋಸ್ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿ.
ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ವಸಂತಮಾಲ ಮತ್ತು ದಿನೇಶ ಗೊಳ್ಯಾಡಿ ಅವರ ಪುತ್ರಿ ಹಾಗೂ ಕಲ್ಮ ಕಾರು ಗ್ರಾಮದ ನಿವೃತ್ತ ಶಿಕ್ಷಕರಾದ ಮೇದುವನೆ ಜನಾರ್ಧನ ಗೌಡ ಹಾಗೂ ಶ್ರೀಮತಿ ಕಾವೇರಿ ಅವರ ಮೊಮ್ಮಗಳು . ನಿರಂತರ ಅಧ್ಯಯನ ಮತ್ತು ಶಿಸ್ತುಬದ್ಧ ಸಿದ್ಧತೆಯೇ ಇವರ ಈ ಸರಣಿ ಸಾಧನೆಗೆ ಕಾರಣವಾಗಿದ್ದು, ಹಿತಾ ಗೋಳ್ಯಾಡಿ ಅವರ ಈ ಮಹೋನ್ನತ ಸಾಧನೆಗೆ ವ್ಯಾಪಕ ಪ್ರಶಂಸೆ ಹಾಗೂ ಅಭಿನಂದನೆಗಳು ಹರಿದುಬರುತ್ತಿವೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading