ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಿದ್ಯಾರ್ಥಿಸಂಘ ಉದ್ಘಾಟನೆ

ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಕೆ. ಉದ್ಘಾಟಿಸಿದರು.

. . . . . . . . .

ಬಳಿಕ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಕ್ಯಾಬಿನೆಟ್ ಬ್ಯಾಜ್ ತೊಡಿಸುವುದರ ಮೂಲಕ ಅಭಿನಂದಿಸಿ, “ಎಲ್ಲರೂ ಜೊತೆಯಾಗಿ ಸೇರಿಕೊಂಡು ಹೊಂದಾಣಿಕೆಯಿಂದ ಕೆಲಸ ಮಾಡುವುದು ನಾಯಕತ್ವ” ಎಂದು ನುಡಿದರು.

. . . . . . .

ಡಾ. ನರೇಂದ್ರ ರೈ ದೇರ್ಲ ನಿವೃತ್ತ ಪ್ರಾಧ್ಯಾಪಕರು, ಭಾವಾನಾತ್ಮಕ ಶಿಕ್ಷಣಕ್ಕೆ ಮಹತ್ವಕೊಟ್ಟರೆ ವಿದ್ಯಾರ್ಥಿಯು ಪರಿಪೂರ್ಣತೆಯತ್ತ ಹೋಗಲು ಸಾಧ್ಯ ಶಿಕ್ಷಣವೆಂದರೆ ತನ್ನನ್ನು ತಾನು ನೋಡುವುದಲ್ಲ, ಅದರಿಂಧ ಆಚೆ ನೋಡುವುದೇ ಶಿಕ್ಷಣ. ನಾಯಕತ್ವವು ಶಾಲೆಯಲ್ಲಿ ಮುಗಿಯುವುದಿಲ್ಲ ನೀವು ಇಲ್ಲಿ ಕಲಿಯುವ ಶಿಸ್ತು ಜವಾಬ್ದಾರಿ, ಸಮಯ ಪಾಲನೆ, ಪರಿಸರದ ಪ್ರೀತಿ, ಪ್ರಾಮಾಣಿಕತೆಯಿಂದ ಗೌರವವನ್ನು ಕಾಪಾಡಿ ವಿದ್ಯಾರಶ್ಮಿಯ ಪ್ರಭೆಯನ್ನು ವಿಸ್ತರಿಸುವ ವಿದ್ಯಾರ್ಥಿಗಳಾಗಿ ಎಂದು ನುಡಿದರು.
ಸಂಸ್ಥೆಯ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಸಂಘದ ಚುನಾವಣೆಯಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸ, ನಾಯಕತ್ವ ಗುಣ ಬೆಳೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟಿ ಎನ್. ಸುಂದರ್ ರೈ, ರಶ್ಮಿ ಅಶ್ವಿನ್ ಶೆಟ್ಟಿ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರು, ತಾರಾನಾಥ ಕಾಯರ್ಗ ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ ಸದಸ್ಯ ಜೈನುದ್ದೀನ್ ತೋಟದಮೂಲೆ, ತಿಮ್ಮಪ್ಪ ಪೂಜಾರಿ ಭಾಗವಹಿಸಿದರು.
ಕಾರ್ಯಕ್ರಮವನ್ನು 10ನೇ ತರಗತಿಯ ಲಿಬಾ ಫಾತಿಮ ನಿರೂಪಣೆಗೈದು, ಮುಖ್ಯ ಅತಿಥಿಗಳ ಪರಿಚಯವನ್ನು 10ನೇಯ ತರಗತಿಯ ಕೆ.ಎಂ. ಸುಹೈಲ್, ಸಂವಿಧಾನದ ಪೀಠಿಕೆಯನ್ನು 5ನೇ ತರಗತಿ ನಿರೀಕ್ಷಾ ವೈ.ಆರ್. ವಾಚಿಸಿ, ತೇಜಸ್ವಿನಿ ಮತ್ತು ಬಳಗ ಪ್ರಾರ್ಥನೆಯನ್ನು ಸಲ್ಲಿಸಿದರು, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಿಶ್ಮಿತಾ ಸ್ವಾಗತಿಸಿ, ವಿದ್ಯಾರ್ಥಿಸಂಘದ ಅಧ್ಯಕ್ಷೆ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಶ್ರದ್ಧಾ ಕೆ.ಡಿ. ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading