ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿಗೆ ಕೋಟೆ ಪೌಂಡೇಶನ್ ವತಿಯಿಂದ ವಿಜ್ಞಾನ ಪ್ರಯೋಗಾಲಯಕ್ಕೆ ಮೂರು ಲಕ್ಷಕ್ಕೂ ಅಧಿಕ ಮೊತ್ತದ ಉಪಕರಣಗಳ ಕೊಡುಗೆ

ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿಗೆ ಜು.15 ಬುಧವಾರದಂದು ಕೋಟೆ ಪೌಂಡೇಶನ್ ವತಿಯಿಂದ ಸುಮಾರು ಮೂರು ಲಕ್ಷಕ್ಕೂ ಅಧಿಕ ಮೊತ್ತದ ಉಪಕರಣಗಳನ್ನು ರಮೇಶ್ ಸಿ.ಕೆ ಡೈರೆಕ್ಟರ್ ಆಫ್ ಪ್ರೊಜೆಕ್ಟ್ ಆಪರೇಷನ್ ಕೋಟೆ ಪೌಂಡೇಶನ್ ವಿಜ್ಞಾನ ಪ್ರಯೋಗಾಲಯಕ್ಕೆ ಹಸ್ತಾಂತರಿಸಿದರು. ಇವರಿಗೆ ಸಂಸ್ಥೆಯ ವತಿಯಿಂದ ಸನ್ಮಾನ ಏರ್ಪಡಿಸಲಾಯಿತು. ನಂತರ ಮಾತನಾಡಿದ ಅವರು “ಗ್ರಾಮೀಣ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವುದು ಕೋಟೆ ಪೌಂಡೇಶನ್ ಧ್ಯೇಯವಾಗಿದೆ” ಎಂದರು. ನಂತರ ನಿಕಟಪೂರ್ವ ಸಂಚಾಲಕರಾದ ಕೆ.ಆರ್ ಗಂಗಾಧರ “ಕೋಟೆ ಪೌಂಡೇಶನ್ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾದದ್ದು” ಎಂದು ನುಡಿದರು.

. . . . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿಗಳಾದ ಅಬ್ದುಲ.ಎ ವಹಿಸಿದ್ದರು.
ಈ ಸಂದರ್ಭದಲ್ಲಿ ಅಸ್ಸಿಟೆನ್ಸ್ ಡೈರೆಕ್ಟರ್ ಆಫ್ ಕೋಟೆ ಪೌಂಡೇಶನ್ ಜಯಂತ್ ಬಿ.ವೈ, ಗಣಪಯ್ಯ, ವೆಂಕಟರಾಜ್ ಮತ್ತು ಮುಖ್ಯ ಗುರುಗಳಾದ ಸೋಮಶೇಖರ್ ಉಪಸ್ಥಿತರಿದ್ದರು.
ರಮೇಶ್ ಎಸ್ ಪ್ರಾಂಶುಪಾಲರು ಸ್ವಾಗತಿಸಿದರು. ಸುರೇಶ್ ವಾಗ್ಲೆ ವಂದಿಸಿದರು. ಲಿಂಗಪ್ಪ.ಎಂ ಕಾರ್ಯಕ್ರಮ ನಿರೂಪಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading