ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ : 18-07-2026 ಗುರುವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ
ಮಂಡೆಕೋಲು, ಸುಳ್ಯ
ಮೊ: 9591969197

*01,🐏ಮೇಷರಾಶಿ🐏*
📃,ಮನೆಯಿಂದ ಹೊರಹೋಗುವಾಗ ನಿತ್ಯ ಉಪಯೋಗಿಸುವ ವಸ್ತುಗಳ ವಿಚಾರದಲ್ಲಿ ಎಚ್ಚರಿಕೆಯಿಂದಿರಿ, ನೀವು ಯಾವುದೇ ಬೆಲೆಬಾಳುವ ವಸ್ತುಗಳನ್ನು ಇಂದು ಕಳೆದುಕೊಳ್ಳಬಹುದು. ಕುಟುಂಬದಲ್ಲಿ ನೀವು ಯಾವುದೇ ನಿರ್ಧಾರವನ್ನು ಶಾಂತವಾಗಿ ತೆಗೆದುಕೊಳ್ಳಬೇಕು. ವಾಹನ ಚಾಲನೆ ಮಾಡುವಾಗ ಮತ್ತು ಪ್ರಯಾಣದಲ್ಲಿ ಎಚ್ಚರದಿಂದ ಇರಿ, ಗಮನಿಸಿ:-ಇಂದು ಸಕಾರಾತ್ಮಕವಾಗಿರುವ ಮತ್ತು ಬೆಂಬಲ ನೀಡುವ ಸ್ನೇಹಿತರೊಂದಿಗೆ ಹೆಚ್ಚು ಮಾತನಾಡಿ, ಪರಿಹಾರ:-ನಿಮ್ಮ ಕುಲ ದೇವರ ಪ್ರಾರ್ಥನೆ ಮಾಡಿ,

. . . . . . . . .

*02,🐂ವೃಷಭರಾಶಿ🐂*
📃,ಏಕಾಂತಮಯವಾದ ಸ್ಥಳವನ್ನು ಬಯಸಿ ಹೋಗಲು ಪ್ರಯತ್ನಿಸುವಿರಿ. ಆದರೆ ಒಂಟಿತನವೂ ಬೇಸರವನ್ನುಂಟು ಮಾಡುವುದು. ನಿಮ್ಮ ಒಳಗಿನ ತುಮುಲಗಳನ್ನು ಸ್ನೇಹಿತರ ಬಳಿ ಇಲ್ಲವೆ ಬಂಧುಗಳ ಬಳಿ ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಿ, ವ್ಯಾಪಾರ ಮಾಡುವ ಜನರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು, ಗಮನಿಸಿ:- ಇಂದು ಅನಗತ್ಯ ಆಲೋಚನೆಗಳನ್ನು ಮಾಡ ಬೇಡಿ, ಪರಿಹಾರ:-ಶ್ರೀ ಹನುಮ ದೇವರ ಸ್ಮರಣೆ ಮಾಡಿ,

. . . . . . .

*03,👥ಮಿಥುನರಾಶಿ👥*
📃,ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಾಧ್ಯತೆ ಇರುವುದು. ಉದ್ಯೋಗದಲ್ಲಿ ಉನ್ನತಿಗೆ ಸಂಬಂದಿಸಿದ ಶುಭ ಸಮಾಚಾರವನ್ನು ಪಡೆಯುವಿರಿ, ನಿಮ್ಮ ಎಲ್ಲಾ ಕೆಲಸಗಳಿಂದ ನಿಮ್ಮ ಮನಸ್ಸಿಗೆ ಇಂದು ಸಂತೋಷವಾಗಿರುತ್ತದೆ. ನಿಮ್ಮ ಸಾಮಾನ್ಯ ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ ತಾಳ್ಮೆಯಿಂದಿರಿ, ಗಮನಿಸಿ:-ಇಂದು ನಿಮ್ಮ ಸ್ನೇಹಿತರೊಬ್ಬರು ದೊಡ್ಡ ಮೊತ್ತದ ಧನಸಹಾಯವನ್ನು ಕೇಳಬಹುದು, ಪರಿಹಾರ:-ಶ್ರೀ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ,

*04,🦀ಕಟಕ ರಾಶಿ🦀*
📃,ಯೋಗ್ಯವಾದುದನ್ನು ಮಾಡುವ ಕ್ರಿಯಾಶೀಲತೆ ನಿಮ್ಮಲ್ಲಿದೆ. ಸಕಾರಾತ್ಮಕವಾಗಿ ಮುಂದುವರಿಯಿರಿ. ಭಗವಂತನು ನಿಮ್ಮ ಮೇಲೆ ಕರುಣೆ ತೋರುವನು. ಇಂದು ನೀವು ವ್ಯಾಪಾರ ವ್ಯವಹಾರದಲ್ಲಿ ಕೆಲವು ಸವಾಲುಗಳಿಂದ ಸಮಸ್ಯೆಗಳನ್ನು ಎದುರಿಸುತ್ತೀರಿ, ಗಮನಿಸಿ:- ಇಂದು ನೀವು ಶ್ರಮ ಮತ್ತು ತಾಳ್ಮೆಯ ಮೂಲಕ ನಿಮ್ಮ ಗುರಿಗಳನ್ನು ತಲುಪುತ್ತೀರಿ, ಪರಿಹಾರ:-ಶ್ರೀ ರಾಘವೇಂದ್ರ ಸ್ವಾಮಿಯನ್ನು ಪ್ರಾರ್ಥಿಸಿ,

*05,🦁ಸಿಂಹ ರಾಶಿ🦁*
📃,ಹೆಚ್ಚಿನ ಉತ್ಸಾಹ, ಶಕ್ತಿ, ಸಾಮರ್ಥ್ಯವನ್ನು ಪಡೆಯುವ ನಿಮ್ಮ ಕೆಲಸವೊಂದು ಈ ದಿನ ಕೈಗೂಡಲಿದೆ. ಸಕಾರಾತ್ಮಕವಾದ ಪ್ರಸಿದ್ಧಿಗೆ ದಾರಿ ಸುಗಮವಾಗಲಿದೆ. ಇದು ನೀವು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತ ಅವಕಾಶ ಕೂಡಿಬರಬಹುದು. ವಿವಿಧ ಮೂಲಗಳಿಂದ ಹಣ ಬರುವುದು, ಗಮನಿಸಿ:-ನಿಮಗಿಂತ ಹೆಚ್ಚಾಗಿ ಇತರರ ಕೆಲಸಗಳತ್ತ ಗಮನ ಹರಿಸುವುದರಿಂದ ನೀವು ತೊಂದರೆಗೆ ಸಿಲುಕಬಹುದು, ಪರಿಹಾರ:- ಇಂದು ಸಂಜೆ ನವಗ್ರಹ ಪ್ರದಕ್ಷಿಣೆ ಮಾಡಿ, 

*06,👩‍🦳ಕನ್ಯಾ ರಾಶಿ👩‍🦳*
📃,ಅನೇಕ ದಿನಗಳಿಂದ ನಡೆಯುತ್ತಿರುವ ವ್ಯಾಜ್ಯಕ್ಕೆ ಹಲವು ಬಗೆಯ ನಾಟಕೀಯ ತಿರುವುಗಳು ಸಿಗಬಹುದು. ಇದರಿಂದ ಕೆಲಸ ಕಾರ್ಯಗಳಿಗೆ ಅಡೆತಡೆಗಳು ಉಂಟಾಗುವುವು. ಬೇರೆಯವರೊಂದಿಗೆ ನಿಮ್ಮ ಕೆಲಸಗಳನ್ನು ಅಂತಿಮಗೊಳಿಸುವಾಗ ಅವರು ನಿಮ್ಮನ್ನು ಕೆಲವು ಸಮಸ್ಯೆಗೆ ಸಿಲುಕಿಸಬಹುದು, ಗಮನಿಸಿ:-ಇಂದು ನೀವು ಇತರರ ಮಾತುಗಳನ್ನು ನಂಬಿಹೂಡಿಕೆ ಮಾಡಿದಲ್ಲಿ ಆರ್ಥಿಕನಷ್ಟದಸಾಧ್ಯತೆಯಿದೆ ಜಾಗ್ರತೆ ವಹಿಸಿ, ಪರಿಹಾರ:-ನಿಮ್ಮ ಕುಲದೇವರ ಪ್ರಾರ್ಥನೆ ಮಾಡಿ,

*07,⚖️ತುಲಾ ರಾಶಿ⚖️*
📃,ನಿಮ್ಮ ಒಳಮನಸ್ಸಿನ ಮಹತ್ವಾಕಾಂಕ್ಷೆಗಳಾದ ಅಧಿಕಾರ ಮತ್ತು ಜನಪ್ರಿಯತೆಗಳು ನಿಮ್ಮ ಆತುರದಿಂದ ಹಾಳಾಗುವುವು. ಈ ಬಗ್ಗೆ ಯೋಚಿಸಿ ಹೆಜ್ಜೆಯನ್ನಿಡಿ. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಒಳ್ಳೆಯದು. ನಿಮ್ಮ ಒಡಹುಟ್ಟಿದವರೊಂದಿಗೆ ಯಾವುದೇ ಜಗಳವಾಡುವುದನ್ನು ನೀವು ಇಂದು ತಪ್ಪಿಸಬೇಕು, ಗಮನಿಸಿ:-ಇಂದು ನೀವು ಬಂದುಮಿತ್ರರನ್ನು ಭೇಟಿ ಮಾಡುವ ಸಾಧ್ಯತೆಯಿದೆ, ಪರಿಹಾರ:-ಶ್ರೀದುರ್ಗಾಪರಮೇಶ್ವರಿಯನ್ನು ಪೂಜಿಸಿ,

*08,🦂ವೃಶ್ಚಿಕ ರಾಶಿ🦂*
📃,ಉತ್ತಮ ವಿಚಾರವಾಗಿ ನೀವು ಒಳ್ಳೆಯ ನೆರೆಹೊರೆಯವರನ್ನು ಗೆಳೆಯರನ್ನಾಗಿ ಪಡೆದುಕೊಳ್ಳುವಿರಿ. ನೀವಾಡುವ ಮಾತುಗಳಿಂದ ಅವರು ಪ್ರಭಾವಿತರಾಗಿ ನಿಮಗೆ ಸಹಾಯ ನೀಡುವರು ಮಕ್ಕಳ ಆಟಪಾಠಗಳಿಂದ ಸಂತೋಷ ಹೊಂದುವಿರಿ, ಗಮನಿಸಿ:- ಇಂದು ನಿಮ್ಮ ಸ್ಥಗಿತಗೊಂಡ ಕೆಲಸ ನಿಮ್ಮ ಸ್ನೇಹಿತರಿಂದ ಪೂರ್ಣಗೊಳ್ಳುತ್ತದೆ, ಪರಿಹಾರ:-ನಿಮ್ಮ ಗುರುಗಳ ಆಶೀರ್ವಾದ ಪಡೆಯಿರಿ,

*09,🏹ಧನುಸ್ಸುರಾಶಿ🏹*
📃,ಉತ್ತಮ ಸಮಾಜದ ಸಂಘಟನೆಗೆ ಕಾರಣರಾಗಿ ಪ್ರಶಂಸೆ ಗಳಿಸುವ ಸಾಧ್ಯತೆ ಇದೆ. ನಿಮ್ಮಿಂದ ದೂರವಾಗಿದ್ದ ಸ್ನೇಹಿತರು ಪುನಃ ನಿಮ್ಮ ಸ್ನೇಹ ಹಸ್ತಕ್ಕಾಗಿ ಕೈಚಾಚುವರು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭ ಎದುರಾಗುವುವು ಮತ್ತು ನೀವು ಈ ಹಿಂದೆ ಹೂಡಿಕೆಯನ್ನು ಮಾಡಿದ್ದರೆ, ಅದರಲ್ಲಿ ನಿಮಗೆ ಲಾಭವಾಗುವುದು. ಗಮನಿಸಿ:- ಇಂದು ಆರೋಗ್ಯದ ವಿಚಾರದಲ್ಲಿ ಏರಿಳಿತಗಳು ಉಂಟಾಗುವ ಸಾಧ್ಯತೆ ಇದೆ,  ಪರಿಹಾರ:-ಸಾಯಿ ಬಾಬಾರ ದೇವಾಲಯದಲ್ಲಿಸಿಹಿಹಂಚಿ,

*10,🐊ಮಕರ ರಾಶಿ🐊*
📃,ಅನೇಕ ರೀತಿಯ ಬದಲಾವಣೆಗಳ ಕುರಿತು ನೀವು ಮರು ಚಿಂತನೆ ಮಾಡಬೇಕಾಗಿದೆ. ಮಕ್ಕಳು ಮಾಡುವ ತಪ್ಪಿಗೆ ನಿಮಗೆ ಬೇಸರವುಂಟಾಗುವುದು. ಕುಟುಂಬದಲ್ಲಿ ಕಲಹಗಳ ಸಾಧ್ಯತೆ, ಇಂದು ನಿಮಗೆ ಹಣಕಾಸಿನ ಸಮಸ್ಯೆಗಳನ್ನು ತರುತ್ತದೆ, ನೀವು ಮೊದಲು ಯಾವುದೇ ಹೂಡಿಕೆ ಮಾಡಿದ್ದರೆ, ಅದರಿಂದ ನೀವು ನಷ್ಟವನ್ನು ಭರಿಸಬೇಕಾಗಬಹುದು, ಗಮನಿಸಿ:-ಇಂದುಆರೋಗ್ಯದ ಕಡೆ ಗಮನಹರಿಸಿ,  ಪರಿಹಾರ:-ಶ್ರೀ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ,

*11,⚱️ಕುಂಭ ರಾಶಿ⚱️*
📃,ಅಧ್ಯಾತ್ಮದ ಓದು ಹೊಸ ರೀತಿಯ ಚಿಂತನೆಗಳಿಗೆ ನಿಮ್ಮನ್ನು ಸಂವೇದಿಸಲು ಸೂಕ್ತವಾದ ದಿನವಾಗಿದೆ. ನಿಮ್ಮ ಮನಸ್ಸಿನ ತಾಕಲಾಟಕ್ಕೆ ಅಧ್ಯಾತ್ಮದ ಓದು ಪರಿಹಾರ ಸೂಚಿಸಬಲ್ಲದು. ಆದಷ್ಟು ಮೌನವನ್ನು ಆಚರಿಸುವುದು ಒಳ್ಳೆಯದು. ಸಾಮಾಜಿಕ ಜೀವನವು ಇಂದು ಸುಖಮಯವಾಗಿರುವುದು ಜನರು ಇಂದು ನಿಮ್ಮ ಸೇವೆಯನ್ನು ಬಯಸುವರು, ಗಮನಿಸಿ:-ರಾಜಕೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಇಂದು ಜಾಗರೂಕರಾಗಿರಬೇಕು, ಪರಿಹಾರ:-ಗುರುರಾಯರ ದರ್ಶನ ಮಾಡಿ,

*12,🐬ಮೀನ ರಾಶಿ🐬*
📃,ನಿಮ್ಮದೇ ಅದ ವಿಶೇಷ ಆಲೋಚನೆಗಳು ನಿಮಗೆ ಧನಲಾಭ ವಿಚಾರದಲ್ಲಿ ಬೆಂಬಲಿಸಬಲ್ಲವು. ನಿಮ್ಮ ಆತ್ಮೀಯ ಗೆಳೆಯರು ಇಲ್ಲವೆ ಬಂಧುಗಳು ನಿಮಗೆ ಸಹಾಯ ಹಸ್ತ ನೀಡುವರು. ಹಣಕಾಸಿನ ಪರಿಸ್ಥಿತಿ ಸುಧಾರಿಸುವುದು. ಹಣದ ವಿಷಯದಲ್ಲಿ, ನೀವು ವ್ಯವಹಾರವನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ, ಗಮನಿಸಿ:-ಸಂಗೀತ ಮತ್ತು ಚಿತ್ರಕಲೆಗಾರರಿಗೆ ವಿಶೇಷ ಅನುಕೂಲವಾಗಲಿದೆ, ಪರಿಹಾರ:-ಶ್ರೀ ದುರ್ಗಾಸ್ತೋತ್ರವನ್ನು ಪಠಿಸಿ,


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading