ಜು.18 : ಗುತ್ತಿಗಾರಿನಲ್ಲಿ ಜೇಸಿಐ ಪಂಜ ಪಂಚಶ್ರೀ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ

ಗುತ್ತಿಗಾರು : ಜೇಸಿಐ ಪಂಜ ಪಂಚಶ್ರೀ ನೇತೃತ್ವದಲ್ಲಿ ಹಾಗೂ ಗ್ರಾಮ ಪಂಚಾಯತ್ ಗುತ್ತಿಗಾರು, ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಾದರಿ ಒಕ್ಕೂಟ (ರಿ), ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಗುತ್ತಿಗಾರು ಘಟ ಸಮಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಗುತ್ತಿಗಾರು, ಆದರ್ಶ ಯೂತ್ ಕ್ಲಬ್ (ರಿ) ಹಾಲೆಮಜಲು, ಬಿ.ಎಂ.ಎಸ್. ಆಟೋ ರಿಕ್ಷಾ ಚಾಲಕ-ಮಾಲಕ ಸಂಘ ಗುತ್ತಿಗಾರು, ಲಯನ್ಸ್ ಕ್ಲಬ್ ಗುತ್ತಿಗಾರು, ಯುವಕ ಮಂಡಲ (ರಿ) ಗುತ್ತಿಗಾರು, ವರ್ತಕರ ಸಂಘ ಗುತ್ತಿಗಾರು, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ (ರಿ) ಗುತ್ತಿಗಾರು, ಆದಿಶಕ್ತಿ ಕ್ರೀಡಾ ಮತ್ತು ಕಲಾ ಸಂಘ (ರಿ) ಬಾಕಿಲ ಹಾಗೂ ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ (ರಿ) ಗುತ್ತಿಗಾರು ಇವರ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಜುಲೈ 18ರಂದು ಪೂರ್ವಾಹ್ನ 10 ಗಂಟೆಗೆ ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಭವನದ ಬಳಿ ನಡೆಯಲಿದೆ.

. . . . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೆಎಫ್‌ಎಂ ದೇವಿಪ್ರಸಾದ್ ಚಿಕ್ಮುಳಿ ವಹಿಸಲಿದ್ದಾರೆ.

. . . . . . .

ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಗುತ್ತಿಗಾರು ಆಡಳಿತಾಧಿಕಾರಿ ದೇವರಾಜ್ ಮುತ್ಲಾಜೆ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಶ್ರೀ ನಿತ್ಯಾನಂದ ಮುಂಡೋಡಿ ಹಾಗೂ ಜೇಸಿಐ ಪಂಜ ಪಂಚಶ್ರೀಯ ಪೂರ್ವಾಧ್ಯಕ್ಷ ಜೆಎಫ್‌ಡಿ ಶಶಿಧರ ಪಳಂಗಾಯ ಭಾಗವಹಿಸಲಿದ್ದಾರೆ.

ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading