ವಿದ್ಯುತ್ ಇಲಾಖೆಯ ಖಾಸಗೀಕರಣ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸುಳ್ಯದ ಗುತ್ತಿಗೆದಾರರ ಸಂಘ ಭಾಗಿ

ಕ.ರಾ.ಅ.ಪ.ವಿ.ಗು.ಸಂಘ(ರಿ.) ಬೆಂಗಳೂರು.ದ.ಕ ಜಿಲ್ಲಾ ಸಮಿತಿ, ದ.ಕ.ಜಿಲ್ಲಾ ಸಮಿತಿ-ಉಪಸಮಿತಿ ಸುಳ್ಯ ಇದರ ನೇತೃತ್ವದಲ್ಲಿ ವಿದ್ಯುತ್ ಗುತ್ತಿಗೆದಾರರ ಉಳಿವಿಗಾಗಿ ಹೋರಾಟ ವಿದ್ಯುತ್ ಇಲಾಖೆಯ ಖಾಸಗೀಕರಣ ವಿರೋಧಿಸಿ ಬ್ರಹತ್ ಪ್ರತಿಭಟನೆ ಜೂ.22ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ನಡೆಯಿತು.  ಈ ಪ್ರತಿಭಟನೆಯಲ್ಲಿ ಸುಳ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಸೋಮಶೇಖರ್ ಪೈಕ, ಉಪಾಧ್ಯಕ್ಷರಾದ ದಾಮೋದರ ಮಂಚಿ, ಕಾರ್ಯದರ್ಶಿ ಹರೀಶ್ಚಂದ್ರ ಕೇಪಳಕಜೆ, ಖಜಾಂಜಿ ಮಧುಕಿರಣ್,...

ಸಂಪಾಜೆ : ಕದಿರು ಗದ್ದೆ ನಾಟಿ

ಕೊಡಗು ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದ ವತಿಯಿಂದ ಕದಿರು ಸಂಗ್ರಹಕ್ಕಾಗಿ ಜೂ.22 ರಂದು ಗದ್ದೆ ನಾಟಿ ಕೆಲಸ ಗುಡ್ಡಪ್ಪ ಚೌಟಾಜೆ ಇವರ ಗದ್ದೆಯಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಮತ್ತು ನಿಕಟಪೂರ್ವ ಆಡಳಿತ ಮಂಡಳಿಯವರು ಹಾಗೂ ಗ್ರಾಮದ ಹಲವು ಮಹಿಳಾ ಮತ್ತು ಪುರುಷ ಭಕ್ತಾಧಿಗಳು ಭಾಗವಹಿಸಿ ಸಹಕರಿಸಿದರು.
Ad Widget

ಸುಬ್ರಹ್ಮಣ್ಯದ ಎಸ್‌.ಎಸ್‌.ಪಿ.ಯು ಕಾಲೇಜಿನಲ್ಲಿ ಏಕಕಾಲದಲ್ಲಿ 1008 ವಿದ್ಯಾರ್ಥಿಗಳಿಂದ ಯೋಗಾಸನ ; “ಚಿತ್ತ ಚಾಂಚಲ್ಯ ಹೋಗಲಾಡಿಸಲು ಯೋಗ ಅಡಿಗಲ್ಲು” : ಸೋಮಶೇಖರ ನಾಯಕ್ ಅಭಿಮತ

ಸುಬ್ರಹ್ಮಣ್ಯ : “ಚಿತ್ತ ಚಾಂಚಲ್ಯವನ್ನು ಹೋಗಲಾಡಿಸಲು ಯೋಗ ಪ್ರಧಾನ. ಪ್ರಾಚೀನ ಖುಷಿ ಮುನಿಗಳಿಂದ ಸಂಜಾತ ಯೋಗವು ಸರ್ವರೋಗ ನಿವಾರಕವಾಗಿದೆ. ಪತಂಜಲಿ ಮುನಿಯಿಂದ ಭಾರತದಲ್ಲಿ ಆರಂಭವಾದ ಯೋಗ ಇಂದು ವಿಶ್ವವ್ಯಾಪಿಯಾಗಿದೆ. ಯೋಗವು ಭಾರತವು ವಿಶ್ವಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಸಮಚಿತ್ತ ಮತ್ತು ದೈಹಿಕ ಸಮತೋಲನಕ್ಕೆ ಯೋಗ ಅಸ್ತçವಾಗಿದೆ. ಏಕಾಗ್ರತೆಯೊಂದಿಗೆ ಮಾನಸಿಕ ಸದೃಢತೆ ಸಾಧಿಸಲು ಯೋಗ ಅಡಿಗಲ್ಲು. ಯೋಗದಿಂದ...

ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – “ಯೋಗವು ದೇಹಕ್ಕೆ ಶಕ್ತಿ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ” : ಸವಣೂರು ಸೀತಾರಾಮ ರೈ

ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಚಾಲಕರಾದ ಸವಣೂರು ಕೆ.ಸೀತಾರಾಮ ರೈ ಯವರು ಉದ್ಘಾಟಿಸಿ ಮಾತಾನಾಡಿ, “ಯೋಗವು ದೇಹಕ್ಕೆ ಶಕ್ತಿ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಯೋಗವು ದೇಹದ ರೋಗವನ್ನು ದೂರ ಮಾಡುವ ಸಂಜೀವಿನಿ. ಯೋಗ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು” ಎಂದು ತಿಳಿಸಿದರು. ನಿರಂತರ ಯೋಗ ಕೇಂದ್ರ ದಕ್ಷಿಣ ಕನ್ನಡ...

ಬೆಳ್ಳಾರೆ : ಜ್ಞಾನದೀಪದಲ್ಲಿ ವಿಶ್ವ ಯೋಗ ದಿನಾಚರಣೆ

ಪತಂಜಲಿ ಯೋಗ ಸಮಿತಿ ಬೆಳ್ಳಾರೆಯ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗ ತರಬೇತಿ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆಯಿತು.  ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಯೋಗ ತರಗತಿ ಉದ್ಘಾಟಿಸಿದರು. ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕರುಗಳಾದ ಪ್ರಸಾದ್ ಸೇವಿತ ಮತ್ತು ಪ್ರಭಾ ಯೋಗ ತರಬೇತಿ ನೀಡಿದರು. ಉಪನ್ಯಾಸಕ ವಿಜೇತ್ ಸುವರ್ಣ...

ಅರಂತೋಡು : ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಅರಂತೋಡು : ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಸಂಚಾಲಕರಾದ ಎ.ಸಿ. ವಸಂತ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, "ವಿದ್ಯಾರ್ಥಿಗಳು ಯೋಗವನ್ನು ತಮ್ಮ ಜೀವನದ ಭಾಗವಾಗಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು" ಎಂದು ಶುಭ ಹಾರೈಸಿದರು. ಸಂಸ್ಥೆಯ ಭೌತಶಾಸ್ತ್ರ ಉಪನ್ಯಾಸಕರು ಹಾಗೂ ಯೋಗಪಟುವಾದ ಸುರೇಶ್ ವಾಗ್ಲೆ...

ಅಜ್ಜಾವರ ಹಾಲು ಸೊಸೈಟಿ ಚುನಾವಣೆ – ಸಹಕಾರ ಭಾರತಿ ಗೆಲುವು

ಅಜ್ಜಾವರ ಹಾಲು ಉತ್ಪಾದಕರ ಸಹಕಾರ ಸಂಘ ಇದರ ಮುಂದಿನ 5 ವರ್ಷದ ಆಡಳಿತ ಮಂಡಳಿಗೆ ಜೂ. 21ರಂದು ಚುನಾವಣೆ ನಡೆಯಿತು. ಸಂಘದ ಒಟ್ಟು 2 ಸ್ಥಾನಗಳಿಗೆ ಅವಿರೋಧ ಆಯ್ಕೆಯಾದರೇ ಉಳಿದ 9 ಸ್ಥಾನಗಳಿಗೆ ಚುನಾವಣೆ ನಡೆಯಿತು.‌ ಇದರಲ್ಲಿ ಸಹಕಾರ ಭಾರತೀಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹಿಂದುಳಿದ ವರ್ಗ ಎ. ಮೀಸಲು ಕ್ಷೇತ್ರದ 1 ನಿರ್ದೇಶಕ...

ಗುತ್ತಿಗಾರು : ವರ್ತಕರ ಸಂಘದ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

ಗುತ್ತಿಗಾರು ವರ್ತಕರ ಸಂಘದ ಮಹಾಸಭೆ ಜೂ.20 ರಂದು ಪಂಚಾಯತ್ ಪರಿಶಿಷ್ಟ ವರ್ಗದ ಸಭಾ ಭವನದಲ್ಲಿ ಜರಗಿತು. ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಸಭೆಯಲ್ಲಿ ಗೌರವಿಸಲಾಯಿತು. ನಂತರ ನೂತನ ಆಡಳಿತ ಮಂಡಳಿ ರಚಿಸಲಾಯಿತು.‌ ನೂತನ ಅಧ್ಯಕ್ಷರಾಗಿ ವಿನ್ಯಾಸ್ ಕೊಚ್ಚಿ, ಉಪಾಧ್ಯಕ್ಷರಾಗಿ ಅನಿಲ್ ಕುಮಾರ್, ಕಾರ್ಯದರ್ಶಿಯಾಗಿ ಶಿವರಾಮ ಕರುವಜೆ, ಜೊತೆ ಕಾರ್ಯದರ್ಶಿಯಾಗಿ ಬಿ.ಕೆ ಶ್ರೀಧರ್,...

ನವೀನ್ ಚಾತುಬಾಯಿಯವರಿಗೆ “ಬಸವಜ್ಯೋತಿ ರಾಜ್ಯ ಪುರಸ್ಕಾರ” ಪ್ರಧಾನ

ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಪ್ರಗತಿಪರ ಕೃಷಿಕರಾದ ಸಿ.ಕೆ ನವೀನ್ ಚಾತುಬಾಯಿ ಅವರಿಗೆ ಬೆಂಗಳೂರಿನ ಜ್ಞಾನ ಮಂದಾರ ಎಜ್ಯುಕೇಷನ್ ಟ್ರಸ್ಟ್ ನ ರಜತ ಮಹೋತ್ಸವ ಅಂಗವಾಗಿ “ಬಸವಜ್ಯೋತಿ ರಾಜ್ಯ ಪುರಸ್ಕಾರ” ನೀಡಿ ಗೌರವಿಸಲಾಯಿತು. ಸುಳ್ಯದ ಕನ್ನಡ ಭವನದಲ್ಲಿ ಜೂ.21ರಂದು ಜ್ಞಾನ ಮಂದಾರ ಎಜ್ಯುಕೇಶನ್ ಟ್ರಸ್ಟ್, ಮಿತ್ರ ಯುವಕ ಮಂಡಲ ಕೊಯುಕುಳಿ ಮತ್ತು ಕುರಲ್ ತುಳು ಕೂಟ...

ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ “ಗದ್ದೆಯಲ್ಲಿ ಒಂದು ದಿನ” ಕಾರ್ಯಕ್ರಮ

ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ಅರಂಬೂರು ವಲಯದ ಗೌಡ ಬಾಂಧವರಿಗೆ ವಿವಿಧ ಸ್ಪರ್ಧೆಗಳೊಂದಿಗೆ “ಗದ್ದೆಯಲ್ಲಿ ಒಂದು ದಿನ” ಕಾರ್ಯಕ್ರಮವು ಜೂನ್ 21ರಂದು ಅರಂಬೂರು ಗದ್ದೆಬೈಲುನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕರಾದ ಅಪ್ಪಯ್ಯ ಗೌಡ ಪಡ್ಪು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಡ ಮಹಿಳಾ ಘಟಕದ ಅಧ್ಯಕ್ಷೆ ಡಾ. ಅನುರಾಧಾ ಕುರುಂಜಿ ವಹಿಸಿದ್ದರು. ವೇದಿಕೆಯಲ್ಲಿ...
Loading posts...

All posts loaded

No more posts

error: Content is protected !!