- Friday
- July 17th, 2026
ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಕೆ. ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಕ್ಯಾಬಿನೆಟ್ ಬ್ಯಾಜ್ ತೊಡಿಸುವುದರ ಮೂಲಕ ಅಭಿನಂದಿಸಿ, "ಎಲ್ಲರೂ ಜೊತೆಯಾಗಿ ಸೇರಿಕೊಂಡು ಹೊಂದಾಣಿಕೆಯಿಂದ ಕೆಲಸ ಮಾಡುವುದು ನಾಯಕತ್ವ" ಎಂದು ನುಡಿದರು. ಡಾ. ನರೇಂದ್ರ ರೈ ದೇರ್ಲ ನಿವೃತ್ತ ಪ್ರಾಧ್ಯಾಪಕರು, ಭಾವಾನಾತ್ಮಕ ಶಿಕ್ಷಣಕ್ಕೆ ಮಹತ್ವಕೊಟ್ಟರೆ...
ದೇವಸ್ಥಾನಗಳು ಮತ್ತು ದೈವಸ್ಥಾನಗಳು ಸಮಾಜಕ್ಕೆ ಸಂಸ್ಕಾರ ಮತ್ತು ಧಾರ್ಮಿಕ ಮೌಲ್ಯಗಳನ್ನು ಬೋಧಿಸುವ ಕೇಂದ್ರಗಳಾಗಿದ್ದು, ಎಲ್ಲರನ್ನು ಒಗ್ಗೂಡಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮೀಜಿಗಳು ಹೇಳಿದರು. ಅವರು ಜೂ. 18ರಂದು ಕಲ್ಕುಡ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಧರ್ಮ,...
ಸುಳ್ಯ ತಾಲೂಕಿನ ಕಟ್ಟಕಡೆಯ ಗ್ರಾಮವಾದ ಕೊಲ್ಲಮೊಗ್ರದಲ್ಲಿ ಇರುವಂತಹ ಕಲ್ಮಕಾರು, ಕೊಲ್ಲಮೊಗ್ರು, ಎಲಿಮಲೆ, ಕಂದ್ರಪ್ಪಾಡಿ ಹಾಗೂ ಮಡಪ್ಪಾಡಿ ಸೇರಿದಂತೆ ಐದು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವಂತಹ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಐದು ತಿಂಗಳುಗಳಿಂದ ಯಾವುದೇ ವೈದ್ಯಾಧಿಕಾರಿಗಳಿಲ್ಲ. ಈ ಹಿಂದೆ ಡಾ| ಕುಲದೀಪ್.ಎಂ.ಡಿ ಎಂಬುವವರು ಎರಡೂವರೆ ವರ್ಷಗಳ ಕಾಲ ಅಂದರೆ 2023 ಆಗಸ್ಟ್ ತಿಂಗಳಿನಿಂದ 2026 ಜನವರಿ...
ದೇವಚಳ್ಳ ಗ್ರಾಮದ ಅಡ್ಡನಪಾರೆ (ಪುಳಿಕುಕ್ಕು) ನಿವೃತ್ತ ಶಿಕ್ಷಕ ವೆಂಕಟ್ರಮಣ ಗೌಡ ಅಡ್ಡನಪಾರೆ ಅಲ್ಪ ಕಾಲದ ಅಸೌಖ್ಯದಿಂದ ಇಂದು (ಜೂ.18) ನಿಧನರಾದರು. ಶಿಕ್ಷಕರಾಗಿ ಸೇವೆ ದರ್ಬೆತಡ್ಕ ಶಾಲೆಯಲ್ಲಿ ಸೇವೆ ಆರಂಭಿಸಿದ ಅವರು ಕಂದ್ರಪ್ಪಾಡಿ, ದೊಡ್ಡತೋಟ, ಅರಂತೋಡು, ಗಾಂಧಿನಗರ ಹಾಗೂ ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಹೈಸ್ಕೂಲ್ ಶಿಕ್ಷಕರಾಗಿ ಸೇವೆ ಸಲ್ಕಿಸಿ ನಿವೃತ್ತರಾಗಿದ್ದರು.ಕೆಲ ವರ್ಷದಿಂದ ಪುತ್ತೂರಿನ ಕಲ್ಚರ್ಪೆಯಲ್ಲಿ ನೆಲೆಸಿದ್ದ ಅವರು...
ಸುಳ್ಯದ ಕಲ್ಕುಡ ದೈವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮಕ್ಕೆ ಉದ್ಯಮಿ ನಂದಕುಮಾರ್ ಹೆಚ್.ಎಂ ರವರು ಜೂ.17 ರಂದು ಭೇಟಿ ನೀಡಿದರು. ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್, ಧರ್ಮದರ್ಶಿ ಪಿ.ಕೆ ಉಮೇಶ್ ಹಾಗೂ ಸಮಿತಿ ಸದಸ್ಯರು ಸ್ವಾಗತಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ, ಸುಳ್ಯ...
ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸರಕಾರದ ರಚನೆಗಾಗಿ ಚುನಾವಣೆ ನಡೆಯಿತು. ಚುನಾವಣಾ ಪ್ರಕ್ರಿಯೆಗಳಾದ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ, ಚುನಾವಣಾ ಸಂಹಿತೆ ಜಾರಿ, ಪ್ರಚಾರ, ಅಭ್ಯರ್ಥಿಗಳೊಂದಿಗೆ ಮುಖಾಮುಖಿ ಪ್ರಕ್ರಿಯೆಗಳು ನಡೆದವು. ವಿದ್ಯಾರ್ಥಿ ಮತದಾರರು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದರು. SPL ಸ್ಥಾನಕ್ಕೆ ಐದು ಅಭ್ಯರ್ಥಿಗಳು, ASPL ಹುಡುಗರ ವಿಭಾಗಕ್ಕೆ ಮೂರು...
ಬೆಳ್ಳಾರೆಯ ಪ್ರಮುಖ ಮದುವೆ ಜವುಳಿಗಳ ಹೆಸರಾಂತ ಮಳಿಗೆ ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ಮುಂಗಾರು ಆಫರ್ ಆರಂಭವಾಗಿದ್ದು ವಿಶೇಷ ರಿಯಾಯಿತಿ ದರದ ಮಾರಾಟ ನಡೆಯುತ್ತಿದೆ. ಕೆಲವೇ ದಿನಗಳು ಮಾತ್ರ ಈ ಮುಂಗಾರು ಆಫರ್ ಇರಲಿದೆ. ಅತೀ ಕಡಿಮೆ ಬೆಲೆಯಲ್ಲಿ ಪ್ರತಿದಿನವು ಹೊಸ ಹೊಸ ಆಯ್ಕೆಗಳು ಲಭ್ಯವಿರಲಿದೆ ಎಂದು ಮಾಲಕರು ತಿಳಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾದ ಸುಳ್ಯ ಮಂಡಲದ ಸಭೆಯು ಜೂ.17 ರಂದು ನಡೆಯಿತು. ಬಳಿಕ ಹಿಂದುಳಿದ ವರ್ಗಗಳ ಮೋರ್ಚಾದ ಸುಳ್ಯ ಮಂಡಲದ ಕೋಶಾಧಿಕಾರಿಯಾದ ಪೂರ್ಣಿಮಾ ಸುಂತೋಡು ಅವರ ಪತಿ ಅಪ್ಪಯ್ಯ ಪಾಟಾಳಿಯವರು ಇತ್ತೀಚಿಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದ ಹಿನ್ನೆಲೆ ಅವರ ಮನೆಗೆ ತೆರಳಿದ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಸಮಿತಿಯ ಅಧ್ಯಕ್ಷರು ಮತ್ತು...
ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಹಿಂದುಳಿದ ವರ್ಗಗಳ ಮೋರ್ಚಾದ ಸುಳ್ಯ ಮಂಡಲದ ಹೊಸ ಸಮಿತಿ ಪದಾಧಿಕಾರಿಗಳ ಸಭೆಯು ಜೂ.17 ರಂದು ಸುಳ್ಯದಲ್ಲಿ ನಡೆಯಿತು. ಮಂಡಲ ಅಧ್ಯಕ್ಷರಾದ ವೆಂಕಟ್ ವಲಳಂಬೆ ಅವರು ಹೊಸ ಪದಾಧಿಕಾರಿಗಳ ಘೋಷಣೆ ಮಾಡಿದರು, ಜಿಲ್ಲಾ ಒಬಿಸಿ ಅಧ್ಯಕ್ಷರಾದ ಮಹೇಶ್ ಜೋಗಿ ಹೊಸ ಸಮಿತಿ ಪದಾಧಿಕಾರಿಗಳಿಗೆ ಶುಭ ಹಾರೈಸಿ "ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ...
ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಜೂ.17ರಂದು ಸುಳ್ಯ ಹಿಂದುಳಿದ ಹಿಂದುಳಿದ ವರ್ಗಗಳ ಬಾಲಕಿಯರ ಹಾಸ್ಟೆಲಿಗೆ ತೆರಳಿ ಅಲ್ಲಿನ ಸ್ಥಿತಿಗತಿಯ ಬಗ್ಗೆ ಅರಿತು, ಬಳಿಕ ಸ್ವಚ್ಛತಾ ಕಾರ್ಯದ ಪ್ರಯುಕ್ತ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ಮಹೇಶ್ ಜೋಗಿ, ಪ್ರಧಾನ ಕಾರ್ಯದರ್ಶಿಗಳಾದ ಮೋನಪ್ಪ...
Loading posts...
All posts loaded
No more posts
